Advertisement

7 ಲಕ್ಷ ರೂ.ವೆಚ್ಚದಲ್ಲಿ ಕನಕದಾಸ ಪುತ್ಥಳಿ ನಿರ್ಮಾಣ

08:26 AM Jan 25, 2019 | Team Udayavani |

ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ 50 ಲಕ್ಷ ರೂ.ಅಂದಾಜು ಮೊತ್ತದಲ್ಲಿ ಕನಕ ಭವನ ನಿರ್ಮಿಸಲಾಗಿದ್ದು ಶೀಘ್ರದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಶಾಸಕ ಭೀಮಾನಾಯ್ಕ ತಿಳಿಸಿದರು. ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ಕನಕದಾಸರ 531ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವ‌ರು ಮಾತನಾಡಿದರು.

Advertisement

ಕೊಟ್ಟೂರು ರಸ್ತೆಯನ್ನು ಭಕ್ತ ಕನಕದಾಸರ ವೃತ್ತವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಒಟ್ಟು 7 ಲಕ್ಷ ರೂ.ಅಂದಾಜು ಮೊತ್ತದಲ್ಲಿ ಕನಕದಾಸರ ಪುತ್ಥಳಿ ನಿರ್ಮಿಸಲಾಗುವುದು. ವಿಶೇಷ ಅನುದಾನದಡಿ ಕಿತ್ತೂರು ರಾಣಿ ಚನ್ನಮ್ಮ, ವಾಲ್ಮೀಕಿ ಮತ್ತು ಅಂಬೇಡ್ಕರ್‌ ಕಂಚಿನ ಪುತ್ಥಳಿ ನಿರ್ಮಿಸಲಾಗುವುದು. ಈಗಾಗಲೇ ತಾಲೂಕಿನ ಬ್ಯಾಸಿಗೆದೇರಿ ಗ್ರಾಮದಲ್ಲಿ ಸಂಗೊಳ್ಳಿರಾಯಣ್ಣ ಪುತ್ಥಳಿ ಸ್ಥಾಪಿಸಲಾಗಿದೆ. ಕಾತ್ಯಾಯಿನಿ ಮರಡಿ ಬಳಿ 80 ಸೆಂಟ್ಸ್‌ ನಿವೇಶನವನ್ನು ಹಾಲುಮತ ಸಮಾಜದ ಕಲ್ಯಾಣಮಂಟಪಕ್ಕೆ ಒದಗಿಸಲಾಗುವುದು ಎಂದು ತಿಳಿಸಿದರು.

ಕಾಗಿನೆಲೆ ಮಹಾಸಂಸ್ಥಾನಮಠದ ನಿರಂಜನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಹಾಲುಮತ ಸಮಾಜದವರು ಪ್ರಜ್ಞಾವಂತಿಕೆ ಮೆರೆಯಬೇಕು. ಡಿಜೆ ಸಂಸ್ಕೃತಿಯಿಂದ ಯುವಕರು ಹೊರ ಬರಬೇಕಿದೆ. ಕಲ್ಯಾಣ ಮಂಟಪಕ್ಕಿಂತಲೂ ಸಮಾಜದ ವಿದ್ಯಾರ್ಥಿಗಳ ವಸತಿ ನಿಲಯ ನಿರ್ಮಿಸುವುದು ಹೆಚ್ಚು ಸೂಕ್ತ. ದೇವಸ್ಥಾನದ ಗಂಟೆಗಿಂತಲೂ ಶಾಲೆಯ ಗಂಟೆಗಳು ಹೆಚ್ಚು ಕೇಳಿಬರುವುದು ಶೈಕ್ಷಣಿಕ ಪ್ರಗತಿಯ ಸಂಕೇತ. ಜಾತಿ ವ್ಯವಸ್ಥೆಯ ಅನಿಷ್ಠ ಪದ್ಧತಿ ನಿರ್ಮೂಲನೆ ಮಾಡಬೇಕು. ಸತ್ಯವನ್ನು ಮರೆತು ಬದುಕಬಾರದು, ಇತಿಹಾಸವನ್ನು ತಿಳಿದುಕೊಳ್ಳುವ ಅಗತ್ಯವಿದೆ. ಸಮುದಾಯ ಜಾಗೃತಿಯಾಗಬೇಕು. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸ್ವಾವಲಂಬನೆಯ ದಾರಿ ಕಲ್ಪಿಸಬೇಕಿದೆ. ಜಾತಿಗಿಂತಲೂ ನೀತಿ ಮುಖ್ಯ, ಎಲ್ಲ ಸಮಾಜದೊಂದಿಗೆ ಸೌಹಾರ್ದ ಬದುಕು ನಡೆಸಿ. ಸಾಮಾಜಿಕ ಜಾಲತಾಣದಲ್ಲಿ ಯಾವ ಸಮಾಜವನ್ನು ನಿಂದನೆ ಮಾಡಬೇಡಿ. ಸುಸಂಸ್ಕೃತರಾಗಿ ಜೀವನ ನಡೆಸಿ ಎಂದು ಕಿವಿಮಾತು ಹೇಳಿದರು.

