Advertisement

ಪೌರಾಡಳಿತ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಖಚಿತ

12:26 PM Aug 26, 2018 | Team Udayavani |

ಮಹಾನಗರ: ಕಾಂಗ್ರೆಸ್‌ ಸರಕಾರ ಕೊಟ್ಟಿರುವ ಅನೇಕ ಜನಪರ ಕಾರ್ಯಗಳನ್ನು ಜನರು ಇನ್ನೂ ಮರೆತಿಲ್ಲ. ಹಾಗಾಗಿ ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆಲುವು ಖಚಿತ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

Advertisement

ಮಲ್ಲಿಕಟ್ಟೆಯ ಕಾಂಗ್ರೆಸ್‌ ಭವನದಲ್ಲಿ ಆ. 25ರಂದು ಜರಗಿದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಸೋಲಿಗೆ ಅಭಿವೃದ್ಧಿಯ ಹಿನ್ನಡೆ ಕಾರಣ ಎಂಬ ಮಾತು ಎಲ್ಲೂ ಕೇಳಿ ಬಂದಿಲ್ಲ. ಇಂದು ಎಲ್ಲೆಡೆಯೂ ಸಿದ್ದರಾಮಯ್ಯರ ಭಾಗ್ಯಗಳನ್ನು ಜನತೆ ಅನುಭವಿಸಿ ಅರ್ಥ ಮಾಡಿಕೊಂಡಿದ್ದಾರೆ ಎಂದರು.

