ಗಂಗಾವತಿ: ದೇಶಕ್ಕೆ ಸಂವಿಧಾನವೇ ಮೊದಲು ನಂತರ ಉಳಿದೆಲ್ಲವೂ, ಸಂವಿಧಾನದಲ್ಲಿ ದೇಶದ ಸಮಸ್ಯೆಗಳಿಗೆ ಪರಿಹಾರವಿದೆ. ರಾಜಕಾರಣಿಗಳು ಸಂವಿಧಾನ ಬಿಟ್ಟು ಹೋಗಬಾರದು. ವಿಧಾನಸಭೆಯ ಅಧಿವೇಶನ ವಿಕ್ಷಿಸಲು ಎಲ್ಲಾರು ಬನ್ನಿ, ಸಂವಿಧಾನ ತಿಳಿದುಕೊಳ್ಳಿರಿ ಎಂದು ವಿದಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ರಾಯಚೂರಿನಿಂದ ಹೊಸಪೇಟೆಗೆ ಹೋಗುನ ಮಾರ್ಗದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ನಿವಾಸದಲ್ಲಿ ಸನ್ಮಾನಿತಗೊಂಡು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ಸರಕಾರದ ಯೋಜನೆಗಳ ಬಗ್ಗೆ ಚರ್ಚೆಯಾಗುತ್ತಿವೆ. ಅಧಿವೇಶನದಲ್ಲಿ ಪ್ರಮುಖ ವಿಷಯಗಳು ಚರ್ಚೆಯಾಗುತ್ತಿವೆ. ಇದನ್ನು ಗಮನಿಸಲು ವಿದ್ಯಾರ್ಥಿಗಳು ಸೇರಿ ಸರ್ವರೂ ಆಗಮಿಸಬೇಕು ಎಂದರು.
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ವೈದ್ಯಕೀಯ ಮಂತ್ರಿಯಾಗಿದ್ದ ಸಂದರ್ಭ ರಾಜ್ಯದಲ್ಲಿ ಹಲವಾರು ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಿದ್ದರು. ಅಲ್ಲದೇ ಹಲವಾರು ಯೋಜನೆಗಳನ್ನು ಅನುಷ್ಟಾನಗೊಳಿಸಿದ ಕೀರ್ತಿ ಅನ್ಸಾರಿಗೆ ಸಲ್ಲುತ್ತದೆ. ಅವರು ಸೋತರು ಅಷ್ಟೇ ಗೆದ್ದರೂ ಅಷ್ಟೇ, ಜನಪರ ಕಾರ್ಯದಲ್ಲಿ ಇರುತ್ತಾರೆ. ಅವರು ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಜಿ. ಪಂ. ಮಾಜಿ ಸದಸ್ಯ ಅಮರೇಶ ಗೋನಾಳ್, ಕಾಂಗ್ರೆಸ್ ಮುಖಂಡರಾದ ವಿಠಾಲಾಪುರ ಯಮನಪ್ಪ, ಎಪಿಎಂಸಿ ಮಾಜಿ ಅದ್ಯಕ್ಷ ಸಣ್ಣಕ್ಕಿ ನೀಲಪ್ಪ, ಎಸ್.ಬಿ.ಖಾದ್ರಿ, ನವಲಿ ಯಮಯನಪ್ಪ ದಳಪತಿ, ನಗರಸಬಾ ಸದಸ್ಯ ಮನೋಹರಸ್ವಾಮಿ ಹಿರೇಮಠ, ಎಸ್ ಟಿ.ಘಟಕ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ.ಗೊಂಡಬಾಳ, ಮಂಜುನಾಥ ಗೊಂಡಬಾಳ, ನ್ಯಾಯವಾದಿ ಹುಸೇನಪ್ಪ ಹಂಚಿನಾಳ ಭೀಮೇಶ ಬೇಡ್ಕರ ನಗರ, ವಿಶ್ವನಾಥ ಮಾಲೀಪಾಟೀಲ್, ರಾಚಪ್ಪ ಗುಂಜಳ್ಳಿ, ಮಾರೇಶ, ಬಸವರಾಜ ಚಿಲ್ಕವಾಡಿ ಕಿನ್ನಾಳ ಸೇರಿದಂತೆ ಪ್ರಮುಖರಿದ್ದರು.