Advertisement
ಸ್ವಾವಲಂಬನೆ ಉದ್ದೇಶಕೋವಿಡ್-19ರ ಲಾಕ್‌ಡೌನ್ ಅವಧಿಯಲ್ಲಿ ಮನೆಯಲ್ಲೇ ಇದ್ದ ಜನರಿಗೆ ಉದ್ಯೋಗ ಖಾತರಿ ಯೋಜನೆಯ ಕುರಿತು ತಿಳಿವಳಿಕೆ ಮೂಡಿಸಿ ತಮ್ಮ ಸ್ವಂತ ಜಮೀನಿನಲ್ಲಿ ಕುಡಿಯುವ ನೀರಿನ ಬಾವಿ ಕೊರೆಯುವವರಿಗೆ ಯೋಜನೆಯಲ್ಲಿ ಅನುದಾನ ನೀಡುವುದಾಗಿ ಗ್ರಾಮ ಪಂಚಾಯತ್ ತಿಳಿಸಿತ್ತು. ಗ್ರಾಮದಲ್ಲಿ ಕುಡಿಯುವ ನೀರಿನ ಪೂರೈಕೆ ಇದ್ದರೂ ಸ್ವಾವಲಂಬಿಗಳಾಗಲು ಬಹಳಷ್ಟು ಮಂದಿ ಬಾವಿ ಕೊರೆಯುವುದಕ್ಕೆ ಮುಂದೆ ಬಂದಿದ್ದರು. ತಮ್ಮ ತಮ್ಮ ಮನೆಗಳ ಬಳಿ ತೆರೆದ ಬಾವಿಗಳನ್ನು ತೋಡುವ ಕೆಲಸವನ್ನು ಆರಂಭಿಸಿದರು. ಅಂತರ್ಜಲ ವೃದ್ಧಿಗೆ ಯೋಜನೆ ಮೂರನೇ ಹಂತದ ಲಾಕ್‌ಡೌನ್ ಅವಧಿ ಮುಗಿಯುವ ಹೊತ್ತಿಗೆ ಗ್ರಾಮದಲ್ಲಿ 12 ಹೊಸ ಬಾವಿಗಳ ಕೆಲಸ ಪೂರ್ಣಗೊಂಡಿದೆ. ಪ್ರಸ್ತುತ ಗ್ರಾಮಸ್ಥರು ಅದೇ ಬಾವಿಗಳ ನೀರನ್ನು ಕುಡಿಯಲು ಉಪಯೋಗಿಸುತ್ತಿದ್ದಾರೆ. ಮುಂದೆ ಮಳೆಗಾಲದಲ್ಲಿ ತಮ್ಮ ಮನೆಯ ಮಾಡಿಗೆ ಬೀಳುವ ಮಳೆ ನೀರನ್ನು ಈ ಬಾವಿಯ ಮೂಲಕ ಸಂಗ್ರಹಿಸಿ ಅಂತರ್ಜಲ ವೃದ್ಧಿಗೂ ಇವರನ್ನು ತೊಡಗಿಸಿಕೊಳ್ಳಲು ಪ್ರೇರಣೆ ನೀಡುವ ಕೆಲಸವನ್ನು ಗ್ರಾಮ ಪಂಚಾಯತ್ ಮಾಡುತ್ತಿದೆ.
ಗ್ರಾ.ಪಂ.ಗೆ 10 ಬಾವಿಗಳ ಗುರಿಯನ್ನು ನೀಡಲಾಗಿದ್ದು, ಅದರಂತೆ ಬಾವಿ ಕೊರೆಯುವು ದಕ್ಕೆ ಉತ್ತೇಜನ ನೀಡಲಾಗಿದೆ. ಇದರಿಂದ ಅಂತರ್ಜಲ ವೃದ್ಧಿಗೂ ಸಹಕಾರಿಯಾಗಲಿದೆ. ಬಾವಿಯ ಆಳ, ಅಗಲದ ಆಧಾರದಲ್ಲಿ ಉದ್ಯೋಗ ಖಾತರಿ ಯೋಜನೆಯಿಂದ ಅನುದಾನ ಸಿಗಲಿದೆ. – ಸುಶೀಲಾ, ಇರಾ ಗ್ರಾ.ಪಂ. ಪಿಡಿಒ