Advertisement

ಮೋದಿ ಹತ್ಯೆಗೆ ಸಂಚು? ಕೊಯಮತ್ತೂರಿನಲ್ಲಿ ವ್ಯಕ್ತಿಯ ಬಂಧನ, ವಿಚಾರಣೆ

05:20 AM Apr 25, 2018 | Karthik A |

ಕೊಯಮತ್ತೂರು: ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ನಡೆದಿದೆಯೇ? ಹೌದು ಎನ್ನುತ್ತಿದೆ ಈ ವರದಿ. 1998ರ ಕೊಯಮತ್ತೂರು ಸರಣಿ ಸ್ಫೋಟದಲ್ಲಿ ಶಿಕ್ಷೆ ಅನುಭವಿಸಿದ್ದ ಮೊಹಮ್ಮದ್‌ ರಫೀಕ್‌ ನನ್ನು ಈಗ ಇಂಥದ್ದೊಂದು ಆರೋಪದ ಮೇಲೆ ಸೋಮವಾರ ರಾತ್ರಿ ಬಂಧಿಸಲಾಗಿದೆ. ಗುತ್ತಿಗೆದಾರನೊಬ್ಬನ ಜತೆಗಿನ ಫೋನ್‌ ಸಂಭಾಷಣೆ ವೇಳೆ ಪ್ರಧಾನಿ ಮೋದಿ ಅವರನ್ನು ಹತ್ಯೆ ಮಾಡಲು ನಿರ್ಧರಿಸಲಾಗಿದೆ ಎಂಬ ಅಂಶವನ್ನು ರಫೀಕ್‌ ಹೇಳಿದ್ದಾಗಿ ಕೊಯಮತ್ತೂರು ಪೊಲೀಸರು ತಿಳಿಸಿದ್ದಾರೆ.

Advertisement

8 ನಿಮಿಷಗಳ ಸಂಭಾಷಣೆಯ ಈ ಧ್ವನಿಮುದ್ರಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಸಾರಿಗೆ ಗುತ್ತಿಗೆದಾರ ಪ್ರಕಾಶ್‌ ಅವರ ಜತೆ ಫೋನ್‌ನಲ್ಲಿ ಮಾತನಾಡುವಾಗ ರಫೀಕ್‌ ಈ ಅಂಶ ಹೇಳಿದ್ದು, ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಗುತ್ತಿಗೆದಾರನನ್ನು ಬೆದರಿಸಲು ಹೀಗೆ ಹೇಳಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ರಫೀಕ್‌ ವಿರುದ್ಧ  ಕೊಲೆ ಬೆದರಿಕೆ ಪ್ರಕರಣ ದಾಖಲಿಸಿದ್ದು, ಹೆಚ್ಚಿನ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ.


ರಫೀಕ್‌ ಹೇಳಿದ್ದೇನು?:
ಸಂಭಾಷಣೆ ವೇಳೆ ರಫೀಕ್‌, ‘1998ರಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ.ಆಡ್ವಾಣಿ ನಗರಕ್ಕೆ ಭೇಟಿ ನೀಡಿದ್ದಾಗಲೂ ಬಾಂಬ್‌ ಇರಿಸಿದ್ದೆ. ನನ್ನ ವಿರುದ್ಧ ಹಲವು ಕೇಸುಗಳಿದ್ದು, 100ಕ್ಕೂ ಹೆಚ್ಚು ವಾಹನಗಳನ್ನು ಧ್ವಂಸ ಮಾಡಿರುವೆ’ ಎಂದು ಹೇಳಿದ್ದಾನೆ. ಈತ ಕೊಯಮತ್ತೂರಿನ  ಕುಣಿಯಮತ್ತೂರು ಪ್ರದೇಶದ ನಿವಾಸಿ.

Advertisement

Udayavani is now on Telegram. Click here to join our channel and stay updated with the latest news.

Next