Advertisement
ಎಲ್ಲ ವಯೋಮಾನದವರನ್ನು ಮಲೇರಿಯಾ ಕಾಯಿಲೆ ಕಾಡುತ್ತದೆಯಾದರೂ ಮಕ್ಕಳ ಪಾಲಿಗೆ ಇದು ಯಮದೂತನೇ ಸರಿ. ಬಡತನ ವ್ಯಾಪಕವಾಗಿರುವ ದೇಶಗಳಲ್ಲಿ ಪ್ರತೀ ವರ್ಷ ಈ ಕಾಯಿಲೆಯಂದ ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದು ಈ ಪೈಕಿ ಮಕ್ಕಳ ಸಂಖ್ಯೆಯೇ ಅಧಿಕ. ಅದರಲ್ಲೂ ಆಫ್ರಿಕನ್ ದೇಶಗಳಲ್ಲಿ ಮಲೇರಿಯಾ ಬಾಧೆ ಅಧಿಕವಾಗಿದ್ದು ನಿರಂತರವಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಪ್ರಾಣಹಾನಿ ಸಂಭವಿಸುತ್ತಿರುತ್ತದೆ. ಮಲೇರಿಯಾಕ್ಕೆ ತುತ್ತಾಗುವ ಮಕ್ಕಳ ಪ್ರಾಣ ರಕ್ಷಣೆಗಾಗಿ ಕಳೆದ ಮೂರು ದಶಕಗಳಿಂದ ವಿವಿಧ ದೇಶಗಳ ವೈದ್ಯಕೀಯ ತಜ್ಞರು ನಿರಂತರ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದರು. ಇದರ ಫಲವಾಗಿ ಕೆಲವೊಂದು ಲಸಿಕೆಗಳನ್ನು ಸಂಶೋಧಿಸಲಾಗಿತ್ತಾದರೂ ಅದರ ಪರಿಣಾಮಕತ್ವದ ಬಗೆಗೆ ಅನುಮಾನಗಳು ಮೂಡಿದ್ದರಿಂದಾಗಿ ಈ ಲಸಿಕೆಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮೋದನೆ ಲಭಿಸಿರಲಿಲ್ಲ.
Related Articles
ಮಾಸ್‌ಕ್ವಿರಿಕ್ಸ್ ಲಸಿಕೆ ಕೊರೊನಾ ನಿರೋಧಕ ಲಸಿಕೆಯ ಮಾದರಿಯಲ್ಲಿಯೇ ಕೇವಲ ಮಲೇರಿಯಾ ನಿರೋಧಕ ಲಸಿಕೆಯೇ ಹೊರತು ಇದು ಮಲೇರಿಯಾ ಕಾಯಿಲೆಗೆ ಔಷಧವಲ್ಲ. ಮಾಸ್‌ಕ್ವಿರಿಕ್ಸ್ ಲಸಿಕೆಯನ್ನು ಪಡೆದ ಮಕ್ಕಳಿಗೆ ಮಲೇರಿಯಾ ಕಾಯಿಲೆ ಬಾಧಿಸಿದರೂ ಪ್ರಾಣಾಪಾಯದಿಂದ ಅವರನ್ನು ರಕ್ಷಿಸಲಿದೆಯಲ್ಲದೆ ಕಾಯಿಲೆ ಗಂಭೀರ ಪರಿಸ್ಥಿತಿಗೆ ತಲುಪುವುದನ್ನೂ ನಿಯಂತ್ರಿಸಲಿದೆ. ಅಷ್ಟು ಮಾತ್ರವಲ್ಲದೆ ಈ ಲಸಿಕೆ ಪಡೆದ ಮಕ್ಕಳಿಗೆ ಹೈಪಟೈಟಿಸ್ ವೈರಸ್‌ನಿಂದ ಎದುರಾಗಬಹುದಾದ ಹಲವು ತೊಂದರೆಗಳಿಂದಲೂ ರಕ್ಷಣೆ ಒದಗಿಸಲಿದೆ. ಸದ್ಯ ಈ ಲಸಿಕೆಯ ಪರಿಣಾಮಕತ್ವ ಶೇ.30ರಷ್ಟು ಮಾತ್ರವೇ ಆಗಿದ್ದರೂ ಮಲೇರಿಯಾ ಪೀಡಿತ ಮಕ್ಕಳ ಪ್ರಾಣ ರಕ್ಷಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಲಿರುವುದಂತೂ ನಿಸ್ಸಂಶಯ.
Advertisement