Advertisement

ಅಯೋಧ್ಯೆ ರಾಮ ಮಂದಿರ ನಿರ್ಮಾಣ, ಶಬರಿಮಲೆ ಪಾವಿತ್ರ್ಯ ರಕ್ಷ ಣೆಗೆ ಪಾದಯಾತ್ರೆ

11:29 PM Sep 13, 2019 | Team Udayavani |

ಕುಂಬಳೆ: ಎಲ್ಲರ ಸಮ್ಮತಿಯೊಂದಿಗೆ ಲೋಕಕಲ್ಯಾಣಾರ್ಥ ಅಯೋಧ್ಯೆಯಲ್ಲಿ ಶ್ರೀ ರಾಮನ ಭವ್ಯ ಮಂದಿರ ನಿರ್ಮಾಣವಾಗಲಿ ಮತ್ತು ಶ್ರೀ ಶಬರಿಮಲೆಯ ಪಾವಿತ್ರ್ಯಕ್ಕೆ ಚ್ಯುತಿ ಬರಬಾರದೆಂಬ ಸಂಕಲ್ಪದೊಂದಿಗೆ ಅಯೋಧ್ಯೆಯ ಶ್ರೀ ರಾಮಜನ್ಮ ಭೂಮಿ ಯಿಂದ ಶ್ರೀ ಶಬರಿಮಲೆಗೆ ಸೆ.18ರಂದು ಹಿರಿಯ ಗುರುಸ್ವಾಮಿ ರಾಜಪ್ಪ ಸಪಲಿಗ ಕುಪ್ಪೆಪದವು, ಚರಣ್‌ ರಾಜ್‌ ಕುಲಶೇಖರ, ಮಿಥುನ್‌ ಚಿತ್ರಾಪುರ ಹಾಗೂ ಶಶಿ ಕುಮಾರ್‌ ಕಕ್ಕಿಂಜೆ ಇವರ ತಂಡ ಸುಮಾರು 3,000 ಕಿ.ಮೀ. ದೀರ್ಘ‌ ಪಾದಯಾತ್ರೆ ಕೈಗೊಳ್ಳಲಿರುವರು.

Advertisement

ಸೆ. 12ರಂದು ಸಂಕ ಲ್ಪ ಹೊತ್ತು ಪಾದಯಾತ್ರೆ ಗೆ„ಯಲಿರುವ ದೇವ- ದೇಶಭಕ್ತರನ್ನು ವಿಹಿಂಪ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್‌ ಪಂಪ್‌ ವೆಲ್‌, ಕಾಸರಗೋಡು ಜಿಲ್ಲಾ ಬಿಜೆಪಿ ಸಮಿತಿ ಸದಸ್ಯ ಹರಿಶ್ಚಂದ್ರ ಮಂಜೇಶ್ವರ, ಗುರುಪುರ ಕೈಕಂಬ ವಿಶ್ವ ಹಿಂದು ಪರಿಷತ್‌ ಅಧ್ಯಕ್ಷ ಹರೀಶ್‌ ಶೆಟ್ಟಿ ಪೊಳಲಿ,ಮಹಾಬಲ ಗಂಜಿಮಠ, ರಾಜು ಕೃಷ್ಣನಗರ ತೊಕೋRಟು, ಗುರುಸ್ವಾಮಿ ರಾಜೇಶ್‌ ಕೊಟ್ಟಾರಿ ನಾರ್ಲ ಹಾಗೂ ಕಣ್ಣು ತೆರೆದೆಯಾ ಅಯ್ಯಪ್ಪ ಕ್ಷೇತ್ರ ಶಾಂತಿಗಿರಿ ತೋಡಾರುವಿನ ಅಶೋಕ್‌ ಗುರು ಸ್ವಾಮಿಯವರೊಂದಿಗೆ ಮಿತ್ರರ ಶುಭ ಹಾರೈಕೆಗಳೊಂದಿಗೆ ರೈಲ್ವೇ ನಿಲ್ದಾಣದಲ್ಲಿ ಬೀಳ್ಕೊಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next