Advertisement

81 ಮಂದಿ ಜೈಲು ಸಿಬ್ಬಂದಿಗೆ ಲಂಚ ನೀಡಿದ ಸುಕೇಶ್ ಚಂದ್ರಶೇಖರ್: ಪೊಲೀಸ್ ತನಿಖೆ

02:43 PM Jul 10, 2022 | Team Udayavani |

ನವದೆಹಲಿ: ದೆಹಲಿಯ ರೋಹಿಣಿ ಜೈಲಿನಲ್ಲಿರುವ 80 ಕ್ಕೂ ಹೆಚ್ಚು ಅಧಿಕಾರಿಗಳು ಜೈಲಿನೊಳಗಿದ್ದುಕೊಂಡು ಅಕ್ರಮ ವ್ಯವಹಾರ ನಡೆಸುತ್ತಿರುವ ಸುಕೇಶ್ ಚಂದ್ರಶೇಖರ್ ನಿಂದ ಲಂಚ ಪಡೆದ ಆರೋಪವನ್ನು ಎದುರಿಸುತ್ತಿದ್ದಾರೆ.

Advertisement

ಸುಕೇಶ್ ಚಂದ್ರಶೇಖರ್ ಗೆ ಜೈಲಿನ ಹೊರಗೆ ತನ್ನ ಸಹಚರರನ್ನು ಸಂಪರ್ಕಿಸಲು ಅಧಿಕಾರಿಗಳು ಮೊಬೈಲ್ ಫೋನ್‌ಗಳು ಮತ್ತು ಇತರ ಸೌಲಭ್ಯಗಳನ್ನು ಒದಗಿಸಿದ್ದಾರೆ. ಹೀಗಾಗಿ 81 ಅಧಿಕಾರಿಗಳ ವಿರುದ್ಧ ಎಂದು ದೆಹಲಿ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗ ಪ್ರಕರಣ ದಾಖಲಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಜೈಲು ಆಸ್ಪತ್ರೆಯಲ್ಲಿ ಕೆಲಸ ಮಾಡುವ ನರ್ಸಿಂಗ್ ಸಿಬ್ಬಂದಿಯ ಸಹಾಯ ಪಡೆದು ಸುಕೇಶ್ ಚಂದ್ರಶೇಖರ್ ತನ್ನ ಪರಿಚಯಸ್ಥರನ್ನು ಸಂಪರ್ಕ ಮಾಡಿದ್ದ.

ಸುಕೇಶ್ ಚಂದ್ರಶೇಖರ್ ಮನಿ ಲಾಂಡರಿಂಗ್ ಮತ್ತು ಹಲವರಿಗೆ ವಂಚಿಸಿದ ಆರೋಪದ ಮೇಲೆ ಜೈಲು ವಾಸ ಅನುಭವಿಸುತ್ತಿದ್ದಾನೆ.

ಇದನ್ನೂ ಓದಿ:ದೇಶಕ್ಕೆ ಕಾಳಿ ಮಾತೆಯ ಆಶೀರ್ವಾದ ಸದಾ ಇದೆ : ಪ್ರಧಾನಿ ಮೋದಿ

Advertisement

ಜೈಲು ಸಿಬ್ಬಂದಿಯಿಂದ ತನಗೆ ನಿರಂತರವಾಗಿ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ಕಳೆದ ಜೂನ್‌ ನಲ್ಲಿ ಸುಕೇಶ್ ಚಂದ್ರಶೇಖರ್ ತನ್ನ ಪತ್ನಿಯೊಂದಿಗೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಕಳೆದ ಎರಡು ವರ್ಷಗಳಲ್ಲಿ ತಿಹಾರ್ ಜೈಲಿನ ಸಿಬ್ಬಂದಿ ಸುಮಾರು 12.5 ಕೋಟಿ ರೂ. ಸುಲಿಗೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಕರ್ನಾಟಕ ಮೂಲದ ಸುಕೇಶ್ ಚಂದ್ರಶೇಖರ್ ಬಹುಕೋಟಿ ವಂಚನೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರೊಂದಿಗೆ ಸ್ನೇಹ ಸಂಬಂಧ ಹೊಂದಿದ್ದ, ದೊಡ್ಡ ಸುದ್ದಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next