Advertisement
ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಶೀನಪ್ಪ ಮಾತನಾಡಿ ಶ್ರೀಮತಿ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಮೊದಲಿಗೆ ವೈಯಕ್ತಿಕ ಸಮೀಕ್ಷೆ ನಡೆಸಿದಾಗ 50 ಕುಟುಂಬಗಳು ಬೆಳಕಿಗೆ ಬಂದವು. ನಂತರ ನಿರ್ಗತಿಕರು , ಅಸಹಾಯಕರು ಎಂಬ ಸಮೀಕ್ಷೆ ಮಾಡಿದಾಗ 20,000 ಕುಟುಂಬಗಳು ಸಮಸ್ಯೆಗಳಿಂದ ಇದ್ದವು. ಅದನ್ನು ಗಮನಿಸಿದ ಮಾತೃ ಶ್ರೀ ಅಮ್ಮನವರು ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಅನೇಕ ಸಹಾಯ ಮಾಡಲು ಆರಂಭಿಸಿದರು. ಈ ವರ್ಷದಲ್ಲಿ ರಾಜ್ಯಾದ್ಯಂತ ಸುಮಾರು 1000 ಮನೆಗಳನ್ನು ನಿರ್ಮಾಣ ಮಾಡಬೇಕು ಎಂಬ ಸಲಹೆಯನ್ನು ಮಾತೃ ಶ್ರೀ ಯವರು ಸಲಹೆ ನೀಡಿದರು. ಇದಕ್ಕಾಗಿ ಸುಮಾರು 10 ಕೋಟಿ ರೂ ಹಣವನ್ನು ವಿನಿಮಯ ಮಾಡಲು ಮಾರ್ಗದರ್ಶನ ನೀಡಿದ್ದಾರೆ. ಅದೇ ರೀತಿ ತಾಲೂಕಿನ ಅಜ್ಜಿಹಳ್ಳಿಯ ದೊಡ್ಡಕ್ಕ ಎಂಬುವವರು ಬಹಳ ಸಮಸ್ಯೆಯಿಂದ ಇದ್ದರು. ಇದನ್ನು ಗಮನಿಸಿದ ನಮ್ಮ ಯೋಜನೆಯ ಜ್ಞಾನ ವಿಕಾಸ ಸಮನ್ವಯಾಧಿಕಾರಿಯವರು ಗಮನಿಸಿ ಪೂಜ್ಯರಿಗೆ ಮತ್ತು ಮಾತೃಶ್ರೀಯವರಿಗೆ ವರದಿಯನ್ನು ಒಪ್ಪಿಸಿ ಎಲ್ಲಾ ಗ್ರಾಮಸ್ಥರ ಸಹಕಾರದಿಂದ ವ್ಯವಸ್ಥಿತವಾದ ವಾತ್ಸಲ್ಯ ಮನೆ ನಿರ್ಮಾಣ ಮಾಡಿ ಅವರಿಗೆ ಹಸ್ತಾಂತರ ಮಾಡಿದ್ದೇವೆ.ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಸುಮಾರು 20.000 ಕುಟುಂಬಗಳನ್ನು ಗುರ್ತಿಸಿ ಅವರಿಗೆ 750 ರೂ ನಿಂದ 1000 ಸಾವಿರ ರೂ ವರೆಗೆ ಮಾಸಾಶನ ನೀಡುತ್ತಿದ್ದೇವೆ. ಜನಮಂಗಲ ಕಾರ್ಯಕ್ರಮದಡಿಯಲ್ಲಿ ವಿಶೇಷ ಚೇತನರಿಗೆ ಸುಮಾರು ಹತ್ತು ಸಾವಿರ ಮಂದಿಗೆ ವಿಲ್ ಚೇರ್ ಗಳನ್ನು ನೀಡಲಾಗಿದೆ.ವಾತ್ಸಲ್ಯ ಕಾರ್ಯಕ್ರಮ ದಡಿಯಲ್ಲಿ ಅತೀ ದುರ್ಬಲ ಮತ್ತು ಅಸಹಾಯ ಸ್ಥಿತಿಯಲ್ಲಿರುವ ಕುಟುಂಬದವರಿಗೆ ಚಾಪೆ , ಹೊದಿಕೆ , ಪಾತ್ರೆ ,ಬಟ್ಟೆ ಸಹ ನೀಡಲಾಗುತ್ತಿದೆ ಎಂದು ತಿಳಿಸಿದರು.
Related Articles
Advertisement
ಈ ಸಂದರ್ಭದಲ್ಲಿ ಪ್ರಾದೇಶಿಕ ನಿರ್ದೇಶಕ ಶೀನಪ್ಪ , ಜಿಲ್ಲಾ ನಿರ್ದೇಶಕ ದಿನೇಶ್ , ಪ್ರಾದೇಶಿಕ ಸಮನ್ವಯಧಿಕಾರಿ ದೀಪಾ , ತಾಲೂಕಿನ ಯೋಜನಾಧಿಕಾರಿ ಬಾಲಕೃಷ್ಣ , ಒಕ್ಕೂಟದ ಅಧ್ಯಕ್ಷ ಪುಟ್ಟರಾಜು , ತಾಲೂಕಿನ ಸಮನ್ವಯಾಧಿಕಾರಿ ಶೃತಿ ,ಗ್ರಾ.ಪಂ ಅಧ್ಯಕ್ಷ ರತ್ನಮ್ಮ ರಮೇಶ್ ,ಗ್ರಾ.ಪಂ ಸದಸ್ಯ ಪುಷ್ಪ ರವಿಕುಮಾರ್ , ವಲಯ ಮೇಲ್ವಿಚಾರಕ ರವೀಂದ್ರ ಮತ್ತು ಸ್ಥಳೀಯರು ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.
ಚಿತ್ರ:ಜೆಟ್ಟಿ ಅಗ್ರಹಾರ ಗ್ರಾಪಂ ವ್ಯಾಪ್ತಿಯ ಅಜ್ಜಿಹಳ್ಳಿ ಗ್ರಾಮದ ಒಂಟಿಯಾಗಿ ವಾಸವಾಗಿರುವ ಮಹಿಳೆ ದೊಡ್ಡಕ್ಕ ರವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ವಾತ್ಸಲ್ಯ ಮನೆ ನಿರ್ಮಾಣ ಮಾಡಿ ಜಿಲ್ಲಾ ನಿರ್ದೇಶಕ ದಿನೇಶ್ ಹಾಗೂ ತಾಲೂಕು ನಿರ್ದೇಶಕ ಬಾಲಕೃಷ್ಣ ರವರು ಮನೆ ಹಸ್ತಾಂತರ ಮಾಡಿದರು.