Advertisement

ಬಿಜೆಪಿ ಕಚೇರಿಯಲ್ಲಿ ಸಂವಿಧಾನ ದಿನ

01:20 PM Nov 28, 2021 | Team Udayavani |

ಬೆಳಗಾವಿ: ದೇಶದ ಆಡಳಿತ ಯಂತ್ರ ಸುಸೂತ್ರವಾಗಿ ನಡೆಯಲು ಹಾಗೂ ದೇಶದ ಜನತೆಯಲ್ಲಿ ಸಮಾನತೆ ತರಲು 1949 ನ.26ರಂದು ದೇಶದಲ್ಲಿ ಸಂವಿಧಾನವನ್ನು ಜಾರಿಗೆ ತರಲು ನಿರ್ಣಯ ಅಂಗೀಕರಿಸಲಾಯಿತು. ಅಂದಿನಿಂದ ದೇಶದಲ್ಲಿ ನ.26ರಂದು ಸಂವಿಧಾನ ದಿನಾಚರಣೆ ನಡೆಸಲಾಗುತ್ತಿದೆ ಎಂದು ಬಿಜೆಪಿ ಬೆಳಗಾವಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಹೇಳಿದರು.

Advertisement

ನಗರದ ಬಿಜೆಪಿ ಕಚೇರಿಯಲ್ಲಿ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲೂ ಸಹೋದರತೆ ಮೂಡಿಸಲು ರಾಷ್ಟ್ರಕ್ಕೆ ಸಂವಿಧಾನ ಸಮರ್ಪಣೆ ಗೊಂಡಿದೆ. ಸಂವಿಧಾನದ ಮೂಲ ಆಶಯಗಳು ಮತ್ತು ಕಾನೂನು ಅಂಶಗಳನ್ನು ಬಹಳಷ್ಟು ಜನ ತಿಳಿದುಕೊಳ್ಳದೆ ಇರುವುದರಿಂದ ಸರ್ಕಾರಗಳು ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಿದೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ ಪಾಟೀಲ ಮಾತನಾಡಿ ಸಂವಿಧಾನ ಶಿಲ್ಪಿ ಡಾ| ಬಿಆರ್‌ ಅಂಬೇಡ್ಕರ್‌ ಹಾಗೂ ಅನೇಕರು ಸೇರಿಕೊಂಡು ಬರೆದಿರುವ ಸಂವಿಧಾನ ದೇಶದ ಜನತೆಗೆ ಪವಿತ್ರ ಗ್ರಂಥವಾಗಿದೆ ಇದರಡಿ ಪ್ರತಿಯೊಬ್ಬರಿಗೂ ಹಕ್ಕು ಮತ್ತು ಕರ್ತವ್ಯಗಳು ದೊರೆಯುತ್ತಿದೆ ಎಂದರು.

ಎಸ್‌.ಸಿ. ಮೋರ್ಚಾದ ಜಿಲ್ಲಾ ಅಧ್ಯಕ್ಷ ಜಿತೇಂದ್ರ ಮಾದರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಲ್ಲೇಶ ಕೋಲ್ಕಾರ್‌, ರಾಜ್ಯ ಎಸ್ಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪೃಥ್ವಿಸಿಂಗ, ಮಾಜಿ ಜಿಪಂ ಸದಸ್ಯ ಬಸವರಾಜ್‌ ಬಂಡಿವಡ್ಡರ್‌ ಉಪಸ್ಥಿತರಿದ್ದರು. ಎಸ್‌ಸಿ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಸಂಜಯ್‌ ಮೂಲಿಮನಿ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next