Advertisement
ಪಟ್ಟಣದ ಬಸವೇಶ್ವರ ಮಾರ್ಕೆಟ್ ಯಾರ್ಡ್‌ನಲ್ಲಿ ಚುನಾವಣಾ ಪ್ರಚಾರಾರ್ಥ ನಡೆದ ಭಹಿರಂಗ ಸಭೆಯಲ್ಲಿ ಅವರುಮಾತನಾಡಿದರು. 25 ವರ್ಷಗಳಿಂದ ಮುದ್ದೇಬಿಹಾಳ ಕ್ಷೇತ್ರವನ್ನು ಆಳ್ವಿಕೆ ಮಾಡಿರುವ ಸಿ.ಎಸ್. ನಾಡಗೌಡರು ಜನರ ಎದುರಿಗೆ ಅಭಿವೃದ್ಧಿ ಕುರಿತು ಮಾತನಾಡಲು ನೈತಿಕತೆ ಉಳಿಸಿಕೊಂಡಿಲ್ಲ. ಕ್ಷೇತ್ರದಲ್ಲಿಯ ಯಾವುದೇ ಒಂದು ಸಣ್ಣ ಸಮಾಜಕ್ಕೆ ಯಾವುದೇ ಕೊಡುಗೆಗಳನ್ನು ನೀಡಿಲ್ಲ. ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ಶೈಕ್ಷಣಿಕವಾಗಿಯೂ ಯಾವುದೇ ಅಭಿವೃದ್ದಿ ಮಾಡಿಲ್ಲ ಎಂದರು.
ನಾನು ಶ್ರೀಮಂತರಿಗಿಂತ ಅತಿಯಾಗಿ ಪ್ರೀತಿಸುವುದು ಬಡವರನ್ನು. ಆ ಬಡವರು ನನ್ನ ಮನೆಗೆ ಬಂದಾಗ ನನ್ನ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತ ಬಂದಿದ್ದೇನೆ. ನಾಡಗೌಡರು ಬಡವರಿಗಾಗಿ, ದೀನ ದಲಿತರಿಗಾಗಿ, ತಾಲೂಕಿನ ಅಭಿವೃದ್ಧಿಗಾಗಿ ಯಾವ ಕೊಡೆಗೆಗಳನ್ನು ನೀಡಿದ್ದಾರೆಂಬುದನ್ನು ಯೋಚಿಸಿ ನೋಡಿದರೆ ಎಲ್ಲದರಲ್ಲಿಯೂ ಅವರು ಶೂನ್ಯ ಸಾಧನೆ ಮಾಡಿದ್ದಾರೆ. ಇಂತಹ ಬ್ರಿಟಿಷರ ಸಂಸ್ಕೃತಿ ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ಮೇ 12ರಂದು ಅಬ್ಬರಿಸಲಿರುವ ಬಿಜೆಪಿ ಸುನಾಮಿಯ ಅಲೆಗೆ ಧೂಳಿಪಟ ಮಾಡಲು ಎಲ್ಲ ವರ್ತಕ ಬಂಧುಗಳು, ಕಾರ್ಯಕರು ಬಿಜೆಪಿಗೆ ಮತ ನೀಡುವ ಮೂಲಕ ಬೆಂಬಲಿಸಬೇಕೆಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್. ಎಸ್. ಪಾಟೀಲ (ಕೂಚಬಾಳ) ಮಾತನಾಡಿ, ದೇಶದೆಲ್ಲೆಡೆ ಬದಲಾವಣೆ ಗಾಳಿ ಬೀಸುತ್ತಿದೆ. ನರೇಂದ್ರ ಮೋದಿಜಿ ಅವರ ನೇತೃತ್ವದ ಸರ್ಕಾರ ಒಳ್ಳೆ ಆಡಳಿತ ನೀಡುವಲ್ಲಿ ಯಶಸ್ವಿಯಾಗಿದೆ. ಈ ಬಾರಿಯ ಚುನಾವಣೆಗೆ ಮುದ್ದೇಬಿಹಾಳ ಕ್ಷೇತ್ರದಿಂದ ಎ.ಎಸ್. ಪಾಟೀಲ (ನಡಹಳ್ಳಿ) ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದಾರೆ. ಎಲ್ಲ ಸಂಘಟಕರು ಅವರಿಗೆ ಬೆಂಬಲಿಸಬೇಕೆಂದು ಹೇಳಿದರು.
