ಗಜೇಂದ್ರಗಡ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ಪಟ್ಟಣದ ವಾಕರ ಸಾರಿಗೆ ಘಟಕ ನೌಕರರು ಸಮೀಪದ ಮುಶಿಗೇರಿ ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರಿಗೆ ರವಿವಾರ ಮನವಿ ಸಲ್ಲಿಸಿದರು.
ಕಳೆದ ದಶಕಗಳಿಂದ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ ಸೌಲಭ್ಯಗಳನ್ನು ಕಲ್ಪಿಸುವಂತೆ ಸರ್ಕಾರಗಳಿಗೆ ಮೇಲಿಂದ ಮೇಲೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಸಾರಿಗೆ ನೌಕರರಿಗೆ ಉದ್ಯೋಗ ಭದ್ರತೆ ಇಲ್ಲದಂತಾಗಿದೆ. ಸರ್ಕಾರ ಯಾವುದೇ ವೇತನ ಆಯೋಗದ ಸೌಲಭ್ಯಗಳು ಸಿಗುತ್ತಿಲ್ಲ. ಹೆಸರಿಗೆ ಮಾತ್ರ ಸರ್ಕಾರಿ ಸಾರಿಗೆ ನೌಕರರು. ಆದರೆ ವಾಸ್ತವ್ಯದಲ್ಲಿ ಖಾಸಗಿ ನೌಕರರಿಗಿಂತ ಕೆಳಹಂತದಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಸಮಸ್ಯೆಗಳಿಗೆ ಸರ್ಕಾರಗಳು ಸ್ಪಂದಿಸುತ್ತಿಲ್ಲ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರಿ ನೌಕರರಿಗೆ ನೀಡುವ ಎಲ್ಲ ಸವಲತ್ತುಗಳನ್ನು ನೀಡಬೇಕು. ಜೊತೆಗೆ ಸರ್ಕಾರಿ ನೌಕರರೆಂದು ಪರಿಗಣಿಸಿ ಎಲ್ಲ ಸೌಲತ್ತುಗಳನ್ನು ಕಲ್ಪಿಸಲು ಸಚಿವರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಬೇಕೆಂದರು.
ಸಂಘಟಕರಿಂದ ಮನವಿ ಸ್ವೀಕರಿಸಿದ ಸಚಿವ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ಈ ಕುರಿತು ಸರ್ಕಾರ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಸಾರಿಗೆ ನೌಕರರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ ಎಂದರು.
ಎಸ್.ಕೆ. ಅಯ್ಯನಗೌಡರ, ಎನ್.ಕೆ. ಘೋರ್ಪಡೆ, ಎ.ವಿ. ಭಾಂಡಗೆ, ಎಚ್.ಎಚ್. ದಿವಾಣದ, ಎ.ಜಿ. ಕುಂಬಾರ, ಎಸ್.ಎಲ್. ಪಾಟೀಲ, ಆರ್.ಸಿ. ರಾಠೊಡ, ಬಿ.ಎಂ. ಬಂಡಿ, ಎಂ.ಎಚ್. ದಿಡ್ಡಮನಿ, ಐ.ಸಿ. ಬಡಿಗೇರ, ಎ.ಎಫ್. ಪೋಳದ, ಎಸ್.ಎಂ. ಚಳಗೇರಿ, ಎಂ. ಬಸವರಾಜ, ಎಸ್.ಕೆ ಭಜೇಂತ್ರಿ, ಎಸ್.ಬಿ ಗೌಡರ, ಎಂ.ಎಚ್ ಯಲಬುರ್ಗಾ, ಕೆ.ಪಿ ಗ್ಯಾತಗಿ, ಶಶಿ ಕೊಡಕೇರಿ, ಎಚ್.ಎ ನೆಲ್ಲೂರ ಇತರರು ಇದ್ದರು.