Advertisement

ನಗರದಲ್ಲೊಂದು ಕಿಂಡಿ ಅಣೆಕಟ್ಟು ನಿರ್ಮಾಣ

10:59 AM Jun 02, 2019 | sudhir |

ಉಡುಪಿ: ಉಡುಪಿ ನಗರ ಭಾಗದಲ್ಲಿ ಪ್ರಥಮ ಎಂಬಂತೆ ಇಂದ್ರಾಣಿ ಹೊಳೆಗೆ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಕುಂಜಿಬೆಟ್ಟು ವಾರ್ಡ್‌ನ ನಾರಾಯಣ ಗುರು ಸಂಘದ ಸಮೀಪ ಸಣ್ಣ ನೀರಾವರಿ ಇಲಾಖೆ ವತಿಯಿಂದ ಅಣೆಕಟ್ಟು ನಿರ್ಮಾಣಗೊಳ್ಳುತ್ತಿದೆ.

Advertisement

ಕಲ್ಸಂಕ ತೋಡಿಗೆ 410 ಮೀಟರ್‌ ತಡೆಗೋಡೆ ಮತ್ತು ಈ ಕಿಂಡಿ ಅಣೆಕಟ್ಟು ನಿರ್ಮಾಣ ಒಟ್ಟು 2 ಕೋ.ರೂ. ವೆಚ್ಚದಲ್ಲಿ ನಡೆಯುತ್ತಿದೆ. ಹಿಂದೆ ಈ ಭಾಗದಲ್ಲಿ ಮಣ್ಣಿನಿಂದ ತಡೆ (ಕಟ್ಟ) ಹಾಕಲಾಗುತ್ತಿತ್ತು. ಈಗ ಹೊಸದಾಗಿ ಕಿಂಡಿ ಅಣೆಕಟ್ಟು ನಿರ್ಮಾಣವಾಗುತ್ತಿದೆ.

ಈ ಭಾಗದಲ್ಲಿ ಅಂತರ್ಜಲ ಹೆಚ್ಚಳಗೊಂಡು ಮುಂದಿನ ವರ್ಷಗಳಲ್ಲಿ ನೀರಿನ ಸಮಸ್ಯೆಯ ತೀವ್ರತೆ ಕಡಿಮೆ ಯಾಗುವ ನಿರೀಕ್ಷೆ ಇದೆ. ಅಂತೆಯೇ ಇಲ್ಲಿ ನಿರ್ಮಾಣವಾಗುತ್ತಿರುವ ತಡೆಗೋಡೆ ನೆರೆಯಿಂದ ರಕ್ಷಣೆ ನೀಡಬಹುದು ಎಂಬ ವಿಶ್ವಾಸ ಸ್ಥಳೀಯರದ್ದು. ನಗರ ಹಾಗೂ ನಗರದ ಹೊರ ವಲಯದ ತೋಡುಗಳಲ್ಲಿ ಎಲ್ಲೆಲ್ಲಿ ಅವಕಾಶವಿದೆಯೋ ಅಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿದರೆ ಭವಿಷ್ಯದಲ್ಲಿ ಅಂತರ್ಜಲ ವೃದ್ಧಿಗೆ ನೆರವಾಗಬಹುದು.

ಶೀಘ್ರ ಪೂರ್ಣ
ತಡೆಗೋಡೆ ಮತ್ತು ಕಿಂಡಿ ಅಣೆಕಟ್ಟು 2 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಸುಮಾರು ಅರ್ಧದಿಂದ ಒಂದು ಕಿ.ಮೀ . ವ್ಯಾಪ್ತಿಯ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಾಗಬಹುದು. ಡ್ಯಾಂನ ಇನ್ನೊಂದು ಬದಿಯಲ್ಲಿ ಕೃಷಿ ಪ್ರದೇಶವೂ ಇದೆ. ಅದಕ್ಕೂ ನೆರವಾಗಲಿದೆ. ಡ್ಯಾಂನ ಮುಖ್ಯ ಕಾಮಗಾರಿ ಈ ಮಳೆಗಾಲ ಆರಂಭದೊಳಗೆ ಪೂರ್ಣಗೊಳ್ಳಲಿದೆ.

-ದೇವಾನಂದ್‌, ಇಂಜಿನಿಯರ್‌, ಸಣ್ಣ ನೀರಾವರಿ ಇಲಾಖೆ

ಅಂತರ್ಜಲ ಹೆಚ್ಚಲಿದೆ
ಇಲ್ಲಿ ಹಿಂದೆ ಕಟ್ಟ ಹಾಕುತ್ತಿದ್ದಾಗ ಇಲ್ಲಿನ ಬಾವಿಗಳು ಬತ್ತುತ್ತಿರಲಿಲ್ಲ. ಕಟ್ಟದಲ್ಲಿ ಎಪ್ರಿಲ್ವರೆಗೂ ನೀರು ಇರುತ್ತಿತ್ತು. ಆದರೆ ಈಗ ನೀರಿನ ಮಟ್ಟ ಕುಸಿದಿದೆ. ಹಿಂದೆ ಬಾವಿ ಇದೆ ಎಂಬ ಕಾರಣಕ್ಕೆ ಕೆಲವರು ನಗರಸಭೆ ನೀರಿನ ಸಂಪರ್ಕ ಪಡೆದುಕೊಂಡಿರಲಿಲ್ಲ. ಈಗ ಅಂಥವರಿಗೆ ಹೆಚ್ಚಿನ ಸಮಸ್ಯೆಯಾಗಿದೆ. ಟ್ಯಾಂಕರ್‌ ಮೂಲಕ ನಿರಂತರವಾಗಿ ನೀರು ಪೂರೈಸುತ್ತಿದ್ದೇವೆ. ಮುಂದೆ ಅಂತರ್ಜಲ ಮಟ್ಟ ಹೆಚ್ಚಾಗಬಹುದೆಂಬ ನಿರೀಕ್ಷೆ ನಮ್ಮದು.

– ಗಿರೀಶ್‌ ಅಂಚನ್‌, ನಗರಸಭಾ ಸದಸ್ಯರು

Advertisement
Advertisement

Udayavani is now on Telegram. Click here to join our channel and stay updated with the latest news.

Next