Advertisement

Lok Sabha pollsಮಹಿಳೆಯರಿಗೆ ಕೈ 5 ಗ್ಯಾರಂಟಿ: ನಾರಿ ನ್ಯಾಯ ಘೋಷಣೆ: ಮಹಿಳೆಯರ ಮತಕ್ಕೆ ಕಣ್ಣು

12:07 AM Mar 14, 2024 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ “ಯುವ ನ್ಯಾಯ’ ಗ್ಯಾರಂಟಿಗಳನ್ನು ಪ್ರಕಟಿ ಸಿದ್ದ ಕಾಂಗ್ರೆಸ್‌ ಈಗ ಮಹಿಳಾ ಮತದಾರರನ್ನು ಸೆಳೆಯಲು “ನಾರಿ ನ್ಯಾಯ’ ಭರವಸೆಗಳನ್ನು ಪ್ರಕಟಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಗ್ಯಾರಂಟಿ ಯೋಜನೆಗಳನ್ನು ಟ್ವೀಟ್‌ ಮೂಲಕ ಹಂಚಿಕೊಂಡಿದ್ದಾರೆ.

Advertisement

“ನಮ್ಮ ಗ್ಯಾರಂಟಿಗಳು ಖಾಲಿ ಭರವಸೆಗಳಲ್ಲ, ಸುಳ್ಳುಹೇಳಿಕೆಗಳಲ್ಲ. ನಮ್ಮ ರಾಜ ಕೀಯ ವಿರೋಧಿಗಳು ಹುಟ್ಟುವು ದಕ್ಕಿಂತಲೂ ಮೊದಲು ಪ್ರಣಾಳಿಕೆ ಗಳನ್ನು ತಯಾರಿಸಿ, ಅವುಗಳನ್ನು ಈಡೇರಿಸುವ ಸಂಪ್ರದಾಯ ನಮ್ಮದು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.

ನಾರಿ ನ್ಯಾಯ ಭರವಸೆಗಳು

1.ಮಹಾಲಕ್ಷ್ಮೀ ಗ್ಯಾರಂಟಿ: ಈ ಯೋಜನೆಯಡಿ ಬಡಕುಟುಂಬದ ಒಬ್ಬ ಮಹಿಳೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ ಆರ್ಥಿಕ ನೆರವು.

2.ಮಹಿಳೆಯರಿಗೆ ಶೇ. 50 ಮೀಸಲಾತಿ: “ಅರ್ಧ ಜನಸಂಖ್ಯೆ-ಪೂರ್ತಿ ಹಕ್ಕು’ ಹೆಸರಿನ ಇನ್ನೊಂದು ಭರವಸೆಯಲ್ಲಿ ಕೇಂದ್ರ ಸರಕಾರಿ ನೌಕರಿಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ.

Advertisement

3.ಶಕ್ತಿ ಸಮ್ಮಾನ್‌: ಆಶಾ, ಮಧ್ಯಾಹ್ನದ ಬಿಸಿಯೂಟ, ಅಂಗನವಾಡಿ ಕಾರ್ಯಕರ್ತರಿಗೆ ನೀಡಲಾಗುವ ಕೇಂದ್ರದ ಪಾಲನ್ನು ದುಪ್ಪಟ್ಟುಗೊಳಿಸುವುದು.

4.ಅಧಿಕಾರ ಮೈತ್ರಿ: ಮಹಿಳೆಯರಿಗೆ ತಮ್ಮ ಕಾನೂನು ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತೀ ಗ್ರಾ.ಪಂ.ನಲ್ಲಿ ಸೆಮಿ ಲೀಗಲ್‌ ಪದಾಧಿಕಾರಿ ನೇಮಕ.

5.ಸಾವಿತ್ರಿಬಾಯಿ ಫುಲೆ ಹಾಸ್ಟೆಲ್‌: ಪ್ರತೀ ಜಿಲ್ಲಾ ಕೇಂದ್ರದಲ್ಲಿ ಒಂದರಂತೆ ಉದ್ಯೋಗಸ್ಥ ಮಹಿಳೆಯರಿಗೆ ಮೀಸಲಾದ ಹಾಸ್ಟೆಲ್‌ಗ‌ಳನ್ನು ದುಪ್ಪಟ್ಟು ಮಾಡುವುದು.

Advertisement

Udayavani is now on Telegram. Click here to join our channel and stay updated with the latest news.

Next