Advertisement
ಅಧಿಕಾರದ ಮೊದಲ ದಿನವೇ “ಅಮೆರಿಕ ಪೌರತ್ವ ಕಾಯ್ದೆ 2021’ಯ ಬಗ್ಗೆ ಪರಿಶೀಲನೆ ನಡೆಸಿ ಸಮ್ಮತಿ ಸೂಚಿಸಿದ್ದಾರೆ. ಜತೆಗೆ ಅದನ್ನು ಅನುಮೋದಿಸಲು ಸಂಸತ್‌ಗೆ ಕಳುಹಿಸಿಕೊಟ್ಟಿದ್ದಾರೆ. ಸೂಕ್ತ ದಾಖಲೆ ಹೊಂದಿಲ್ಲದ ವಲಸಿಗರು, ಎಚ್-1 ಬಿ ವೀಸಾ ಮೂಲಕ ಅಮೆರಿಕಕ್ಕೆ ತೆರಳಿ ಅಲ್ಲಿನ ಪೌರತ್ವ ಹೊಂದುವವರಿಗೆ ಈ ಕಾಯ್ದೆ ನೆರವಾಗಲಿದೆ. ಅದರಲ್ಲಿ ನಿಗದಿತ ದೇಶಕ್ಕೆ ಇಂತಿಷ್ಟೇ ಸಂಖ್ಯೆಯಲ್ಲಿ ಗ್ರೀನ್ ಕಾರ್ಡ್ ನೀಡುವ ಮಿತಿ ತೆಗೆದು ಹಾಕಲು ಸಲಹೆ ಮಾಡಲಾಗಿದೆ. ಇದರಿಂದಾಗಿ ದಶಕಗಳ ಕಾಲ ಅಮೆರಿಕದಲ್ಲಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಮತ್ತು ಇತರ ಕ್ಷೇತ್ರದ ಉದ್ಯೋಗಿಗಳಿಗೆ ಪೌರತ್ವ ಪಡೆಯಲು ಕಾಯುತ್ತಿದ್ದವರಿಗೆ ನೆರವಾಗಲಿದೆ. ಟ್ರಂಪ್ ಸರಕಾರದ ಅವಧಿಯಲ್ಲಿ ಎಚ್-1ಬಿ ವೀಸಾ ಹೊಂದಿದವರ ಸಂಗಾತಿಗಳಿಗೆ ಕೆಲಸ ಮಾಡುವ ಅಧಿಕಾರ ಇಲ್ಲ. ಹೊಸ ನೀತಿಯಲ್ಲಿ ಅದನ್ನು ಮತ್ತೆ ಜಾರಿ ಗೊಳಿಸಲು ಸಲಹೆ ಮಾಡಲಾಗಿದೆ.
ಚುನಾವಣೆಯ ಸಮಯದಲ್ಲಿ ಜೋ ಬೈಡೆನ್ ಹಾಗೂ ಕಮಲಾ ಹ್ಯಾರಿಸ್ ಅವರ ಭಾಷಣ ರಚನೆಕಾರರಾಗಿದ್ದ ಭಾರತೀಯ ಮೂಲದ ವಿನಯ ರೆಡ್ಡಿ ಈಗ ಶ್ವೇತ ಭವನದ ಭಾಷಣ ರಚನೆ ತಂಡದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ವಿನಯ್ ರೆಡ್ಡಿ ಹುಟ್ಟಿ ಬೆಳೆದದ್ದು ಅಮೆರಿಕದಲ್ಲೇ ಆದರೂ ಅವರ ಕುಟುಂಬದ ಮೂಲವಿರುವುದು ತೆಲಂಗಾಣದ ಪೋತಿರೆಡ್ಡಿ ಪೇಟ ಎಂಬ ಪುಟ್ಟ ಗ್ರಾಮದಲ್ಲಿ.
Related Articles
ಶ್ವೇತ ಭವನದಿಂದ ನಿರ್ಗಮಿಸುವ ಮೊದಲು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೃತ್ಪೂರ್ವಕ ಸಲಹೆಗಳನ್ನು ನೀಡಿದ್ದಾರೆ ಎಂದು ಅಧ್ಯಕ್ಷ ಬೈಡೆನ್ ಹೇಳಿದ್ದಾರೆ. ಇದೊಂದು ಖಾಸಗಿ ವಿಚಾರವಾಗಿರುವ ಅಂಶವಾದ್ದರಿಂದ ಅದನ್ನು ಬಹಿರಂಗವಾಗಿ ಮಾತನಾಡುವು ದಿಲ್ಲ. ನಿಕಟ ಪೂರ್ವ ಅಧ್ಯಕ್ಷರ ಜತೆಗೆ ಮಾತನಾಡುವೆ ಎಂದಿದ್ದಾರೆ.
Advertisement