ಚಾಮರಾಜನಗರ: ಯುವ ಕಾಂಗ್ರೆಸ್‌ನಿಂದಕೋವಿಡ್ ಸೋಂಕಿತರು ಆಸ್ಪತ್ರೆಗೆ ತೆರಳಲು ಉಚಿತಆ್ಯಂಬುಲೆನ್ಸ್ ನೀಡುವ ಸೇವೆಗೆ ಕೆಪಿಸಿಸಿಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣಮಂಗಳವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಮುಂಭಾಗ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ರಾಜ್ಯ ಯುವಕಾಂಗ್ರೆಸ್ ವತಿಯಿಂದ ಉಚಿತ ಆ್ಯಂಬುಲೆನ್ಸ್ ಸೇವೆಹಾಗೂ ಹೋಂ ಐಸೋಲೇಷನ್‌ನಲ್ಲಿ ಇರುವಸೋಂಕಿತರಿಗೆ ಟ್ಯಾಬ್ಲೆಟ್ ಕಿಟ್ ವಿತರಿಸಲಾಗುವುದು.ಆ್ಯಂಬುಲೆನ್ಸ್‌ನಲ್ಲಿ ಆಕ್ಸಿಜನ್ ಸೌಲಭ್ಯವಿದೆ.
ಕಂಟ್ರೋಲ್ ರೂಂನ ದೂರವಾಣಿಗೆ ಕರೆ ಮಾಡಿದರೆಸ್ಥಳಕ್ಕೆ ಆ್ಯಂಬುಲೆನ್ಸ್ ಸೇವೆ ದೊರೆಯುತ್ತದೆ. 500ಟ್ಯಾಬ್ಲೆಟ್ ಕಿಟ್ ಕಳುಹಿಸ ಲಾಗಿದ್ದು, ಜಿಲ್ಲೆಯ 4ಕ್ಷೇತ್ರಗಳಲ್ಲೂ ವಿತರಿಸಲಾಗುವುದು ಎಂದರು.
ಚಾ.ನಗರ ಜಿಲ್ಲಾಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್‌ದುರಂತವೂ ಸೇರಿ 24 ಜನರು ಮೃತಪಟ್ಟರೂಮುಖ್ಯಮಂತ್ರಿ ಭೇಟಿ ನೀಡಿ ಕುಟುಂಬಗಳಿಗೆಸಾಂತ್ವನ ಹೇಳಿಲ್ಲ. ಜೊತೆಗೆ ಯಾವುದೇ ಪರಿಹಾರಷೋಷಿಸಿಲ್ಲ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್‌ಅವರು ಈ ಘಟನೆ ನಡೆದ ನಂತರ ಕಾರ್ಯಪ್ರವೃತ್ತರಾಗಿದ್ದಾರೆ. ಈ ಕೆಲಸವನ್ನು ಮೊದಲೇ ಮಾಡಿದ್ದರೆಹಲವು ಜನರ ಪ್ರಾಣ ಉಳಿಸಬಹುದಿತ್ತು ಎಂದರು.
ಧ್ವನಿ ಇಲ್ಲದ ಸಂಸದರು: ರಾಜ್ಯದ 25 ಸಂಸದರುಹಾಗೂ ಕೇಂದ್ರ ಸಚಿವರು ಚಾಮರಾಜನಗರಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ ನ್ಯಾಯಒದಗಿಸಲು ಆಗಲಿಲ್ಲ. ಇವರೆಲ್ಲರೂ ಧ್ವನಿ ಇಲ್ಲದಸಂಸದರಾಗಿದ್ದಾರೆ. ಕೇಂದ್ರ ಸರ್ಕಾರವು ಮಲತಾಯಿಧೋರಣೆ ಅನುಸರಿಸುತ್ತಿದೆ ಎಂದು ತಿಳಿಸಿದರು.
ಈ ವೇಳೆ ಜಿಪಂ ಸದಸ್ಯ ಕೆರೆಹಳ್ಳಿ ನವೀನ್, ಜಿಲ್ಲಾಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್,ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವು, ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಸರ್ ಮುನ್ನಾ,ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಅಜೀಜ್,ಮುಖಂಡರಾದ ಸಯ್ಯದ್ ರಫಿ, ವಕೀಲ ಅರುಣ್‌ಕುಮಾರ್ ಇತರರಿದ್ದರು.