ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ನಿಂದ ಯಾರೇ ನಿಂತರೂ ಗೆಲ್ತಾರೆ ಎಂದು ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ’ಜಿಲ್ಲೆಯಲ್ಲಿ ಲೋಕಸಭೆಯ ಅಭ್ಯರ್ಥಿ ಯಾರಾಗ ಬೇಕೆಂದು ಚರ್ಚೆ ನಡೆದಿದೆ.ನನಗೆ ಯಾರೂ ಈತನಕ ಅರ್ಜಿ ಕೊಟ್ಟಿಲ್ಲ. ರವೀಂದ್ರನಾಥ್ ನಾಯ್ಕ ಸಹ ಅಭ್ಯರ್ಥಿ ಆಗುವ ಬಗ್ಗೆ ಕೇಳಿಲ್ಲ ಎಂದರು. ಹೊಸ ಮುಖಕ್ಕೆ ಟಿಕೆಟ್ ಕೊಡ್ತಿರಾ ಎಂಬ ಪ್ರಶ್ನೆಗೆ, ‘ಆಗಬಹುದು. ಆದರೆ ಹೈಕಮಾಂಡ್ ನಿರ್ಣಯ ಅಂತಿಮ. ದೇಶಪಾಂಡೆ ಹಿರಿಯರು, ಅವರು ನಿಂತರೆ ಗೆಲುವು ಖಚಿತ ಎಂದರು . ಕಾಂಗ್ರೆಸ್ ಈ ಸಲ ಗೆಲ್ಲಲಿದೆ. ಯಾರೇ ನಿಂತರೂ ಗೆಲ್ತಾರೆ’ ಎಂದರು.
‘ಶಾಸಕ ಶಿವರಾಮ ಹೆಬ್ಬಾರ್ ಸ್ನೇಹಿತ. ಅವರ ತವರು ಮನೆ ಕಾಂಗ್ರೆಸ್. ಹಾಗಾಗಿ ನಮ್ಮ ಜತೆ ಹತ್ತಿರ ಇರ್ತಾರೆ. ಅವರು ಯಾವಾಗಲೂ ನಮ್ಮ ಪಕ್ಷಕ್ಕೆ ಬರಬಹುದು. ಆದರೆ ಈ ಬಗ್ಗೆ ನಮ್ಮ ಜತೆ ಚರ್ಚೆ ಮಾಡಿಲ್ಲ’ ಎಂದರು.
ಕಿತ್ತೂರು, ಖಾನಾಪುರ ಕ್ಷೇತ್ರಗಳಲ್ಲಿ 4 ಲಕ್ಷ ಮತಗಳಿವೆ . ಉತ್ತರ ಕನ್ನಡದಲ್ಲಿ 11 ಲಕ್ಷ ಮತಗಳಿವೆ. ಹಾಗಾಗಿ ಈ ಸಲ ಕಿತ್ತೂರು ಖಾನಾಪುರ ಕಡೆ ಟಿಕೆಟ್ ಹೋಗುವ ಸುಳಿವನ್ನು ಪರೋಕ್ಷವಾಗಿ ವೈದ್ಯ ನೀಡಿದರು. ಇದು ನಿಜವಾದಲ್ಲಿ ಡಾ.ಅಂಜಲಿ ನಿಂಬಾಳಕರ್ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಲೆಯ ಹೊರತಾಗಿಯೂ ಅಂಜಲಿ ನಿಂಬಾಳಕರ್ ಅವರು ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಟ್ಠಲ್ ಸೋಮಣ್ಣ ಹಲಗೆಕರ ವಿರುದ್ಧ ಸೋಲು ಅನುಭವಿಸಿದ್ದರು.