Advertisement

“ಕೈ’ಟ್ವೀಟ್‌ ಎಡವಟ್ಟು

06:30 AM Nov 22, 2017 | Team Udayavani |

ಹೊಸದಿಲ್ಲಿ: ರಾಹುಲ್‌ ಗಾಂಧಿಗೆ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ನೀಡುವ ಕುರಿತು ಘೋಷಣೆ ಮಾಡಿ ದಿನ ಕಳೆಯುತ್ತಲೇ ಆ ಪಕ್ಷದ ಯುವ ಘಟಕ ಎಡವಟ್ಟು ಮಾಡಿ ಕೊಂಡಿದೆ. ಪ್ರಧಾನಿ ಮೋದಿಯವರು ಇಂಗ್ಲಿಷ್‌ ಮಾತನಾಡುವ ಬಗ್ಗೆ ಆಕ್ಷೇಪಾರ್ಹ ಚಿತ್ರವನ್ನು ಪಕ್ಷದ ಯುವ ಘಟಕ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಪ್ರಕಟಿಸಿದ್ದಕ್ಕೆ ಪ್ರಬಲ ಆಕ್ಷೇಪ ವ್ಯಕ್ತವಾಗಿದೆ.

Advertisement

ಬಳಿಕ ಅದನ್ನು ಅಳಿಸಿ ಹಾಕಲಾಗಿದೆ. ಪಿಎಂ ಮೋದಿ, ಅಮೆರಿಕ ಅಧ್ಯಕ್ಷ ಟ್ರಂಪ್‌, ಬ್ರಿಟನ್‌ ಪ್ರಧಾನಿ ಥೆರೇಸಾ ಮೇ ಸಂಭಾಷಣೆ ಮಾಡುವ ಫೋಟೋದಲ್ಲಿ ಮೋದಿ “ಪ್ರತಿಪಕ್ಷಗಳು ನನ್ನ ವಿರುದ್ಧ ಎಷ್ಟೊಂದು ಮೆಮೆ (meme)ಗಳನ್ನು ಹೇಳುತ್ತಿವೆ ಎನ್ನುವುದು ಗೊತ್ತೇ’ ಎಂದು ಕೇಳುತ್ತಾರೆ. ಅದನ್ನು ಸರಿಪಡಿಸಿದ ಟ್ರಂಪ್‌ “ಅದು ಮೆಮೆ ಅಲ್ಲ ಮೀಮ್‌’ ಎನ್ನುತ್ತಾರೆ. ಅದಕ್ಕೆ ಥೆರೇಸಾ ಮೇ “ನೀವು ಚಹಾ ಮಾರಲು ಹೋಗಿ’ ಎನ್ನುತ್ತಾರೆ. 

ಈ ಟ್ವೀಟ್‌ ಅನ್ನು ಗುಜರಾತ್‌ ಸಿಎಂ ವಿಜಯ ರುಪಾಣಿ ಬಲವಾಗಿ ಆಕ್ಷೇಪಿಸಿದ್ದು “ರಾಹುಲ್‌ ಅದನ್ನು ಸಮರ್ಥಿ ಸುತ್ತಾರೆಯೇ? ಇದು ಬಡವರ ವಿರುದ್ಧದ ನಿಲುವನ್ನು ಸೂಚಿಸುತ್ತದೆ’ ಎಂದಿದ್ದಾರೆ. ಮುಜುಗರಕ್ಕೆ ಒಳಗಾದ ಕಾಂಗ್ರೆಸ್‌, ಇಂಥ ಲೇವಡಿ ಒಪ್ಪುವುದಿಲ್ಲ. ಭಿನ್ನಾಭಿಪ್ರಾಯ ಏನಿದ್ದರೂ ರಾಜಕೀಯ ಮತ್ತು ತತ್ವಗಳಿಗೆ’ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next