Advertisement

Russia: ಭಾರತದಲ್ಲಿ 6 ಪರಮಾಣು ವಿದ್ಯುತ್‌ ಸ್ಥಾವರ ನಿರ್ಮಾಣ: ರಷ್ಯಾ

10:38 AM Jul 10, 2024 | Team Udayavani |

ಮಾಸ್ಕೋ: ಭಾರತದಲ್ಲಿ 6 ಪರಮಾಣು ವಿದ್ಯುತ್‌ ಘಟಕಗಳ ನಿರ್ಮಾಣಕ್ಕೆ ಭಾರತ ಮತ್ತು ರಷ್ಯಾಗಳೆರಡೂ ಚರ್ಚೆ ನಡೆಸಿವೆ ಎಂದು ರಷ್ಯಾದ ಸುದ್ದಿ ಸಂಸ್ಥೆ ವರದಿ ಮಾಡಿದೆ.

Advertisement

2 ದಿನಗಳ ಕಾಲ ರಷ್ಯಾ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು 22ನೇ ಭಾರತ-ರಷ್ಯಾ ಶೃಂಗದಲ್ಲಿ ಪಾಲ್ಗೊಂಡ ಬೆನ್ನಲ್ಲೇ ಈ ಸುದ್ದಿ ಹೊರ ಬಿದ್ದಿದೆ.

6 ಹೈ ಪವರ್‌ ಪರಮಾಣು ಶಕ್ತಿ ಘಟಕ ಮತ್ತು ಅಷ್ಟೇ ಪ್ರಮಾಣದಲ್ಲಿ ಕಡಿಮೆ ಪವರ್‌ ಘಟಕಗಳ ನಿರ್ಮಾಣಕ್ಕೆ ಚರ್ಚಿಸಲಾಗಿದೆ ಎಂದು ರಷ್ಯಾದ ರೋಸ್ಟಾಮ್‌(ಆರ್‌ಒಎಸ್‌ಎಟಿಒಎಂ) ತಿಳಿಸಿದೆ.

Advertisement

ಈ ಮೂಲಕ ಭಾರತದಲ್ಲಿ ಮತ್ತೆ 6 ಅಣು ವಿದ್ಯುತ್‌ ಘಟಕ ಆರಂಭವಾಗಲಿದೆ. ಬಿಎಚ್‌ ಇ ಎಲ್‌(ಭಾರತ್‌ ಹೆವಿ ಎಲೆಕ್ಟ್ರಾನಿಕ್ಸ್‌ ಲಿ.) ಮತ್ತು ಪವರ್‌ ಮೆಕ್‌ ಸಂಸ್ಥೆಗಳು ಈ ಘಟಕಗಳನ್ನು ಅಭಿವೃದ್ಧಿಪಡಿಸಲಿವೆ ಎಂದೂ ರೋಸ್ಟಾಮ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next