Advertisement

ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಸಲಹೆ ಸ್ವಾಗತಿಸಿದ ಕಾಂಗ್ರೆಸ್‌

02:22 AM Apr 02, 2022 | Team Udayavani |

ಕೋಲ್ಕತಾ: ಬಿಜೆಪಿಯನ್ನು ಮುಂದಿನ ಲೋಕಸಭೆ ಚುನಾ­ವಣೆ ಯಲ್ಲಿ ಎದುರಿಸುವ ನಿಟ್ಟಿನಲ್ಲಿ ವಿಪ ಕ್ಷಗಳೆಲ್ಲವೂ ಒಗ್ಗೂಡಿ, ಮೈತ್ರಿ ಸಾಧಿ ಸಬೇಕು ಎಂಬ ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಸಲಹೆ­ಯನ್ನು ಕಾಂಗ್ರೆಸ್‌ ಸ್ವಾಗತಿಸಿದೆ.

Advertisement

ರಾಜ್ಯಸಭೆಯ ಕಾಂಗ್ರೆಸ್‌ನ ಉಪನಾಯಕ ಆನಂದ ಶರ್ಮ “ಪಿಟಿಐ’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ “ವಿಪಕ್ಷಗಳ ಒಕ್ಕೂಟ ಎನ್ನುವುದು ಕಾಂಗ್ರೆಸ್‌ ಪ್ರತಿಪಾದಿಸುತ್ತಾ ಬರುತ್ತಿದ್ದ ವಿಚಾರವಾಗಿದೆ.

137 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್‌ ಮತ್ತು ಇತರ ವಿಪಕ್ಷಗಳ ನಡುವೆ ಇರುವ ಸಣ್ಣ ಮಟ್ಟದ ಭಿನ್ನಾಭಿಪ್ರಾಯಗಳನ್ನು ಮರೆತು ಕೋಮುವಾದ ಪ್ರತಿ­ಪಾದಿ­ಸು­ತ್ತಿರುವ ಬಿಜೆಪಿ­ಯನ್ನು ಸೋಲಿಸಲೇಬೇಕಾಗಿದೆ’ ಎಂದು ಹೇಳಿದ್ದಾರೆ.

ರಾಷ್ಟ್ರಮಟ್ಟದ ಮೈತ್ರಿಕೂಟದ ಪ್ರಸ್ತಾವ ಮಾಡುವ ವೇಳೆ, ಕಾಂಗ್ರೆಸ್‌ ಕೇಂದ್ರ ಸ್ಥಾನದಲ್ಲಿಯೇ ಇರುತ್ತದೆ ಎಂದು ಶರ್ಮಾ ಪ್ರತಿಪಾದಿಸಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತಿದ್ದರೂ ಶೇಕಡಾವಾರು ಮತ ಪ್ರಮಾಣ 19.55 ಇದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next