Advertisement

ಸಂಸತ್‌ ಸದಸ್ಯತ್ವದಿಂದ ರಾಹುಲ್‌ಅನರ್ಹ: ಕೈ ಪ್ರತಿಭಟನೆ

12:15 PM Mar 30, 2023 | Team Udayavani |

ದೇವನಹಳ್ಳಿ: ಭಾರತ್‌ ಜೋಡೋ ಯಾತ್ರೆ ಯನ್ನು ಹಮ್ಮಿಕೊಂಡು ಕಾಶ್ಮೀರದಿಂದ ಕನ್ಯಾ ಕುಮಾರಿ ಯವರೆಗೆ ನಡೆದು ಯಶಸ್ವಿಗೊಳಿಸಿರುವ ಹಿನ್ನೆಲೆಯಲ್ಲಿ ರಾಹುಲ್‌ಗಾಂಧಿ ಅವರನ್ನು ಗುಜರಾತ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ರಾಹುಲ್‌ ಗಾಂಧಿ ಅವರಿಗೆ ಸಂಸತ್‌ ಸದಸ್ಯತ್ವವನ್ನು ರದ್ದು ಗೊಳಿಸಿರುವುದನ್ನು ಖಂಡಿಸಲಾಗುತ್ತಿದೆ ಎಂದು ಕೆಪಿಸಿಸಿ ಸದಸ್ಯ ಲಕ್ಷೀಪತಿ ತಿಳಿಸಿದರು.

Advertisement

ದೇವನಹಳ್ಳಿ ತಾಲೂಕಿನ ಜಿಲ್ಲಾಡಳಿತ ಭವನದ ಎದುರು ಜಿಲ್ಲಾ ಕಾಂಗ್ರೆಸ್‌ ಪರಿಶಿಷ್ಟ ವರ್ಗ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಜಂಟಿ ಆಶ್ರಯದಲ್ಲಿ ಜೈ ಭಾರತ ಸತ್ಯಗ್ರಹ ಪ್ರತಿಭಟನೆಯಲ್ಲಿ ಮಾತನಾಡಿ, ಲೋಕಸಭಾ ಸ್ಪೀಕರ ಸ್ಥಾನ ಅಲಂಕರಿಸ ಬೇಕಾದರೆ ಅವರು ಯಾವ ಪಕ್ಷದಿಂದ ಆಯ್ಕೆಯಾಗಿರುತ್ತಾರೋ ಪ್ರತಿನಿಧಿ ಸೇವೆಗೆ ಸಂಸತ್‌ನಲ್ಲಿ ಅ ಪಕ್ಷಕ್ಕೆ ರಾಜೀನಾಮೆ ನೀಡಿ ಲೋಕಸಭಾ ಸ್ಥಾನವನ್ನು ಅಲಂಕರಿಸಿದ್ದಾರೆ. ಎಲ್ಲಾ ಪಕ್ಷಗಳ ಸಂಸತ್‌ ಸದಸ್ಯರುಗಳು ಒಂದೇ ರೀತಿಯಲ್ಲಿ ನ್ಯಾಯ ಒದಗಿಸುವ ಉದ್ದೇಶವನ್ನು ಸ್ಪೀಕರ್‌ದ್ದಾಗಿರುತ್ತದೆ. ಆದರೆ, ಗುಜರಾತ್‌ನ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಒಂದು ಟ್ರಯಲ್‌ ಕೋರ್ಟ್‌ ಆಗಿರುತ್ತದೆ. ಲೋಕಸಭಾ ಸುಪ್ರೀಂ ಕೋರ್ಟ್‌ ವ್ಯಾಪ್ತಿಗೆ ಬರುತ್ತದೆ. ವಿಧಾನಸಭಾ ಹೈಕೋರ್ಟ್‌ ವ್ಯಾಪ್ತಿಗೆ ಬರುತ್ತದೆ. ಆದರೆ, ಮ್ಯಾಜಿ ಸ್ಟ್ರೇಟ್‌ ವ್ಯಾಪ್ತಿಗೆ ಬರದಿದ್ದರೂ ಸಹ ತೀರ್ಪು ಕೊಟ್ಟು ತಕ್ಷ ಣವೇ ಜಾಮೀನು ಮಂಜೂರು ಮಾಡಿ ಆ ತೀರ್ಪನ್ನು ಮೂವತ್ತು ದಿನಗಳ ಕಾಲ ಅಮಾ ನತ್ತಿನಲ್ಲಿಟ್ಟು, ಮೇಲ್ಮನವಿ ಸಲ್ಲಿಸುವುದಕ್ಕೆ ಕಾಲಾವ ಕಾಶ ಕೂಡದಿದ್ದರೂ ಸಂಸತ್‌ ಸದಸ್ಯತ್ವದಿಂದ ಕಾನೂನು ಬಾಹಿರವಾಗಿ ಅನರ್ಹಗೂಳಿಸಿರುವುದು ರಾಜಕೀಯದ ದುರುದ್ದೇಶವನ್ನದೇ ಮತ್ತೇನಾಗಿದೆ. ಈ ರೀತಿಯ ಡೊಂಕು ರಾಜಕಾರಣವನ್ನು ಮಾಡಿ ದರೆ, ಮುಂದಿನ ದಿನಗಳಲ್ಲಿ ದೇಶದ ಮತ್ತು ರಾಜ್ಯದ ಪ್ರಜ್ಞಾವಂತ ಸಮಾಜದ ಜನರೇ ಸರಿಯಾಗಿ ಉತ್ತರಿ ಸುತ್ತಾರೆ ಎಂದರು.

