Advertisement
ದೇಶದಲ್ಲಿ ನಾಗರಿಕರಿಗೆ ಇರುವ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂವಿಧಾನದ ರಕ್ಷಣೆ ಇದೆ ಎಂದು ನ್ಯಾಯಪೀಠ ಒತ್ತಿ ಹೇಳಿದೆ. ಮುಸ್ಲಿಂ ವಿದ್ಯಾರ್ಥಿನಿಯೊಬ್ಬರನ್ನು ಟೀಕೆ ಮಾಡಿದ್ದಕ್ಕೆ ತನ್ನ ವಿರುದ್ಧ ವಿಧಿಸಿರುವ ಪ್ರಕರಣವನ್ನು ರದ್ದು ಮಾಡಬೇಕು ಎಂದು ಕೋರಿ ನೌಶಾದ್ ಎಂಬ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಈ ತೀರ್ಪು ಪ್ರಕಟಿಸಿದೆ.ಧಾರ್ಮಿಕ ನಂಬಿಕೆ ವೈಯಕ್ತಿಕ ಆಯ್ಕೆ ಯಾಗಿದ್ದು, ಅವುಗಳನ್ನು ಮತ್ತೂಬ್ಬರ ಮೇಲೆ ಹೇರುವಂತಿಲ್ಲ.
ಕೇರಳದ ಮಾಜಿ ವಿತ್ತ ಸಚಿವ ಥಾಮಸ್ ಐಸಾಕ್ ಅವರು ಮಾರ್ಕಸ್ ಲಾ ಕಾಲೇಜಿಗೆ ಭೇಟಿ ನೀಡಿದ್ದ ಸಮಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬರು ಅವರ ಕೈ ಕುಲುಕಿದ್ದರು. ಈ ಘಟನೆಯನ್ನು ಖಂಡಿಸಿದ್ದ ಅಬ್ದುಲ್ ನೌಶಾದ್ ಮತ್ತೂಬ್ಬ ಗಂಡಸಿನ ಕೈ ಮುಟ್ಟುವುದು ಶರಿಯಾ ಕಾನೂನಿನ ಪ್ರಕಾರ ಅಪರಾಧ ಎಂದು ಟೀಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ಕುಟುಂಬದವರು ತನ್ನ ವಿರುದ್ಧ ದಾಖಲಿಸಿದ್ದ ಪ್ರಕರಣದ ರದ್ದು ಕೋರಿ ನೌಶಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು.
Related Articles
ಹೈಕೋರ್ಟ್ ತೀರ್ಪನ್ನು ಬಿಜೆಪಿ ನಾಯಕರು ಶ್ಲಾ ಸಿದ್ದು, ಈ ತೀರ್ಪು ದೂರಗಾಮಿ ಪರಿಣಾಮಗಳನ್ನು ಉಂಟು ಮಾಡಲಿದೆ. ಇಸ್ಲಾಮಿಸ್ಟ್‌ಗಳು ಸಂವಿಧಾನದ ವಿರುದ್ಧ ಸಲ್ಲಿಸಿರುವ ಮನವಿಗಳಿಗೆ ಇದು ಸರಿಯಾದ ಪಾಠವಾಗಲಿದೆ ಎಂದಿದ್ದಾರೆ.
Advertisement