Advertisement
ಚಿಕ್ಕಬಳ್ಳಾಪುರ ಕ್ಷೇತ್ರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು (ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಹೊಸಕೋಟೆ) ಚಿಕ್ಕಬಳ್ಳಾಪುರ ಜಿಲ್ಲೆಯ ಮೂರು(ಚಿಕ್ಕಬಳ್ಳಾಪುರ, ಗೌರಿಬಿದನೂರು, ಬಾಗೇ ಪಲ್ಲಿ) ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರವನ್ನೊಳಗೊಂಡಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಚಿಕ್ಕಬಳ್ಳಾಪುರ ಕ್ಷೇತ್ರದ ವ್ಯಾಪ್ತಿಯಲ್ಲಿವೆ.
Related Articles
Advertisement
ಕಾಂಗ್ರೆಸ್‌ನ ವಿ.ಕೃಷ್ಣರಾವ್ ಹ್ಯಾಟ್ರಿಕ್: 1984 ಹಾಗೂ 1991ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಿ.ಕೃಷ್ಣರಾವ್ ಅವರು ಜನತಾ ಪಕ್ಷದ ಆರ್.ಎಲ್.ಜಾಲಪ್ಪ ಹಾಗೂ 1989ರಲ್ಲಿ ಜನತಾ ದಳದ ಚಂದ್ರಶೇಖರ್ ಅವರನ್ನು ಪರಾಭವಗೊಳಿಸಿ, ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು. 2009ರಲ್ಲಿ ಕಾಂಗ್ರೆಸ್‌ನ ಎಂ.ವೀರಪ್ಪ ಮೊಯಿಲಿ ಬಿಜೆಪಿಯ ಸಿ.ಅಶ್ವತ್ಥನಾರಾಯಣ ಅವರನ್ನು ಸೋಲಿಸಿ ದ್ದರು. ನಂತರ 2014ರಲ್ಲಿ ಬಿಜೆಪಿಯ ಬಿ.ಎನ್.ಬಚ್ಚೇಗೌಡ ಅವರನನ್ನು ಸೋಲಿಸಿದ್ದರು. ಈ ಚುನಾವಣೆ ಯಲ್ಲಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಿದ್ದರು.
ಖಾತೆ ತೆರೆದ ಬಿಜೆಪಿ: 2019ರ ಚುನಾವಣೆಯಲ್ಲಿ ಬಿಜೆಪಿಯ ಬಿ.ಎನ್.ಬಚ್ಚೇಗೌಡ ಅವರು ಕಾಂಗ್ರೆಸ್‌ನ ಎಂ.ವೀರಪ್ಪ ಮೊಯಿಲಿ ಅವರನ್ನು ಪರಾಭವಗೊಳಿಸಿ, 45 ವರ್ಷಗಳ ನಂತರ ಬಿಜೆಪಿ ಖಾತೆ ತೆರೆದಿದ್ದರು. ಈ ಬಾರಿ ಯಾರಿಗೆ ಒಲವು?: ಹಿಂದುಳಿದ ಹಾಗೂ ಅಹಿಂದ ಮತದಾರರು ನಿರ್ಣಾಯಕರಾಗಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಟಿಕೆಟ್‌ಗಾಗಿ ಡಾ.ಕೆ.ಸುಧಾಕರ್, ಶಾಸಕ ಎಸ್. ಆರ್.ವಿಶ್ವನಾಥ್ ಪುತ್ರ ಅಲೋಕ್ ವಿಶ್ವನಾಥ್ ಪೈಪೋಟಿ ನಡೆಸಿ, ಅಂತಿಮವಾಗಿ ಡಾ.ಕೆ.ಸುಧಾಕರ್ ಟಿಕೆಟ್ ಪಡೆದು, ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಕಾಂಗ್ರೆಸ್‌ನಿಂದ ವೀರಪ್ಪ ಮೊಯ್ಲಿ, ಶಿವಶಂಕರ ರೆಡ್ಡಿ, ರಕ್ಷಾ ರಾಮಯ್ಯ ಟಿಕೆಟ್‌ಗಾಗಿ ಪೈಪೋಟಿ ನಡೆಸಿ ರಕ್ಷಾ ರಾಮಯ್ಯ ಟಿಕೆಟ್ ಪಡೆದು ನಾಮಪತ್ರ ಸಲ್ಲಿಸಿದ್ದಾರೆ. ಸಿಪಿಐ(ಎಂ)ನಿಂದ ಮುನಿವೆಂಕಟಪ್ಪ ಸ್ಪರ್ಧಿಸುತ್ತಿದ್ದಾರೆ. ಮತದಾರರ ಒಲವು ಯಾರ ಮೇಲಿದೆಯೋ ಕಾದು ನೋಡಬೇಕಿದೆ.
1996ರಿಂದ ಆರ್.ಎಲ್.ಜಾಲಪ್ಪ ಶಕೆ: 1996 ರಿಂದ ಆರ್.ಎಲ್.ಜಾಲಪ್ಪ ಶಕೆ ಪ್ರಾರಂಭವಾಗಿ ಜನತಾದಳದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ವಿ. ಮುನಿ ಯಪ್ಪ ಅವರನ್ನು ಸೋಲಿಸಿದ್ದರು. ನಂತರ 1998ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಆರ್.ಎಲ್.ಜಾಲಪ್ಪ, ಜನತಾದಳದ ಸಿ.ಭೈರೇಗೌಡ ಅವರನ್ನು ಸೋಲಿಸಿದ್ದರು. ನಂತರ ಕಾಂಗ್ರೆಸ್‌ನಿಂದಲೇ 1999ರಲ್ಲಿ ಎನ್.ರಮೇಶ್ ಅವರನ್ನು, 2004ರಲ್ಲಿ ಜನತಾದಳದಿಂದ ಸ್ಪರ್ಧಿಸಿದ್ದ ನಟ ಶಶಿಕುಮಾರ್ ಅವರನ್ನು ಸೋಲಿಸಿದ್ದರು.
ಚಿತ್ರನಟರಿಗೆ ಮಣೆ ಹಾಕದ ಮತದಾರರು : ಅಭಿನಯ ಶಾರದೆ ಜಯಂತಿ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ 1998ರಲ್ಲಿ ಲೋಕಶಕ್ತಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಕಾಂಗ್ರೆಸ್ಸಿನ ಆರ್.ಎಲ್. ಜಾಲಪ್ಪ ಎದುರು ಒಂದೂವರೆ ಲಕ್ಷ ಮತಗಳ ಅಂತರದಿಂದ ಪರಾಭವಗೊಂಡಿದ್ದರು. 2004ರಲ್ಲಿ ಜನತಾದಳದಿಂದ ಸ್ಪರ್ಧಿಸಿದ್ದ ನಟ ಶಶಿಕುಮಾರ್ ಅವರು ಆರ್.ಎಲ್.ಜಾಲಪ್ಪ ಅವರಿಂದ 60 ಸಾವಿರ ಮತ ಅಂತರದಿಂದ ಪರಾಭವಗೊಂಡಿದ್ದಾರೆ.
-ಡಿ.ಶ್ರೀಕಾಂತ