Advertisement

25 ಅಡಿ ಎತ್ತರದ ಬೃಹತ್‌ ಶೇಂಗಾಕಾಯಿ ಶಿವಲಿಂಗ ನಿರ್ಮಾಣ!

11:09 PM Feb 18, 2023 | Team Udayavani |

ಕಲಬುರಗಿ: ನಗರದ ಹೊರ‌ವಲಯದಲ್ಲಿರುವ ಈಶ್ವರೀಯ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಅಮೃತ ಸರೋವರದಲ್ಲಿ ಈ ಬಾರಿ ಶಿವರಾತ್ರಿ ಆಚರಣೆ ಹಿನ್ನೆಲೆಯಲ್ಲಿ 25 ಅಡಿ ಎತ್ತರದ ಬೃಹತ್‌ ಶೇಂಗಾಕಾಯಿ ಶಿವಲಿಂಗ ನಿರ್ಮಾಣ ಮಾಡಲಾಗಿದೆ.

Advertisement

ಇದು ಈಗ ದೊಡ್ಡ ಪ್ರಮಾಣದಲ್ಲಿ ಭಕ್ತರನ್ನು ಸೆಳೆಯುತ್ತಿದೆ. 10 ದಿನಗಳ ಕಾಲ ಪ್ರದರ್ಶನ ನಡೆಯಲಿದೆ.

ಈ ಶಿವಲಿಂಗವನ್ನು ನಿರ್ಮಾಣ ಮಾಡಲು ಬರೋಬ್ಬರಿ ಎಂಟು ಕ್ವಿಂಟಲ್‌ ಶೇಂಗಾವನ್ನು ಬಳಕೆ ಮಾಡಲಾಗಿದೆ. ಅದರಲ್ಲೂ ಪ್ರಮುಖವಾಗಿ ಒಂದೇ ಅಳತೆಯ ಶೇಂಗಾವನ್ನು ಬಳಕೆ ಮಾಡಿರುವುದು ಗಮನಾರ್ಹ. ಇದಕ್ಕೆ ಅರಿಶಿಣ ಮತ್ತು ಕುಂಕುಮವನ್ನು ಲೇಪನ ಮಾಡಲಾಗಿದೆ. ಇದರಿಂದಾಗಿ ಶಿವಲಿಂಗ ಆಕರ್ಷಕ ಬಣ್ಣಗಳಲ್ಲಿ ಕಂಗೊಳಿಸುವಂತಾಗಿದೆ.

ಜತೆಯಲ್ಲಿಯೇ 12 ಜ್ಯೋತಿರ್ಲಿಂಗಗಳನ್ನು ಕೂಡ ನಾಣ್ಯ, ಕಲ್ಲು ಸಕ್ಕರೆ, ಗೋಡಂಬಿ, ಸಿರಿಧಾನ್ಯಗಳಲ್ಲಿ ನಿರ್ಮಾಣ ಮಾಡಿರುವುದು ಕೂಡ ಭಕ್ತರನ್ನು ಸೆಳೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next