ಮಂಡ್ಯ: ನಗರದ ಹೊರವಲಯದ ಅರ್ಕೇಶ್ವರ ಬಡಾವಣೆಯ ಭತ್ತದ ಗದ್ದೆಗೆ ಇಳಿದ ಕೈ ಮಹಿಳಾ ಕಾರ್ಯಕರ್ತರು, ಕಾಂಗ್ರೆಸ್ ನಡಿಗೆ ಅನ್ನದಾತರ ಕಡೆಗೆ ಅಭಿಯಾನಕ್ಕೆ ಚಾಲನೆ ನೀಡಿದರು.
ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್ ನೇತೃತ್ವದಲ್ಲಿ ಮಹಿಳಾ ಕಾರ್ಯಕರ್ತರುಕುಡುಗೋಲು ಹಿಡಿದು ಮಹಿಳಾ ಕೃಷಿ ಕಾರ್ಮಿಕರೊಂದಿಗೆ ಭತ್ತದ ಗದ್ದೆಗೆ ಇಳಿದು ಕಟಾವಿಗೆ ಮುಂದಾದರು.
ದೇಶಕ್ಕೆ ಅನ್ನದಾತರೇ ಬೆನ್ನುಲುಬು: ಪ್ರಪಂಚ ತಂತ್ರಜ್ಞಾನ- ವೈಜಾnನಿಕವಾಗಿ ಮುಂದುವರಿದಿದ್ದರೂ ಅನ್ನದಾತರೇ ದೇಶದ ಬೆನ್ನೆಲುಬು. ಅನ್ನದಾತರನ್ನು ಸಂಕಷ್ಟಕ್ಕೆ ಒಳಗಾದರೆ ರಾಷ್ಟ್ರ ಸುಭದ್ರವಾಗಿರದು. ಸುಸ್ಥಿರವಾಗಿ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ರೈತರಶ್ರಮ ಮತ್ತು ಅವರ ಬೆಳೆಗಳಿಗೆ ಅಪಾರ ಮೌಲ್ಯವಿದೆ ಎಂದು ಎಂದು ಜಿಲ್ಲಾಧ್ಯಕ್ಷೆ ಅಂಜನಾ ಶ್ರೀಕಾಂತ್ ಹೇಳಿದರು.
ರೈತರ ಸಮಸ್ಯೆ ಪರಿಹರಿಸಿ: ದೇಶದಲ್ಲಿ ರೈತರು ತಿಂಗಳುಗಟ್ಟಲೆ ಹೊಸ ಕೃಷಿ ಪದ್ಧತಿ ವಿರೋಧಿಸಿಪ್ರತಿಭಟನೆ ನಡೆಸುತ್ತಿದ್ದರೂ, ಸರ್ಕಾರ ರೈತರ ಸಮಸ್ಯೆ ಪರಿಹರಿಸಲು ಮುಂದಾಗಿಲ್ಲ. ಕಾರ್ಪೋರೇಟ್‌ಕುಳಗಳ ಹಿಡಿತದಲ್ಲಿ ಸರ್ಕಾರವನ್ನು ನಡೆಸುತ್ತಿರುವುದು ಜಗಜಾಹೀರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭಾರತ ದೇಶ ಕೃಷಿ ಪ್ರಧಾನ ರಾಷ್ಟ್ರವಾಗಿದೆ. ಬಹುಕೋಟಿ ಮಂದಿ ಕೃಷಿ ಉದ್ಯೋಗವನ್ನೇ ಅವಲಂಬಿಸಿದ್ದಾರೆ. ದೇಶಕ್ಕೆ ಅನ್ನ ಕಾಳು, ಆಹಾರ ಪದಾರ್ಥಗಳನ್ನು ನೀಡುತ್ತಿದ್ದಾರೆ. ಆದರೆ, ವೈಜಾnನಿಕ ಬೆಲೆ ಇಲ್ಲದಂತಾಗಿದೆ. ದಳ್ಳಾಳಿಗಳ ಪಾತ್ರ ಹೆಚ್ಚಾಗಿದೆ. ಇದನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ರೈತರ ದಿನಾಚರಣೆ ಅಂಗವಾಗಿ ರೈತ ಮಹಿಳೆಯರಾದ ಚಿಕ್ಕತಾಯಮ್ಮ,ಲಕ್ಷ್ಮೀ, ತಾಯಮ್ಮ, ಗೌರಮ್ಮ, ರೇಣುಕಾ ಅವರನ್ನುಅಭಿನಂದಿಸಲಾಯಿತು. ರೈತ ಮತ್ತು ರೈತ ಮಹಿಳೆಯರೊಂದಿಗೆ ಭತ್ತ ಕಟಾವು ಮಾಡಿ, ಬಳಿಕ ಅವರೊಂದಿಗೆ ಊಟ ಮಾಡುವ ಮೂಲಕ ಆತ್ಮಸ್ಥೈರ್ಯ ತುಂಬಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ನಗರಸಭಾ ಸದಸ್ಯ ರಾಮಲಿಂಗಯ್ಯ, ಮಾಜಿ ಸದಸ್ಯ ಅನಿಲ್‌ಕುಮಾರ್,ಸೋನಿಯಾ ಗಾಂಧಿ ಬ್ರಿಗೇಡ್ ಸಮಿತಿ ಅಧ್ಯಕ್ಷೆ ವೀಣಾ, ಮಹಿಳಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷೆ ಮಮತಾ,ರಾಜೇಶ್ವರಿ, ಯಶೋಧಾ, ಕಮಲಾರಾಜ್, ರಾಧಾ, ಸುದರ್ಶನ್, ಚನ್ನಪ್ಪ ಮತ್ತಿತರರಿದ್ದರು.