ಮೈತ್ರಿ ಧರ್ಮ ಪಾಲನೆ
ಸಮ್ಮಿಶ್ರ ಸರಕಾರವು 5 ವರ್ಷ ಪೂರ್ಣಗೊಳಿಸುತ್ತದೆ. ಕಾಂಗ್ರೆಸ್‌ ಮೈತ್ರಿ ಧರ್ಮ ಪಾಲಿಸುತ್ತದೆ. ರಾಜ್ಯದ ಪರಿಸ್ಥಿತಿ ನೋಡಿಕೊಂಡು ಕಾಂಗ್ರೆಸ್‌ ಪಕ್ಷವು ಸಮ್ಮಿಶ್ರ ಸರಕಾರ ರಚಿಸಲು ಜೆಡಿಎಸ್‌ ಜತೆ ಸೇರುವಂತಾಯಿತು. ಅದರಲ್ಲೂ ಮುಖ್ಯ ಮಂತ್ರಿ ಸ್ಥಾನ ಕುರಿತು ಕಾಂಗ್ರೆಸ್‌ ತನ್ನ ತ್ಯಾಗ ಮನೋಭಾವಕ್ಕೆ ಸಾಕ್ಷಿಯಾಯಿತು. ಭ್ರಷ್ಟಾಚಾರವಿಲ್ಲದ, ಸಮಾಜವನ್ನು ಬೇರ್ಪಡಿಸದ, ಅನೈತಿಕ ರಾಜಕಾರಣ ಮಾಡದ ನಮ್ಮ ಪಕ್ಷಕ್ಕೆ ಮುಂದೆ ಜನತೆ ಆಶೀರ್ವಾದ ಮಾಡಲಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ. ಹರೀಶ್‌ ಕುಮಾರ್‌ ನೂತನ ರಾಜ್ಯಾಧ್ಯಕ್ಷರನ್ನು ಶಾಲು ಹೊದೆಸಿ ಸ್ವಾಗತಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌, ವಿಧಾನಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ಮಾಜಿ ಶಾಸಕ ಜೆ.ಆರ್‌. ಲೋಬೋ, ಮೇಯರ್‌ ಭಾಸ್ಕರ್‌ ಕೆ., ಉಪಮೇಯರ್‌ ಮಹಮ್ಮದ್‌ ಕುಂಜತ್ತಬೈಲ್‌, ಮಾಜಿ ರಾಜ್ಯಸಭಾ ಸದಸ್ಯ ಬಿ. ಇಬ್ರಾಹಿಂ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಪಿ.ವಿ.ಮೋಹನ್‌ ಮುಖಂಡರಾದ ಇಬ್ರಾಹಿಂ ಕೋಡಿಜಾಲ್‌, ಜಿ.ಎ. ಬಾವ, ಮಿಥುನ್‌ ರೈ, ಕವಿತಾ ಸನಿಲ್‌, ಮಮತಾ ಗಟ್ಟಿ, ಹರಿನಾಥ್‌, ಶಶಿಧರ್‌ ಹೆಗ್ಡೆ, ಶಾಲೆಟ್‌ ಪಿಂಟೋ, ನವೀನ್‌ ಡಿ’ಸೋಜಾ, ರಾಜಶೇಖರ್‌ ಕೋಟ್ಯಾನ್‌, ಸದಾಶಿವ ಉಳ್ಳಾಲ್‌, ಸಂತೋಷ್‌ ಕುಮಾರ್‌ ಶೆಟ್ಟಿ, ಎಂ.ಎಸ್‌. ಮಹಮ್ಮದ್‌, ವೆಂಕಪ್ಪ ಗೌಡ, ಯು.ಬಿ. ಸಲೀಂ, ಎನ್‌.ಎಸ್‌. ಕರೀಂ, ಕಾರ್ಪೊರೇಟರ್‌ಗಳಾದ ಅಬ್ದುಲ್‌ ರವೂಫ್‌, ಎ.ಸಿ. ವಿನಯರಾಜ್‌, ಆಶಾ ಡಿ’ಸಿಲ್ವಾ, ಅಪ್ಪಿ, ಡಿ.ಕೆ. ಅಶೋಕ್‌, ಶಶಿಧರ್‌ ಹೆಗ್ಡೆ, ಮಾಜಿ ಮೇಯರ್‌ ಹಿಲ್ಡಾ ಆಳ್ವ, ಜಿ.ಪಂ. ಸದಸ್ಯರಾದ ಶೇಖರ್‌ ಕುಕ್ಕೇಡಿ, ಮಂಜುಳಾ ಮಾಧವ ಮಾವೆ, ಬ್ಲಾಕ್‌ ಅಧ್ಯಕ್ಷ ಸಂತೋಷ್‌ ಕುಮಾರ್‌ ಶೆಟ್ಟಿ ಅಸೈಗೋಳಿ, ಧನಂಜಯ ಮಟ್ಟು, ಪ್ರಶಾಂತ್‌ ಕಾಜವ, ಜಯಪ್ರಕಾಶ್‌ ರೈ, ದಿವಾಕರ್‌ ಗೌಡ, ಆರ್‌.ಕೆ. ಪೃಥ್ವಿರಾಜ್‌, ಲೋಕೇಶ್‌ ಹೆಗ್ಡೆ, ಪದ್ಮನಾಭ ನರಿಂಗಾನ, ಬಿ.ಎಂ. ಭಾರತಿ, ಮಹಮ್ಮದ್‌ ಹನೀಫ್‌, ನೀರಜ್‌ಪಾಲ್‌, ಖಾಲಿದ್‌ ಉಜಿರೆ, ಪ್ರೇಮ್‌ ಬಲ್ಲಾಳ್‌ಬಾಗ್‌, ನಝೀರ್‌ ಬಜಾಲ್‌ ಉಪಸ್ಥಿತರಿದ್ದರು.

ಇದೇ ಸಂದರ್ಭ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿರುವ ಸಂತ್ರಸ್ತರಿಗೆ ಪರಿಹಾರ ನೆರವು ಕೋರಿ ಸರಕಾರವನ್ನು ಒತ್ತಾಯಿಸಲು ಮನವಿ ಪತ್ರವನ್ನು ಜಿಲ್ಲಾಧ್ಯಕ್ಷರು ಕೆ.ಪಿ.ಸಿ.ಸಿ. ಅಧ್ಯಕ್ಷರಿಗೆ ಅರ್ಪಿಸಿದರು. ಜಿಲ್ಲಾ ಪಂಚಾಯತ್‌ ಸದಸ್ಯ ಕೆ.ಕೆ. ಶಾಹುಲ್‌ ಹಮೀದ್‌ ನಿರೂಪಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next