ತಾಲೂಕು ಹಾಲುಮತ ಸಮಾಜದ ಅಧ್ಯಕ್ಷ ಬಿ.ಬಸವರಾಜ, ಸಮಾಜದ ಮುಖಂಡ ಮುಟುಗನಹಳ್ಳಿ ಕೊಟ್ರೇಶ್‌, ಬಿಇಒ ಶೇಖರಪ್ಪ ಹೊರಪೇಟೆ ಮಾತನಾಡಿದರು. ಸಮಾಜದ ಗುರುವಿನ ಕೊಟ್ರಯ್ಯ ಒಡೆಯರ್‌, ಕುರಿ ಶಿವಮೂರ್ತಿ, ಕನಕಸೇನೆ ಅಧ್ಯಕ್ಷ ದೊಡ್ಡಬಸಪ್ಪ, ಕೊಟ್ರೇಶ್‌, ತಾಪಂ ಇಒ ಮಲ್ಲಾನಾಯ್ಕ, ತೋಟಗಾರಿಕೆ ಸಹಾಯಕ ನಿರ್ದೇಶಕ ಡಾ| ಪರಮೇಶ್ವರಪ್ಪ, ತಾಪಂ ಅಧ್ಯಕ್ಷೆ ಕೆ.ನಾಗಮ್ಮ, ಉಪಾಧ್ಯಕ್ಷೆ ಕೊಚಾಲಿ ಸುಶೀಲಮ್ಮ ಮಂಜುನಾಥ, ಎಪಿಎಂಸಿ ಅಧ್ಯಕ್ಷ ದೊಡ್ಡಬಸಪ್ಪ, ತಾ.ಪಂ.ಸದಸ್ಯರಾದ ಗೀತಾ ಹುಲುಗಪ್ಪ, ಸೊನ್ನದ ಪ್ರಭಾಕರ್‌, ಶ್ಯಾಮಲಮ್ಮ, ಸಮಾಜದ ಮಾಜಿ ಅಧ್ಯಕ್ಷ ಮೈಲಾರಪ್ಪ, ಕುರುಬ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ, ಜಿಲ್ಲಾ ನಿರ್ದೇಶಕಿ ಸುಶೀಲಮ್ಮ, ವಾಲ್ಮೀಕಿ ಸಮಾಜದ ಮುಖಂಡ ಪವಾಡಿ ಹನುಮಂತಪ್ಪ, ಜಂಬಣ್ಣ, ಜಳಿಕಿ ಗುರುಬಸಪ್ಪ, ಎಪಿಎಂಸಿ ನಿರ್ದೇಶಕ ರಾಮಣ್ಣ, ವರದಾಪುರ ಕುಮಾರ ಇತರರಿದ್ದರು. ಉಪನ್ಯಾಸಕ ಗೂಳೆಪ್ಪ, ಮುಖ್ಯಗುರು ಎಚ್.ದೇವಪ್ಪ, ಶಿಕ್ಷಕ ರಾಮಣ್ಣ ನಿರೂಪಿಸಿದರು.

 ಶ್ರೀನಿರಂಜನಾನಂದಪುರಿ ಸ್ವಾಮೀಜಿ, ಕಾಗಿನೆಲೆ ಮಹಾಸಂಸ್ಥಾನ ಮಠ
ಜಾತಿ ವ್ಯವಸ್ಥೆಯ ಅನಿಷ್ಠ ಪದ್ಧತಿ ನಿರ್ಮೂಲನೆ ಮಾಡಬೇಕು. ಸತ್ಯವನ್ನು ಮರೆತು ಬದುಕಬಾರದು, ಇತಿಹಾಸವನ್ನು ತಿಳಿದುಕೊಳ್ಳುವ ಅಗತ್ಯವಿದೆ. ಸಮುದಾಯ ಜಾಗೃತಿಯಾಗಬೇಕು. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸ್ವಾವಲಂಬನೆಯ ದಾರಿ ಕಲ್ಪಿಸಬೇಕಿದೆ. ಜಾತಿಗಿಂತಲೂ ನೀತಿ ಮುಖ್ಯ, ಎಲ್ಲ ಸಮಾಜದೊಂದಿಗೆ ಸೌಹಾರ್ದ ಬದುಕು ನಡೆಸಿ. ಸಾಮಾಜಿಕ ಜಾಲತಾಣದಲ್ಲಿ ಯಾವ ಸಮಾಜವನ್ನು ನಿಂದನೆ ಮಾಡಬೇಡಿ. ಸುಸಂಸ್ಕೃತರಾಗಿ ಜೀವನ ನಡೆಸಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next