Advertisement
ಬುಧವಾರ ಬೆಂಗಳೂರಿನಲ್ಲಿ ಅವರದ್ದೇ ಪಕ್ಷದ ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮುಖವಾಡ ಕಳಚಿ ಅವರನ್ನು ವಿಲನ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಇರುವುದು ಇದರಿಂದ ಸ್ಪಷ್ಟವಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Related Articles
Advertisement
ಉಗ್ರಪ್ಪನವರ ಮೇಲೆ ಕ್ರಮ ತೆಗೆದುಕೊಳ್ಳಲು ಡಿಕೆಶಿಗೆ ಶಕ್ತಿ ಇದೆಯೇ ಎಂದು ಪ್ರಶ್ನಿಸಿದ ಅವರು, ಪಕ್ಷದ ಕಾರ್ಯಾಲಯದಲ್ಲೇ ಆಗಿರುವ ಈ ತಪ್ಪಿನ ಬಗ್ಗೆ ತಿಳಿದಿದ್ದರೂ ಡಿಕೆಶಿ ಅದಕ್ಕೆ ಸಮಜಾಯಿಷಿ ಕೊಟ್ಟಿಲ್ಲ. ಅಧ್ಯಕ್ಷ ಸ್ಥಾನದ ಅಶಕ್ತ ವ್ಯಕ್ತಿ ಎಂಬುದು ಸಾಬೀತಾಗಿರುವ ಕಾರಣ ಡಿಕೆಶಿ ಪಕ್ಷಕ್ಕೆ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು. ಈ ವಿಚಾರದ ಬಗ್ಗೆ ಡಿಕೆಶಿ ದೂರು ಕೊಡಲಿ. ತನಿಖೆಯೂ ಆಗಲಿ ಉಗ್ರಪ್ಪ ಮತ್ತು ಸಲೀಂ ಅವರು ಕಾಂಗ್ರೆಸ್‌ನ ಪರಿಸ್ಥಿತಿ ಸ್ಪಷ್ಟವಾಗಿ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷಗಿರಿ ಪಡೆದರಷ್ಟೇ ಮುಖ್ಯಮಂತ್ರಿ ಸ್ಥಾನ ಎಂಬ ಕನಸು ಹೊತ್ತು ಚಿಕ್ಕಮಕ್ಕಳ ತರ ಡಿಕೆಶಿ ಅಧ್ಯಕ್ಷರಾದರು. ಅವರದ್ದೇ ಪತ್ರಿಕಾಗೋಷ್ಠಿಯಲ್ಲಿ ಡಿಕೆಶಿ ತೇಜೋವಧೆ ಆಗಿದೆ. ಮುಖವಾಡ ಕಳಚಿ ಬಿದ್ದಿದೆ ಎಂದರು.
ಡಿಕೆಶಿ ನೇತೃತ್ವದ ಕೆಟ್ಟ ಪರಂಪರೆಯ ಕೆಟ್ಟ ಪಕ್ಷವನ್ನು ರಾಜ್ಯದ ಜನತೆ ಯಾವತ್ತೂ ಒಪ್ಪಿಕೊಳ್ಳುವುದಿಲ್ಲ. ಡಿಕೆಶಿಯವರು ತನಿಖಾ ಸಂಸ್ಥೆಗಳು ಮತ್ತು ನಮ್ಮ ಪಕ್ಷದ ನಾಯಕರ ಮೇಲೆ ಮಾಡಿದ ಬೇಜವಾಬ್ದಾರಿ ಟೀಕೆ ಮತ್ತು ಆರೋಪಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.