ಕೊಪ್ಪಳ: ಭಾರಿ ಕುತೂಹಲ ಮೂಡಿಸಿದ್ದ ಗಂಗಾವತಿ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಚುನಾವಣೆ ಕೈ ವಶವಾಗಿದೆ. ಇತ್ತೀಚೆಗೆ ಬಿಜೆಪಿ ಕೆಲವರು ಅಧಿಕಾರದ ಗದ್ದುಗೆ ಹಿಡಿಯಲು ಕಾಂಗ್ರೆಸ್ ಸದಸ್ಯನನ್ನು ಕಿಡ್ನ್ಯಾಪ್ ಮಾಡಿಸಿದ್ದು ಭಾರಿ ಸದ್ದು ಮಾಡಿತ್ತು. ಪ್ರಕರಣ ದಾಖಲಾಗಿ ಕಿಡ್ನ್ಯಾಪ್ ಮಾಡಿದ ವ್ಯಕ್ತಿಗಳನ್ನು ಬಂಧಿಸಲಾಗಿತ್ತು.
ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬರೊಬ್ಬರಿ 19 ಮತಗಳನ್ನು ಪಡೆಯುವ ಮೂಲಕ ನಗರಸಭೆ ಚುಕ್ಕಾಣಿ ಹಿಡಿದಿದೆ. 35 ಸದಸ್ಯರ ಬಲಾಬಲವನ್ನ ಒಳಗೊಂಡಿತ್ತು. ಈ ಪೈಕಿ 17 ಸದಸ್ಯರ ಬೆಂಬಲದೊಂದಿಗೆ ಬಿಜೆಪಿ ಸೋಲಬೇಕಾಯಿತು.
ಶಾಸಕ ಹಾಗೂ ಸಂಸದರ ಒಂದೊಂದು ಮತ ಚಲಾಯಿಸಿದ್ದರೂ ಬಿಜೆಪಿಯು ಸೋಲಬೇಕಾಯಿತು.
ಇದನ್ನೂ ಓದಿ:ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು: ಮಹಾದೇವ ಭೈರಗೊಂಡನ ಮೇಲೆ ಗುಂಡಿನ ದಾಳಿ
ಕೊನೆಗೆ ಬಿಜೆಪಿ ಮಣಿಸಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಒಂದು ಬಿಜೆಪಿ ಸದಸ್ಯೆ ಮತ, ಒಂದು ಜೆಡಿಎಸ್ ಸದಸ್ಯ ಬೆಂಬಲ ಪಡೆದು 19 ಮತ ಪಡೆದು ಕಾಂಗ್ರೆಸ್ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.