ಸದಸ್ಯತ್ವ ರದ್ದು ರಾಜಕೀಯದ ದುರುದ್ದೇಶ: ಪ್ರತಿ ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ಕಾರ್ಯ ಕರ್ತರು, ಮುಖಂಡರು ರಾಹುಲ್‌ಗಾಂಧಿ ಯವರಿಗೆ ಆಗಿರುವ ಅನ್ಯಾಯಕ್ಕೆ ಧ್ವನಿ ಯೆತ್ತುತ್ತಿದ್ದೇವೆ. ಸಂಸತ್‌ ಸದಸ್ಯತ್ವ ರದ್ದುಗೊಳಿಸಿ ರುವುದನ್ನು ವಾಪಾಸ್‌ ಪಡೆ ಯುವ ತನಕ ಹೋರಾಟ ಮಾಡುವುದನ್ನು ಬಿಡುವುದಿಲ್ಲವೆಂದು ಆಕ್ರೋಶ ಹೊರ ಹಾಕಿದರು.

ನೂರಾರು ಸಂಖ್ಯೆ ಯಲ್ಲಿ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯ ಕರ್ತರು ಕಪ್ಪುಪಟ್ಟಿ ಪ್ರದರ್ಶಿಸುವುದರ ಮೂಲಕ ಪ್ರತಿ ಭಟನೆಯನ್ನು ನಡೆಸಿದರು.

ಪ್ರತಿಭಟನಾ ಸ್ಥಳದಲ್ಲಿ ಪೊಲೀಸರ ಬಿಗಿ ಭದ್ರತೆ ಏರ್ಪಡಿಸ ಲಾಗಿತ್ತು. ಈ ವೇಳೆಯಲ್ಲಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ವೆಂಕಟರಮಣಯ್ಯ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಆರ್‌.ಗೌಡ, ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಲೋಕೇಶ್‌, ಅಲ್ಪ ಸಂಖ್ಯಾತರ ಜಿಲ್ಲಾ ಕಾರ್ಯದರ್ಶಿ ಬಿ.ನಯಾಜ್‌ ಅಹಮದ್‌, ಮುಖಂಡರಾದ ಭೈರೇಗೌಡ, ಬೈಚಾಪುರ ರಾಜಣ್ಣ, ಕನ್ನಮಂಗಲ ಪಾಳ್ಯ ಸೋಮಶೇಖರ್‌, ನಾರಾಯಣಸ್ವಾಮಿ, ಕಾಂಗ್ರೆಸ್‌ ಹಿರಿಯ ಮುಖಂಡರು, ಕಾಂಗ್ರೆಸ್‌ಯುವ ಘಟಕ ಕಾರ್ಯಕರ್ತರು, ಮಹಿಳಾ ಪದಾಧಿಕಾರಿಗಳು ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next