Advertisement
ಬನಹಟ್ಟಿಯ ಈಶ್ವರಲಿಂಗ ಮೈದಾನದಲ್ಲಿ ಭಾರಿ ಜನಸ್ತೋಮದೆದುರು ಮಾತನಾಡಿದ ಅವರು, ಪ್ರಧಾನಿ ಹುದ್ದೆಗೆ ಒಂದೆಡೆ ಸ್ಟಾಲಿನ್, ಮಮತಾ ಬ್ಯಾನರ್ಜಿಯಂತವರು ಬೆನ್ನು ಬಿದ್ದಿದ್ದರೆ, ರಾಜ್ಯದ ಸಿಎಂ ಸಿದ್ದರಾಮಯ್ಯನವರೂ ನಾನೂ ಪ್ರಧಾನಿಯಾಗುವೆಯೆಂದು ಹೊರಟಿದ್ದಾರೆ. ರಾಜ್ಯಭಾರವನ್ನೇ ನೀಗಿಸದ ಇಂಥವರಿಂದ ದೇಶಭಾರ ಸಾಧ್ಯವೇ? ಎಂದರು. ಕಾಂಗ್ರೆಸ್ ಕೇವಲ ಅಲ್ಪಸಂಖ್ಯಾತರ ಓಲೈಕೆಗಾಗಿ ರಾಜಕೀಯ ನಡೆಸುತ್ತಿದ್ದಾರೆ ವಿನಃ ಅಭಿವೃದ್ಧಿ ಶೂನ್ಯವಾಗಿದೆ ಎಂದರು.
Related Articles
Advertisement
1 ಲಕ್ಷ ನೀಡಿದರೆ ಮನೆಯಾಳಾಗುವೆ: ಲೋಕಸಭಾ ಪ್ರಣಾಳಿಕೆಯಲ್ಲಿ ಬೋಗಸ್ ಗ್ಯಾರಂಟಿ ಹೇಳಿರುವ ಕಾಂಗ್ರೆಸ್ ಮೊದಲಿಗೆ ಆಡಳಿತಕ್ಕೇ ಬರುವದಿಲ್ಲ. ಇವರೇನಾದರೂ ಪ್ರತಿ ವರ್ಷ ಮಹಿಳೆಯರಿಗೆ ಪ್ರತಿ ವರ್ಷ 1 ಲಕ್ಷ ರೂ.ಗಳನ್ನು ನೀಡಿದ್ದಲ್ಲಿ ಶಾಸಕತ್ವಕ್ಕೆ ರಾಜೀನಾಮೆ ನೀಡಿ ಅವರ ಮನೆಯಾಳಾಗಿ ಕೆಲಸ ಮಾಡುವೆ ಎಂದು ಸವಾಲೆಸೆದರು.
60 ಲಕ್ಷ ಮಹಿಳೆಯರಿರುವ ದೇಶದಲ್ಲಿ ವರ್ಷಕ್ಕೆ 60 ಲಕ್ಷ ಕೋಟಿ ರೂ.ಗಳಷ್ಟು ಹಣ ಕೇವಲ ಮಹಿಳಾ ಗ್ಯಾರಂಟಿಗೆ ಬೇಕು. ಪ್ರತಿ ವರ್ಷ ಇಡೀ ಕೇಂದ್ರದ ವಾರ್ಷಿಕ ಬಜೆಟ್ 45 ಲಕ್ಷ ಕೋಟಿ ರೂ.ಗಳಷ್ಟಿದೆ. ಹೀಗಿರುವಾಗ ಹಣ ಹೊಂದಿಸುವ ವಿಚಾರವೇ ಇಲ್ಲದೆ ಬೋಗಸ್ ಗ್ಯಾರಂಟಿಗಳಿಗೆ ಮರುಳಾಗಬೇಡಿ ಎಂದು ನೆರೆದಿದ್ದ ಸಾವಿರಾರು ಮಹಿಳೆಯರೆದುರು ಸವದಿ ಹೇಳಿದರು.
ದಾಖಲೆ ಮೆರವಣಿಗೆ: ಸುಮಾರು ಒಂದೂವರೆ ಕಿ.ಮೀ.ನಷ್ಟು ಉದ್ದನೆಯ ರಸ್ತೆಯಷ್ಟು ಮಹಿಳಾ ಮಣಿಗಳು ಸಾವಿರಾರು ಸಂಖ್ಯೆಯಲ್ಲಿ ಬೃಹತ್ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದು ದಾಖಲೆಯಾಗಿತ್ತು.
ವೇದಿಕೆ ಮೇಲೆ ಸವಿತಾ ಹೊಸೂರ, ವೈಷ್ಣವಿ ಬಗೇವಾಡಿ, ಪವಿತ್ರಾ ತುಕ್ಕಣ್ಣವರ, ರತ್ನಾ ಕೊಳಕಿ, ಮಾಲಾ ಬಾವಲತ್ತಿ, ಶಾಂತಾ ಸೊರಗಾಂವಿ, ಗೌರಿ ಮಿಳ್ಳಿ, ಮೀನಾಕ್ಷಿ ಹಿರೇಮಠ, ದುರ್ಗವ್ವ ಹರಿಜನ, ಸಾವಿತ್ರಿ ಆಸಂಗಿ, ಶ್ರೀಶೈಲ ಬೀಳಗಿ, ಧರೆಪ್ಪ ಉಳ್ಳಾಗಡ್ಡಿ, ಪ್ರಭು ಮೊಳೇದ ಸೇರಿದಂತೆ ಅನೇಕರಿದ್ದರು.