Advertisement

ತೈಲ ಸಂಶೋಧನಾ ಕೇಂದ್ರ ನಿರ್ಮಾಣಕ್ಕೆ ಶಂಕು

11:56 AM Aug 06, 2018 | Team Udayavani |

ಹೊಸಕೋಟೆ: ದೇಶವು 2030ಕ್ಕೆ ತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ನಿರ್ಮಾಣಗೊಳ್ಳಲಿರುವ ಸಂಶೋಧನಾ ಕೇಂದ್ರ ಸಹಕಾರಿಯಾಗಲಿದೆ ಎಂದು ಲೋಕಸಭಾ ಸದಸ್ಯ ಎಂ.ವೀರಪ್ಪ ಮೊಯ್ಲಿ ಹೇಳಿದರು. ತಾಲೂಕಿನ ಕಂಬಳೀಪುರದಲ್ಲಿ ಪೆಟ್ರೋಲಿಯಂ ಸಂಶೋಧನಾ ಕೇಂದ್ರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. 

Advertisement

5 ವರ್ಷಗಳ ಹಿಂದೆಯೇ ಇದಕ್ಕಾಗಿ ಜಮೀನು ಮೀಸಲಾಗಿದ್ದು ಬೇರೆಡೆಗೆ ಸ್ಥಳಾಂತರಗೊಳ್ಳುವ ಪ್ರಯತ್ನಗಳು ನಡೆಯುತ್ತಿದ್ದ ಕಾರಣ, ನಿರ್ಮಾಣ ಕಾರ್ಯ ವಿಳಂಬವಾಗಿತ್ತು. ಇದೊಂದು ದಕ್ಷಿಣ ಭಾರತದಲ್ಲಿಯೇ ಪ್ರಥಮ ಯೋಜನೆಯಾಗಿದ್ದು ಸಂಶೋಧನಾ ಕೇಂದ್ರದ ಕೊರತೆ ನಿವಾರಣೆಗೊಳ್ಳಲಿದೆ ಎಂದು ತಿಳಿಸಿದರು. 

ರಾಜೀವ್‌ ಗಾಂಧಿ ಪೆಟ್ರೋಲಿಯಂ ಸಂಶೋಧನಾ ಕೇಂದ್ರದ ಅಧ್ಯಕ್ಷ ಕೆ.ಪಿ.ಅಖೀಲೇಶ್‌ ಮಾತನಾಡಿ, 150 ಎಕರೆ ಪ್ರದೇಶದಲ್ಲಿ 1650 ಕೋಟಿ ರೂ.ಗಳ ವೆಚ್ಚದಲ್ಲಿ ಸಂಶೋಧನಾ ಕೇಂದ್ರ ನಿರ್ಮಾಣಗೊಳ್ಳಲಿದೆ. ಪ್ರಸ್ತುತ ರಾಯ್‌ ಬರೇಲಿಯಲ್ಲಿ 40 ಎಕರೆ, ಅಸ್ಸಾಂನ ಶಿವಸಾಗರ್‌ನ 100 ಎಕರೆ ಪ್ರದೇಶದಲ್ಲಿ 2 ಸಂಶೋಧನಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು. 

ಶಾಸಕ ಎನ್‌.ನಾಗರಾಜ್‌ ಮಾತನಾಡಿ, ಸಂಶೋಧನಾ ಕೇಂದ್ರ ಸ್ಥಾಪನೆಯಿಂದ ಸ್ಥಳೀಯವಾಗಿ ಉದ್ಯೋಗಾವಕಾಶಗಳು ಲಭ್ಯವಾಗಿ ವ್ಯಾಪಾರ ವಹಿವಾಟು ವೃದ್ಧಿಗೊಳ್ಳಲಿದೆ ಎಂದರು. ಜಿಪಂ ಅಧ್ಯಕ್ಷ ವಿ.ಪ್ರಸಾದ್‌, ಉಪಾಧ್ಯಕ್ಷೆ ಅನಂತಕುಮಾರಿ, ಸದಸ್ಯರಾದ ಸಿ.ನಾಗರಾಜ್‌, ರೂಪಾ, ತಾಪಂ ಅಧ್ಯಕ್ಷ ವಿ.ಸಿ.ಜಯದೇವಯ್ಯ, ಎಐಸಿಸಿ ಸದಸ್ಯೆ ಕಮಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next