Advertisement

ನೀರಿನ ಬವಣೆ ಮುಕ್ತಕ್ಕೆ ಕೆರೆ ನಿರ್ಮಾಣ

05:15 PM Jun 18, 2018 | Team Udayavani |

ಬಳ್ಳಾರಿ: ದಿನೇದಿನೆ ಬೆಳೆಯುತ್ತಿರುವ ಗಣಿನಗರಿ ಬಳ್ಳಾರಿಯಲ್ಲಿ ಜನಸಂಖ್ಯೆಯೂ ಅಷ್ಟೇ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಸಮರ್ಪಕ ಕುಡಿವ ನೀರು ಪೂರೈಸುವ ಸಲುವಾಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಮೃತ ಯೋಜನೆಯಡಿ ತಾಲೂಕಿನ ಮೋಕಾ ಕೆರೆ ಬಳಿ 800 ಮಿಲಿಯನ್‌ ಲೀಟರ್‌ ಸಾಮರ್ಥ್ಯದ ಮತ್ತೂಂದು ಕೆರೆ ತಲೆ ನಿರ್ಮಾಣಕ್ಕೆ ಮುಂದಾಗುತ್ತಿದ್ದು, ಈಗಾಗಲೇ ಕಾಮಗಾರಿ ಚಾಲನೆ ಪಡೆದುಕೊಂಡಿದೆ.

Advertisement

ಬಳ್ಳಾರಿ ನಗರದಲ್ಲಿ ಅಂದಾಜು 5 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿದೆ. ಇಷ್ಟು ಜನರಿಗೆ ಕುಡಿವ ನೀರು ಪೂರೈಸುವ ಸಲುವಾಗಿ ಈಗಾಗಲೇ ಅಲ್ಲೀಪುರ ಮತ್ತು ಮೋಕಾ ಹೋಬಳಿ ವ್ಯಾಪ್ತಿಯ ಶಿವಪುರ ಗ್ರಾಮದಲ್ಲಿ ಎರಡು ಕೆರೆಗಳಿವೆ.

ಅಲ್ಲೀಪುರ ಕೆರೆಯಿಂದ ಬಳ್ಳಾರಿ ನಗರದ ಭಾಗಶಾ ಪ್ರದೇಶಕ್ಕೆ ಆರು ತಿಂಗಳು ಎಚ್‌ಎಲ್‌ಸಿ ಕಾಲುವೆಯಿಂದ ಉಳಿದ
ಆರು ತಿಂಗಳು ಅಲ್ಲೀಪುರ ಕೆರೆಯಲ್ಲಿ ಸಂಗ್ರಹಿಸಿದ್ದ ನೀರನ್ನು ಪೂರೈಸಲಾಗುತ್ತದೆ. ಅದೇ ರೀತಿ ಮೋಕಾ ಬಳಿಯ ಎಲ್‌ಎಲ್‌ಸಿ ಕಾಲುವೆ ನಂತರ ಕೆರೆಯಿಂದ ನೀರನ್ನು ಪೂರೈಸಲಾಗುತ್ತದೆ.

 ಆದರೂ ಸಹ ಬಳ್ಳಾರಿ ನಗರ ಪ್ರತಿವರ್ಷ ಬೇಸಿಗೆಯಲ್ಲಿ  ಕುಡಿಯುವ ನೀರಿನ ಬವಣೆಯಿಂದ ಮುಕ್ತಗೊಂಡಿಲ್ಲ ಸದ್ಯ ನಗರದ 35 ವಾರ್ಡ್‌ಗಳಿಗೆ 8-10 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತದೆ. ಅಲ್ಲದೇ, ಈ ಕುಡಿಯುವ
ನೀರಿನ ಸಮಸ್ಯೆಯಿಂದ ಮುಕ್ತಗೊಳ್ಳಲು ಹಾಗೂ ದಿನದ 24 ಗಂಟೆಯೂ ನೀರು ಪೂರೈಸಲು ಕರ್ನಾಟಕ ನಗರ
ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಅಮೃತ ಯೋಜನೆಯಡಿ 800 ಎಂಎಲ್‌ ನೀರು
ಸಂಗ್ರಹ ಸಾಮರ್ಥ್ಯವುಳ್ಳ ಮತ್ತೂಂದು ಕೆರೆ ನಿರ್ಮಿಸಲು ಮುಂದಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಅಮೃತ ಯೋಜನೆಯಡಿ ಸುಮಾರು 25 ಕೋಟಿ ರೂ.ಗೂ ಅಧಿಕ
ಅನುದಾನದಲ್ಲಿ ಸುಮಾರು 60ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಿಸಲಾಗುತ್ತಿದೆ. ಕಳೆದ 2016 ಮೇ 13 ರಂದು ಚಾಲನೆ ಪಡೆದುಕೊಂಡಿದ್ದ ಕೆರೆ ನಿರ್ಮಾಣ ಕಾರ್ಯ, 2019ಕ್ಕೆಪೂರ್ಣಗೊಳ್ಳುವ ಸಾಧ್ಯತೆಯಿದೆ. 

