ಅಮರಾವತಿ, ಡಿ. 5: ಹಿಂದೂ ಹೃದಯ ಸಾಮ್ರಾಟ ದಿ| ಬಾಳಾಸಾಹೇಬ್ ಠಾಕ್ರೆ ಸಮೃದ್ಧಿ ಹೆದ್ದಾರಿ ನಿರ್ಮಾಣ ಕಾರ್ಯವು ಮಹಾ ರಾಷ್ಟ್ರಕ್ಕೆ ಹೆಮ್ಮೆಯ ವಿಷಯವಾಗಿದೆ. ಈ ಹೆದ್ದಾರಿ ಕಾಮಗಾರಿಯ ಗುಣಮಟ್ಟ ತುಂಬಾ ಉತ್ತಮ ವಾಗಿದೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿ ದ್ದಾರೆ. ಅಮರಾವತಿ ಮತ್ತು ಔರಂಗಾ ಬಾದ್‌ನಲ್ಲಿ ಸಮೃದ್ಧಿ ಹೆದ್ದಾರಿಯ ಕಾರ್ಯ ವೈಖರಿ ಯನ್ನು ಪರಿಶೀಲಿಸಲು ಮುಖ್ಯ ಮಂತ್ರಿಉದ್ಧವ್ ಠಾಕ್ರೆ ಇಂದು ಭೇಟಿ ನೀಡಿದ್ದಾರೆ.
ಸಮೃದ್ಧಿ ಹೆದ್ದಾರಿ ಯನ್ನು ಪರಿಶೀಲಿಸಿದ ಅನಂತರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಮಾತ ನಾಡಿ, ಸಮೃದ್ಧಿ ಹೆದ್ದಾರಿ ಯ ಕಾಮಗಾರಿ ಚೆನ್ನಾಗಿ ನಡೆಯುತ್ತಿದೆ. 2021 ಮೇ 1 ರೊಳಗೆ ಸಮೃದ್ಧ ಹೆದ್ದಾರಿ ಯ ನಾಗಪುರದಿಂದ ಶಿರಡಿ ಹಂತವನ್ನು ಪ್ರಾರಂಭಿಸಲಾಗುವುದು, ಆದರೆ ಶಿರಡಿಯಿಂದ ಮುಂಬಯಿ ನಡುವಿನ ಪ್ರಯಾಣವನ್ನು ಮೇ 1 ರೊಳಗೆ ಪ್ರಾರಂಭವಾಗಲಿದೆ. ಲಾಕ್ ಡೌನ್ ಅವಧಿಯಲ್ಲಿ ಕಾಮಗಾರಿ ಸ್ಥಗಿತಗೊಂಡಿದ್ದರಿಂದ ಕೆಲಸವು ವಿಳಂಭಗೊಳ್ಳುವುದು ಎನ್ನುವ ಭಯ ವಿತ್ತು. ಆದರೆ ರಸ್ತೆ ನಿರ್ಮಾಣದ ಕಾರ್ಯ ನಿಧಾನ ವಾ ಗಲಿಲ್ಲ. ಕೆಲಸದ ಗುಣಮಟ್ಟ ತುಂಬಾ ಚೆನ್ನಾ ಗಿದ್ದು, ರಾಜ್ಯವು ಹೆಮ್ಮೆಪಡುವ ಕೆಲಸ ನಡೆ ಯು ತ್ತಿದೆ ಎಂದು ಅವರು ಹೇಳಿದ್ದಾರೆ.
