ಬೈಲಹೊಂಗಲ: ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಅವರ ಗೆಲುವು ಜಿಲ್ಲೆ ಮತ್ತು ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತರಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ತಾಲೂಕಿನ ನೇಸರಗಿ ಗ್ರಾಮದಲ್ಲಿ ಗುರುವಾರ ಗ್ರಾಮ ಪಂಚಾಯ್ತಿ ಚುನಾಯಿತ ಜನಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಗೆಲುವು ನಿಶ್ಚಿತ. ಆದರೆ ಬಹುಮತಗಳ ಅಂತರದಿಂದ ಗೆಲ್ಲಬೇಕು. ಆದ್ದರಿಂದ ತಮ್ಮ ಮತವನ್ನು ಕಾಂಗ್ರೆಸ್ ಗೆ ನೀಡಿ ಎಂದು ಮನವಿ ಮಾಡಿದರು.
ಈ ವಿಧಾನಪರಿಷತ್ ಚುನಾವಣೆ ಗೆಲುವು ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಹೆಚ್ಚಿನ ಮತಗಳ ಅಂತರದ ಗೆಲುವು ಬಿಜೆಪಿಗೆ ಎಚ್ಚರಿಕೆ ಗಂಟೆಯಾಗಬೇಕು. ಆಡಳಿತದಲ್ಲಿ ಇಲ್ಲದಿದ್ದರೂ ಹೆಚ್ಚು ಮತಗಳ ಅಂತರದ ಗೆಲುವಿನಿಂದ ಬಿಜೆಪಿ ದಿಗ್ಭ್ರಮೆಗೊಳ್ಳಬೇಕು ಎಂದರು.
ಎರಡ್ಮೂರು ತಿಂಗಳಲ್ಲಿ ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಚುನಾವಣೆ ಕೂಡಾ ಬರಲಿವೆ. ಬಳಿಕ ಒಂದು ವರ್ಷ ಕಳೆದರೆ ವಿಧಾನಸಭೆ ಚುನಾವಣೆ ಮತ್ತೆ ಬರಲಿದೆ. ಈ ಚುನಾವಣೆ ಗೆಲುವು ಮುಂಬರುವ ಚುನಾವಣೆಗೆ ಅನುಕೂಲವಾಗಲಿದೆ. ಆದ್ದರಿಂದ ನಾವೆಲ್ಲ ಒಂದಾಗಿ ಕೈ ಅಭ್ಯರ್ಥಿ ಗೆಲುವಿಗೆ ಶ್ರಮಿಸೋಣ ಎಂದರು.
ಕಾಂಗ್ರೆಸ್ ಮುಖಂಡರಾದ ಬಾಬಾಸಾಹೇಬ್ ಪಾಟೀಲ, ಬ್ಲಾಕ್ ಅಧ್ಯಕ್ಷ ನಿಂಗಪ್ಪ ಅರಕೇರಿ, ಎಪಿಎಂಸಿ ಅಧ್ಯಕ್ಷ ಭರಮನ್ನಾ ಸತ್ತೆನ್ನವರ, ನಿಂಗಪ್ಪ ತಳವಾರ, ಶಿವನಗೌಡ ಪಾಟೀಲ, ರಾಜಶೇಖರ ಯತ್ತಿನಮನಿ, ಗಿರಿಗೌಡ ಪಾಟೀಲ, ಸುರೇಶ ಖಂಡ್ರಿ, ಬಸವರಾಜ ಚಿಕ್ಕನಗೌಡರ, ರಮೇಶ ರಾಯಪ್ಪಗೋಳ, ಬಾಳಪ್ಪ ಮಾಳಗಿ, ಸಚೀನ ಪಾಟೀಲ, ಮನೋಜ ಕೆಳಗೇರಿ, ಸತಾರ ಮೋಕಾಶಿ, ವಿಷ್ಣು ಮೂಲಿಮನಿ, ಶೇಖರ ಕೊಮನ್ನವರ, ಅಬ್ಟಾಸ ಪೀರಜಾದೆ, ಕಾಶೀಮ ಜಮಾದಾರ, ಸುತ್ತಮುತ್ತಲಿನ ಗ್ರಾಮಗಳ ಗ್ರಾ.ಪಂ ಸದಸ್ಯರು, ಕಾರ್ಯಕರ್ತರು ಇದ್ದರು.