Advertisement

ಚಿಕ್ಕೋಡಿಯಲ್ಲಿ ಹೈಟಿಕ್ ಕನಕ ಭವನ ನಿರ್ಮಾಣ: ಶಾಸಕ ಗಣೇಶ ಹುಕ್ಕೇರಿ

02:42 PM Nov 11, 2022 | Team Udayavani |

ಚಿಕ್ಕೋಡಿ: ಇಡೀ ವಿಶ್ವಕ್ಕೆ ಭಕ್ತಿ ಮಾರ್ಗ ತೋರಿಸಿ ಬದುಕಿ ಬಾಳಿದ ಸಂತ ಶ್ರೇಷ್ಠ ಕನಕದಾಸರ ಆದರ್ಶವನ್ನು ಇಂದಿನ ಯುವಕರು ಅಳವಡಿಸಿಕೊಂಡು ಸುಭದ್ರ ಸಮಾಜ ನಿರ್ಮಿಸಲು ಕೈ ಜೋಡಿಸಬೇಕು ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು.

Advertisement

ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸಂತ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.‌

ಹಲವು ದಿನಗಳಿಂದ ಕನಕ ಭವನ ಬೇಡಿಕೆ ಇದ್ದು, ಮುಂಬರುವ ದಿನಗಳಲ್ಲಿ ಹೈಟಿಕ್ ಭವನ ನಿರ್ಮಾಣ ಮಾಡಿ ಹಾಲು‌ಮತ ಸಮಾಜ ಬಾಂಧವರಿಗೆ ಅನೂಕೂಲ ಕಲ್ಪಿಸಲಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷ ಪ್ರವೀಣ ಕಾಂಬಳೆ ಮಾತನಾಡಿ, ಕೀರ್ತನೆಗಳ ಮೂಲಕ ಜನರಲ್ಲಿ ಭಕ್ತಿ-ಭಾವ ಮೂಡಿಸಿದ ಕನಕದಾಸರ ಸಾಹಿತ್ಯವನ್ನು ಎಲ್ಲರೂ ಓದಬೇಕು. ಅದರ ಮೂಲಕ ಸುಸಂಸ್ಕೃತ ದೇಶ ನಿರ್ಮಾಣ ಮಾಡಲು ಶ್ರಮಿಸಬೇಕು ಎಂದರು.

ಜಿಲ್ಲಾ ಸ್ಥಾನಮಾನ ಹೊಂದಿರುವ ಚಿಕ್ಕೋಡಿ ನಗರದಲ್ಲಿ ಕನಕ ಭವನ ನಿರ್ಮಾಣಕ್ಕೆ ವಿಶೇಷ ಅನುದಾನ ಕೊಡಬೇಕು ಎಂದು ಕುರುಬರ ಸಮಾಜದ ಮುಖಂಡ ಸಿದ್ದಪ್ಪ ರ‍್ಯಾಯಿ ಮನವಿ ಮಾಡಿದರು.

Advertisement

ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಮಾತನಾಡಿ, ಚಿಕ್ಕೋಡಿ-ಸದಲಗಾ ಕ್ಷೇತ್ರದ ಹಾಲುಮತ ದೇವಸ್ಥಾನಗಳ ಅಭಿವೃದ್ಧಿಗೆ‌ 1.35 ಕೋಟಿ ರೂ. ಅನುದಾನ ಮಂಜೂರಾಗಿದೆ. ಮುಂಬರುವ ದಿನಗಳಲ್ಲಿ ಕನಕ ಭವನ ನಿರ್ಮಾಣಕ್ಕೆ ಅನುದಾನ ಕೊಡಲಾಗುತ್ತದೆ. ಪುರಸಭೆ ಆಡಳಿತ ಮಂಡಳಿ ಸೂಕ್ತ ಜಾಗವನ್ನು ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಸಂಜಯ ಕವಟಗಿಮಠ, ಕುರುಬರ ಸಂಘದ ತಾಲೂಕು ಘಟಕದ ಅಧ್ಯಕ್ಷ ಲಕ್ಷ್ಮಣ ಡಂಗೇರ, ನ್ಯಾಯವಾದಿ ಎಚ್.ಎಸ್.ನಸಲಾಪೂರೆ, ರಾಮಣ್ಣಾ ಬನ್ನಟ್ಟಿ, ಶಿವು ರ‍್ಯಾಯಿ, ವಿನಾಯಕ ಬನ್ನಟ್ಟಿ, ಎಂ.ಕೆ.ಪೂಜೇರಿ, ರಾಮಣ್ಣಾ ಕಟ್ಟಿಕರ, ಸುರೇಶ ಹೆಗಡೆ, ಬೀರಾ ಬನ್ನೆ, ಲಕ್ಷ್ಮಣ ಪೂಜೇರಿ, ಸುರೇಶ ಬಾಡಕರ, ಮಹಾದೇವ ಕವಲಾಪೂರೆ, ಹಾಲಪ್ಪ ಡಂಗೇರ, ಕಿರಣ ಗುಡಸೆ, ಸಿದ್ದಪ್ಪ ಡಂಗೇರ ಮುಂತಾದವರು ಇದ್ದರು.

ಭವ್ಯ ಮೆರವಣಿಗೆ: ನಗರದ ಮಿನಿ ವಿಧಾನಸೌಧ ಮುಂಭಾಗದಲ್ಲಿ ಇರುವ ಕನಕದಾಸರ ಪುತ್ಥಳಿಗೆ ಎಲ್ಲ ಗಣ್ಯರು ಪೂಜೆ ಸಲ್ಲಿಸಿ ಪುಸ್ಪ ನಮನ ಸಲ್ಲಿಸಿದರು. ಅಲ್ಲಿಂದ ಡೊಳ್ಳು-ವಾದ್ಯದೊಂದಿಗೆ ಕನಕದಾಸರ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next