ನಾಗಪುರದಿಂದ ಮುಂಬಯಿ ನಡುವಿನ 701 ಕಿ. ಮೀ ಮಾರ್ಗಗಳಲ್ಲಿ 101 ಕಿ.ಮೀ ರಸ್ತೆ ನಾಸಿಕ್ ಜಿಲ್ಲೆಯ ಇಗತ್ಪುರಿ ಮತ್ತು ಸಿನ್ನಾರ್ ಈ ಎರಡು ತಾಲೂಕುಗಳಲ್ಲಿಯ 49 ಹಳ್ಳಿಗಳ ಮೂಲಕ ಹಾದುಹೋಗುತ್ತದೆ. ಇದರಲ್ಲಿ ಇಗತುಯ 23 ಗ್ರಾಮಗಳು ಮತ್ತು ಸಿನ್ನಾರ್‌ದಲ್ಲಿಯ 26 ಗ್ರಾಮಗಳನ್ನು ಒಳಗೊಂಡಿದೆ. ದಿ| ಬಾಳಾ ಸಾಹೇಬ್ ಠಾಕ್ರೆ ಸಮೃದ್ಧಿ ಹೆದ್ದಾರಿ ಎಂದು ಕರೆಯಲ್ಪಡುವ ಸಮೃದ್ದಿ ಮಹಾ ಮಾರ್ಗದ ಅಭಿವೃದ್ಧಿಗೆ ನಾಸಿಕ್ ಪ್ರಮುಖ ಕೊಡುಗೆ ಯಾ ಗಿದೆ. ಮೊದಲ ಹಂತದಲ್ಲಿ ನಾಸಿಕ್ ಯಿಂದ ಶಿರಡಿ ಮತ್ತು ಎರಡನೇ ಹಂತದಲ್ಲಿ ಶಿರಡಿ ಯಿಂದ ಮುಂಬಯಿವರೆಗೆ ಪ್ರಯಾಣಕ್ಕಾಗಿ ರಸ್ತೆ ತೆರೆಯಲಾಗುವುದು ಎಂದು ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಸಮೃದ್ಧಿ ಹೆದ್ದಾರಿ ಯು ಥಾಣೆ ಜಿಲ್ಲೆಯ ಪಾಡ್ಫಾ ಗ್ರಾಮದಿಂದ ಪ್ರಾರಂಭವಾಗುತ್ತದೆ. ಈ ಹೆದ್ದಾರಿ ಶಹಾಪುರ ತಾಲೂಕು ಮೂಲಕ ಹಾದುಹೋಗುತ್ತದೆ. ಕಳೆದ 1 ರಿಂದ 2 ವರ್ಷಗಳಿಂದ ಈ ಶಹಾಪುರ ತಾಲೂಕಿನಲ್ಲಿ ಹೆದ್ದಾರಿ ಗಳನ್ನು ವೇಗವಾಗಿ ನಿರ್ಮಿಸಲಾಗುತ್ತಿದೆ. ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಪರಿಣಾಮವಾಗಿ, ಕೆಲಸವು ಭರದಿಂದ ಸಾಗಿದೆ. ಜಮೀನು ಸಪಾಟುಗೊಳಿಸುವ ಮೂಲಕ, ಭರ್ತಿ ಮಾಡುವ ಕೆಲಸವನ್ನು ಪ್ರಾರಂಭಿಸಲಾಗುತ್ತದೆ. ಅಂಡರ್‌ಪಾಸ್‌ಗಳನ್ನು ನಿರ್ಮಿಸಲು, ಬೆಟ್ಟಗಳನ್ನು ಒಡೆಯುವ ಮತ್ತು ಜಿಲ್ಲೆ ಮತ್ತು ಮಹಾರಾಷ್ಟ್ರದ ಪ್ರಗತಿಯನ್ನು ಖಚಿತಪಡಿಸುವುದು ಅವರ ಉದ್ದೇಶವಾಗಿತ್ತು. ಸುರಂಗ ಮಾರ್ಗ ನಿರ್ಮಿಸುವ ಕೆಲಸವೂ ನಡೆಯುತ್ತಿದೆ. ಸಮೃದ್ಧಿ ಮಹಾಮಾರ್ಗದ ಮೂಲಕ ಮಹಾರಾಷ್ಟ್ರದ ಪ್ರಗತಿಯನ್ನು ಖಚಿತಪಡಿಸುವ ಉದ್ದೇಶದಿಂದ ಎಲ್ಲ ರೈತರು ತಮ್ಮ ಜಮೀನುಗಳನ್ನು ರಾಜ್ಯ ಸರಕಾರಕ್ಕೆ ದಾನ ಮಾಡಿದರು. ಇದರ ಹೊರತಾಗಿಯೂ, ಈ ಗ್ರಾಮಗಳ ಅನೇಕ ರೈತರು ತಮ್ಮ ಜಮೀನಿಗೆ ಪರಿಹಾರ ಪಡೆಯುವುದರಿಂದ ವಂಚಿತರಾಗಿದ್ದಾರೆ. ಇದಕ್ಕಾಗಿ, ರೈತರು ತಲಾಟಿಯಿಂದ ಹಿಡಿದು ಕಲೆಕ್ಟರೇಟ್ ವರೆಗೆ ಹಲವು ವರ್ಷಗಳಿಂದ ಮತ್ತು ಸಚಿವಾಲಯದ ಅನೇಕ ಅಧಿಕಾರಿಗಳು ನಿರಂತರ ಪತ್ರವ್ಯವಹಾರ ನಡೆಸುತ್ತಿದ್ದಾರೆ. ಆದರೂ ಈ ರೈತರಿಗೆ ಯಾರೂ ಸಹಾಯ ಮಾಡುವುದಿಲ್ಲ. ಈ ಎಲ್ಲ ಬಡ ದುಡಿಯುವ ರೈತರಿಗೆ ಆದಾಯದ ಮಾರ್ಗವಿಲ್ಲದ ಕಾರಣ ಸರಕಾರದ ಸಹಾಯಕ್ಕಾಗಿ ಕಾಯಬೇಕಾಗಿದೆ.