Advertisement

ಪ್ರಸಕ್ತ ಕೆರೆ ನಿರ್ಮಾಣ ಪ್ರದೇಶದಲ್ಲಿ ಮಣ್ಣು ಎತ್ತುವ ಮತ್ತು ಬಂಡ್‌ ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ. ಕೆರೆ
ನಿರ್ಮಾಣ ಪ್ರದೇಶದಲ್ಲಿ ಮಣ್ಣನ್ನು ತೆಗೆದು, ಫಲವತ್ತತೆಯುಳ್ಳ ಮಣ್ಣು ಹಾಕುವ ಸಲುವಾಗಿ ಸಾವಿರಾರು ಟನ್‌ ಮರಳನ್ನು ಸಂಗ್ರಹಿಸಲಾಗಿದೆ.

ತಾಲೂಕಿನ ಮೋಕಾ ಹೋಬಳಿ ವ್ಯಾಪ್ತಿಯ ಶಿವಪುರ ಗ್ರಾಮದಲ್ಲಿ ಈಗಾಗಲೇ 1200 ಎಂಎಲ್‌ ಸಾಮರ್ಥ್ಯವುಳ್ಳ
ಕೆರೆಯಿದೆ. ತಾಲೂಕಿನ ಕೆಲ ಗ್ರಾಮಗಳು ಸೇರಿ ನಗರದ ಕೆಲ ವಾರ್ಡ್‌ಗಳಿಗೆ ಈ ಕೆರೆಯಿಂದ ಕುಡಿಯುವ ನೀರನ್ನು
ಪೂರೈಸಲಾಗುತ್ತಿದೆ. ಆದರೂ, ಪ್ರತಿವರ್ಷ ಬೇಸಿಗೆಯಲ್ಲಿ ತಪ್ಪದ ಕುಡಿಯುವ ನೀರಿನ ಹಾಹಾಕಾರದಿಂದ ಮುಕ್ತಗೊಳ್ಳುವ ಸಲುವಾಗಿ 800 ಎಂಎಲ್‌ ಸಾಮರ್ಥ್ಯದ ಕುಡಿವ ನೀರಿನ ಕೆರೆ ನಿರ್ಮಿಸಲಾಗುತ್ತಿದೆ.

ನೂತನವಾಗಿ ನಿರ್ಮಿಸಲಾಗಿರುವ ಕೆರೆಯಿಂದ ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ಗಾಂಧಿನಗರ,
ಬಸವೇಶ್ವರ ನಗರ, ಹೌಸಿಂಗ್‌ ಬೋರ್ಡ್‌, ನೆಹರೂ ಕಾಲೋನಿ ಸೇರಿದಂತೆ ವಿವಿಧ ಬಡಾವಣೆಗಳಿಗೆ ನೀರು
ಸರಬರಾಜು ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಕೆರೆಗಳನ್ನು ನಿರ್ಮಿಸಿದರೂ, ನಗರ ಪ್ರದೇಶಗಳಿಗೆ ನೀರು ಪೂರೈಸುವ ವ್ಯವಸ್ಥೆ ಸಮರ್ಪಕವಾಗಿ ನಡೆಯಬೇಕು.

ಆಗ ಮಾತ್ರ ಕೆರೆಗಳ ನಿರ್ಮಾಣ ಉದ್ದೇಶ ಈಡೇರಿದಂತಾಗಲಿದೆ. ಅಂದಾಜು 8 ಕೋಟಿ ರೂ. ವೆಚ್ಚದಲ್ಲಿ ಕೆರೆಗೆ ನೀರು ತುಂಬಿಸುವ ಅತ್ಯಾಧುನಿಕ ಯಂತ್ರೋಪಕರಣ ಖರೀದಿಸಲಾಗಿದೆ. ಏಕಕಾಲದಲ್ಲಿ ಮೂರು ಕೆರೆಗಳಿಗೆ ನೀರು
ತುಂಬಿಸಬಹುದಾಗಿದ್ದು, ಕೇವಲ ಮೂರು ತಿಂಗಳಲ್ಲಿ ಮೂರು ಕೆರೆಗಳಲ್ಲಿ ನಿರೀಕ್ಷಿತ ಪ್ರಮಾಣದ ನೀರು ಸಂಗ್ರಹಿಸುವ
ಸಾಮರ್ಥ್ಯವನ್ನು ಈ ಯಂತ್ರಗಳು ಹೊಂದಿವೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ

ಬಳ್ಳಾರಿ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿವರ್ಷ ಬೇಸಿಗೆಯಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ಸಲುವಾಗಿ ತಾಲೂಕಿನ ಶಿವಪುರ ಗ್ರಾಮದಲ್ಲಿ 800 ಎಂಎಲ್‌ ನೀರು ಸಂಗ್ರಹ ಸಾಮರ್ಥ್ಯದ ಕೆರೆ ನಿರ್ಮಿಸಲಾಗುತ್ತಿದೆ.
ಈಗಾಗಲೇ ಕಾಮಗಾರಿ ಚಾಲನೆ ಪಡೆದುಕೊಂಡಿದೆ.
 ಜೆ. ವೀರನಗೌಡ ಕಾರ್ಯಪಾಲಕ ಅಭಿಯಂತರರು

Advertisement

Udayavani is now on Telegram. Click here to join our channel and stay updated with the latest news.

Next