Advertisement
ಮೈಸೂರಿನ ಕೆಆರ್‌ಎಸ್ ಬೃಂದವನ ಮಾದರಿಯಲ್ಲಿ ಮಂಚನಬೆಲೆ ಜಲಾಶಯದ ಬೆಟ್ಟಗುಡ್ಡ ಸೇರಿಸಿಕೊಂಡು ಜಲಾಶಯದ ಹಿಂಭಾಗ ಸುಂದರವಾದ ಪಾರ್ಕ್, ಜಲಪಾತ ನಿರ್ಮಿಸಿ ಜೊತೆಗೆ ಸಾವನದುರ್ಗವನ್ನು ಸೇರಿಸಿಕೊಂಡು ಸುಂದರವಾದ ಐತಿಹಾಸಿಕ ಪ್ರವಾಸಿ ತಾಣವನ್ನಾಗಿಸಲಾಗುವುದು. ಈಗಾಗಲೇ ಕಾವೇರಿ ನಿಗಮದಿಂದ ಗುಜರಾತಿನ ಕಂಪನಿಗೆ ಡಿಪಿಆರ್ ಮಾಡಿಲಿಕ್ಕೆ ವಹಿಸಲಾಗಿದೆ. ಸರ್ಕಾರದ ಸ್ಥಳ ಮತ್ತು ಸಣ್ಣ ನೀರಾವರಿ ಜಾಗವನ್ನು ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
Related Articles
Advertisement
6 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ: ತಾಲೂಕಿನ ಮಾಡಬಾಳ್ ಮತ್ತು ಕಸಬಾ ಜಿಪಂ ವ್ಯಾಪ್ತಿಯಲ್ಲಿ ಒಟ್ಟು 6 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಮಂಚನಬೆಲೆ ಎಸ್‌ಸಿ ಕಾಲೋನಿ ಸಿಸಿ ರಸ್ತೆ ಮತ್ತು ಚರಂಡಿ, ಮಾರೇಗೌಡನದೊಡ್ಡಿಯಿಂದ ರಾಮಕಲ್‌ಪಾಳ್ಯದವರೆಗೆ ರಸ್ತೆ ಮತ್ತು ಚರಂಡಿ, ಸುಂಕುತಿಮ್ಮನಪಾಳ್ಯದ ಎಸ್‌ಸಿ ಕಾಲೋನಿಗೆ ಸಿಸಿ ರಸ್ತೆ ಮತ್ತು ಚರಂಡಿ, ಮಾಡಬಾಳ್‌ನಿಂದ ಮಾನಗಲ್‌ವರೆಗೆ ರಸ್ತೆ, ಗೆಜ್ಜಗಾರಕುಪ್ಪೆಯಿಂದ ಬಸಪ್ಪದೊಡ್ಡಿವರೆಗೆ ರಸ್ತೆ, ಗೆಜ್ಜಗಾರಕುಪ್ಪೆಯಿಂದ ನೇರಳವಾಡಿವರೆಗೆ ರಸ್ತೆ, ಕೊಟ್ಟಗಾರಹಳ್ಳಿ ಎಸ್‌ಸಿ ಕಾಲೋನಿಗೆ ರಸ್ತೆ, ಬೆಳಗವಾಡಿ ಸರ್ಕಾರಿ ಶಾಲಾ ಕೊಠಡಿ ಕಾಮಗಾರಿಗೆ ಶಾಸಕ ಎ.ಮಂಜು ಚಾಲನೆ ನೀಡಿದರು.
ಈ ವೇಳೆಯಲ್ಲಿ ಮಾಡಬಾಳ್ ಜಿಲ್ಲಾ ಪಂಚಾಯ್ತಿ ಸದಸ್ಯೆ ಚಂದ್ರಮ್ಮ, ಕಸಬಾ ಜಿಪಂ ಸದಸ್ಯೆ ನಾಗರತ್ನಮ್ಮ, ತಾಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯಕ್, ಮಾಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಹಂಚೀಕುಪ್ಪೆ ಗ್ರಾಪಂ ಅಧ್ಯಕ್ಷೆ ಮಂಜುಳ, ಮಂಚನಬೆಲೆ ಮೀನುಗಾರರ ಸಂಘದ ಅಧ್ಯಕ್ಷ ಲೋಕೇಶ್, ಚೆಕ್ಕವೆಂಕಟಯ್ಯ, ಬಸವರಾಜು, ಕೋರಮಂಗಲದ ಶ್ರೀನಿವಾಸ್, ಎಸ್.ಕಾಂತರಾಜು, ಮೂಡ್ಲಗಿರಿ, ಮೂರ್ತಿ, ಸಿ.ಎಂ.ಮಾರೇಗೌಡ, ಶಿವಣ್ಣ, ಸಹಾಯಕ ಎಂಜಿನಿಯರ್ ಶಿವಕುಮಾರ್, ನಾರಾಯಣ್, ರವಿಕುಮಾರ್, ವೆಂಕಟೇಶ್, ಶೋಭಾ, ಶಿರಸ್ತೇದಾರ್ ಜಗದೀಶ್, ಕಾಳಪ್ಪ, ಉಮೇಶ್, ಜಗದೀಶ್ ಕುಮಾರ್ ಸೇರಿದಂತೆ ಅನೇಕರು ಹಾಜರಿದ್ದರು.