Advertisement

Allu Arjun ಮನೆಗೆ ದಾಳಿ: ಕಾಂಗ್ರೆಸ್‌ ಕೈವಾಡ?

01:00 AM Dec 24, 2024 | Shreeram Nayak |

ಹೈದರಾಬಾದ್‌: “ಪುಷ್ಪ-2′ ನಟ ಅಲ್ಲು ಅರ್ಜುನ್‌ ಮನೆ ಹೊರಗೆ ಉಸ್ಮಾನಿಯಾ ವಿವಿ ಜಂಟಿ ಕ್ರಿಯಾ ಸಮಿತಿ ಜತೆ ಸಂಬಂಧ ಹೊಂದಿರುವ ಗುಂಪೊಂದು ನಡೆಸಿರುವ ದಾಂಧಲೆ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದೆ.

Advertisement

ಘಟನೆ ಹಿಂದೆ ಕಾಂಗ್ರೆಸ್‌ ಕಾರ್ಯಕರ್ತರು ಇದ್ದಾರೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಮಾಣದಲ್ಲಿ ಚರ್ಚೆ ನಡೆದಿತ್ತು. ಅದಕ್ಕೆ ಪೂರಕವಾಗಿ ವಿಪಕ್ಷಗಳಾಗಿರುವ ಬಿಜೆಪಿ, ಬಿಆರ್‌ಎಸ್‌, ನಟನ ಮನೆ ಮುಂದೆ ದಾಂಧಲೆ ನಡೆಸಿದವರು ಸಿಎಂ ರೇವಂತ್‌ ರೆಡ್ಡಿ ಕ್ಷೇತ್ರದವರು, ಕಾಂಗ್ರೆಸಿಗರು ಎಂದು ದೂರಿದ್ದಾರೆ. ಆದರೆ ಈ ಆರೋಪವನ್ನು ತೆಲಂಗಾಣ ಕಾಂಗ್ರೆಸ್‌ ತಳ್ಳಿ ಹಾಕಿದೆ. ನಮ್ಮ ಪಕ್ಷದವರೇ ಈ ಕೃತ್ಯ ಎಸಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಕ್ಷ ಹೇಳಿದೆ.

“ಪುಷ್ಪ-2′ ಚಿತ್ರ ಬಿಡುಗಡೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟು, ಮಗವೊಂದು ಗಾಯಗೊಂಡಿತ್ತು. ಈ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡುವಂತೆ ಗುಂಪೊಂದು ರವಿವಾರ ದಾಂಧಲೆ ನಡೆಸಿತ್ತು. ಮತ್ತೊಂದೆಡೆ, ಸಿಎಂ ರೇವಂತ್‌ ರೆಡ್ಡಿ ದಾಂಧಲೆ ಯನ್ನು ಖಂಡಿಸಿ, ಕ್ರಮ ಕೈಗೊಳ್ಳುವಂತೆ ಡಿಜಿಪಿ, ಹೈದ್ರಾಬಾದ್‌ ಪೊಲೀಸ್‌ ಆಯುಕ್ತರಿಗೆ ಸೂಚಿಸಿದ್ದಾರೆ.

ಇದೇ ವೇಳೆ, “ಪುಷ್ಪಾ -2′ ಚಿತ್ರ ನಿರ್ಮಾಣ ಸಂಸ್ಥೆ ಅಸುನೀಗಿದ ಮಹಿಳೆಯ ಕುಟುಂಬಕ್ಕೆ 50 ಲಕ್ಷ ರೂ. ಚೆಕ್‌ ನೀಡಿದೆ. ಈ ಮಧ್ಯೆ, ಕಾಲು¤ಳಿತ ಘಟನೆಗೆ ಸಂಬಂಧಿಸಿದಂತೆ ಅಲ್ಲು ಅರ್ಜುನ್‌ಗೆ ನಾಳೆ ವಿಚಾ ರಣೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ.

ಫೋಟೋ ಸಾಕ್ಷ್ಯ ಬಿಡುಗಡೆ ಮಾಡಿದ ಬಿಜೆಪಿ
ದಾಂಧಲೆ ನಡೆಸಿದವರ ಪೈಕಿ ಒಬ್ಬ ಸಿಎಂ ರೇವಂತ್‌ ರೆಡ್ಡಿ ಜತೆ ಇರುವ ಫೋಟೊ ವೊಂದನ್ನು ಬಿಜೆಪಿ ಟ್ವೀಟ್‌ ಮಾಡಿದೆ. ಜತೆಗೆ ಇದು ಸರಕಾರಿ ಪ್ರಾಯೋಜಿತ ದಾಂಧಲೆ ಎಂ ದು ಆರೋಪಿಸಿದೆ. ಬಿಆರ್‌ಎಸ್‌ ಶಾಸಕ ಹರೀಶ್‌ ರಾವ್‌, ಅಲ್ಲು ಅರ್ಜುನ್‌ ಮನೆ ಮೇಲಿ ದಾಳಿಯು ಆಡಳಿತದ ವೈಫ‌ಲ್ಯ ಎಂದಿದ್ದಾರೆ. ಆದರೆ ಆರೋಪ ತಳ್ಳಿ ಹಾಕಿರುವ ಕಾಂಗ್ರೆಸ್‌, ದಾಂಧಲೆ ನಡೆಸಿದವರು ಮತ್ತು ಕಾಂಗ್ರೆಸ್‌ಗೆ ಸಂಬಂಧವಿಲ್ಲ ಎಂದು ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next