Advertisement

ಬಿಜೆಪಿ ಕಚೇರಿಗೆ ಕಾಂಗ್ರೆಸ್‌ ಕಾರ್ಯಕರ್ತರ ಮುತ್ತಿಗೆ

02:28 PM Jul 11, 2017 | Team Udayavani |

ಚಿತ್ರದುರ್ಗ: ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಒತ್ತಾಯಿಸಿ ಜಿಲ್ಲಾ ಯುವ ಕಾಂಗ್ರೆಸ್‌ ವತಿಯಿಂದ ನಗರದ ಜಿಲ್ಲಾ ಬಿಜೆಪಿ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ 
ಪ್ರತಿಭಟಿಸಲಾಯಿತು.

Advertisement

ಸುಳ್ಳು ಭರವಸೆ ನೀಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ, ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ರೈತರು ಬಿಜೆಪಿಗೆ ಮತ ಹಾಕುತ್ತಿಲ್ಲವೇ, ರೈತರ ಸಾಲವನ್ನೇಕೆ ಮನ್ನಾ ಮಾಡುತ್ತಿಲ್ಲ ಎಂದು ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ರಾಜ್ಯದ ಸಹಕಾರಿ ಬ್ಯಾಂಕುಗಳಲ್ಲಿ ರೈತರು ಮಾಡಿದ ಸಾಲವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮನ್ನಾ ಮಾಡಿದ್ದಾರೆ. ಇದರಿಂದಾಗಿ 8165 ಕೋಟಿ ರೂ.ಗಳ ರೈತರ ಸಾಲ ಮನ್ನಾ ಆಗಿದೆ. ರಾಜ್ಯದ
22,27, 506 ರೈತರು ಸಾಲ ಮನ್ನಾದ ಪ್ರಯೋಜನ ಪಡೆದಿದ್ದಾರೆ. ಉಳಿದ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಬೇಕು. ರಾಜ್ಯ ಬಿಜೆಪಿ ನಾಯಕರು ಹೋದಲ್ಲೆಲ್ಲ ಬೊಬ್ಬೆ ಹಾಕುವುದನ್ನು ಬಿಡಬೇಕು. ರೈತರ ಬಗ್ಗೆ ಕನಿಷ್ಠ ಕಾಳಜಿಯಾದರೂ ಇದ್ದರೆ ಕೂಡಲೇ
ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಸಾಲ ಮನ್ನಾ ಮಾಡಿಸಬೇಕು ಎಂದು ಒತ್ತಾಯಿಸಿದರು. 

ಯುಪಿಎ ಸರ್ಕಾರ ದೇಶದ ರೈತರ 72 ಸಾವಿರ  ಕೋಟಿ ರೂ.ಗಳ ಸಾಲ ಮನ್ನಾ ಮಾಡಲಾಗಿತ್ತು. ಪ್ರಧಾನಿ ಮೋದಿಯವರು ಆರಂಭದಲ್ಲಿ ವಿದೇಶದಲ್ಲಿರುವ ಕಪ್ಪುಹಣವನ್ನು ತಂದು ದೇಶದ ಪ್ರತಿಯೊಬ್ಬ ಪ್ರಜೆಯ ಖಾತೆಗೆ 15 ಲಕ್ಷ ರೂ. ಜಮಾ ಮಾಡುವುದಾಗಿ ಹೇಳಿದ್ದರು. ಆದರೆ ದೇಶದ ಯಾವ ಪ್ರಜೆಯ ಖಾತೆಗೂ ಹಣ ಹಾಕಲಿಲ್ಲ. ಎಷ್ಟು ಕಪ್ಪುಹಣ ಬಂತು ಎಂಬ ಮಾಹಿತಿಯನ್ನೂ 
ಬಹಿರಂಗಪಡಿಸಲಿಲ್ಲ. ಈ ಹಣದಲ್ಲಾದರೂ ರೈತರ ಸಾಲ ಮನ್ನಾ ಮಾಡಬೇಕು ಎಂದರು.

ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಧು ಪಾಲೇಗೌಡ, ಉಪಾಧ್ಯಕ್ಷರಾದ ಉಲ್ಲಾಸ್‌, ರೆಹಮಾನ್‌, ರಾಜ್ಯ ಕಾರ್ಯದರ್ಶಿ ಡಾ| ಯೋಗೇಶ್‌ ಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಶಿ, ಕಾರ್ತಿಕ್‌, ಜಮೀಲ್‌, ಹರ್ಷ ಅಜಮ್‌, ವಸೀಮ್‌, ರಫಿ, ಕಾರ್ಯದರ್ಶಿಗಳಾದ ಅಶ್ವಿ‌ನ್‌, ಶಶಾಂಕ್‌, ಮೊಹಿನುದ್ದಿನ್‌, ಮಹಮ್ಮದ್‌, ಮಧುಗೌಡ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹಸನ್‌ ತಾಹಿರ್‌, ಉಪಾಧ್ಯಕ್ಷ ಆರ್‌. ಅಶೋಕ್‌ ನಾಯ್ಡು, ಪ್ರಧಾನ ಕಾರ್ಯದರ್ಶಿ ಶೌಕತ್‌, ಮೊಳಕಾಲ್ಮೂರು ವಿಧಾನಸಭಾಕ್ಷೇತ್ರದ ಅಧ್ಯಕ್ಷ ದಾದಾಪೀರ್‌, ಹೊಳಲ್ಕೆರೆ ವಿಧಾನಸಭಾಕ್ಷೇತ್ರ ಅಧ್ಯಕ್ಷ ರಮೇಶ್‌, ಹಿರಿಯೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ರಫಿವುಲ್ಲಾ, ಉಪಾಧ್ಯಕ್ಷ ಸಿಗ್ಬತ್‌ವುಲ್ಲಾ, ಪ್ರಧಾನ ಕಾರ್ಯದರ್ಶಿ ಶಾಹಿದ್‌, ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶಿವಕುಮಾರಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next