Related Articles
Advertisement
ಬಿಜೆಪಿ ಮುಖಂಡ ಎಂ.ಎಸ್. ಪಾಟೀಲ (ನಾಲತವಾಡ) ಮಾತನಾಡಿ, 25 ವರ್ಷಗಳಿಂದ ಮುದ್ದೇಬಿಹಾಳ ಕ್ಷೇತ್ರದ ಶಾಸಕರಾಗಿರುವ ನಾಡಗೌಡರು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ಅತಿ ಹಿಂದುಳಿದ ಕ್ಷೇತ್ರ ಮುದ್ದೇಬಿಹಾಳ. ನಾಡಗೌಡರನ್ನು ಬದಲಿಸಲು ಒಂದು ಒಳ್ಳೆಯ ಅವಕಾಶ ಒದಗಿ ಬಂದಿದೆ. ಈ ಬಾರಿಗೆ ಬಿಜೆಪಿ ಅಭ್ಯರ್ಥಿ ಎ.ಎಸ್. ಪಾಟೀಲ (ನಡಹಳ್ಳಿ) ಅವರಿಗೆ ಬೆಂಬಲಿಸಿ ಅವರಿಗೆ ತಕ್ಕ ಪಾಠ ಕಲಿಸಬೇಕೆಂದರು.
ವಿ.ಎ. ಹಜೇರಿ, ಎಸ್.ಪಿ. ಸರಶೆಟ್ಟಿ, ಎಸ್.ಎ. ಸರೂರ, ಮಹಾದೇವ ಕುಂಬಾರ, ಗಣ್ಯರಾದ ದತ್ತಾತ್ರೇಯ ಹೆಬಸೂರ, ಗೊಲ್ಲಾಳೆಪ್ಪ ಹಿರೇಗೌಡರ, ಚಿಂತಪ್ಪಗೌಡ ಯಾಳಗಿ, ಬಾಬು ಹಜೇರಿ, ವಾಸುದೇವ ಹೆಬಸೂರ, ಕೆ.ಎಂ. ಮಠ, ಮಲ್ಲು ದುಮಗುಂಡಿ, ಎಚ್.ಎಸ್.ಗೂಗಲ್ಲ, ವಿಶ್ವನಾಥ ಬಿದರಕುಂದಿ, ಪ್ರಭು ಬಿಳೇಭಾವಿ, ಯಂಕಣ್ಣ ಬಿಳೇಭಾವಿ, ಸುಭಾಷ್ ಗಾಣೂರ, ಚನಬಸು ದೇಸಾಯಿ, ಚನ್ನಬಸು ಸರಶೆಟ್ಟಿ, ಮುತ್ತು ಕಶೆಟ್ಟಿ, ಮಲ್ಲು ನಾಗರಾಳ, ನಾಗಪ್ಪ ಚುನಗುಡಿ ಇದ್ದರು.
30ನೇ ವರ್ಷದಲ್ಲಿ ರಾಜಕೀಯ ಪ್ರವೇಶಿಸಿದ ನಾಡಗೌಡರಿಗೆ ಈಗ 60 ವರ್ಷವಾಗಿದೆ. 30 ವರ್ಷದ ರಾಜಕೀಯದಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡಲು ಅವರಿಂದ ಆಗಿಲ್ಲ. ಈ ಬಾರಿ ಅವರು ರಾಜಕೀಯವಾಗಿ ನಿವೃತ್ತಿ ಘೋಷಿಸಿಕೊಳ್ಳಬೇಕಿತ್ತು. ಅದನ್ನು ಅವರು ಮಾಡಲಿಲ್ಲ. ಅದಕ್ಕೆ ಈ ಬಾರಿ ಕ್ಷೇತ್ರದ ಜನತೆಯೇ ನಿವೃತ್ತಿಗೊಳಿಸಿ ಮನೆಗೆ ಕಳುಹಿಸಲು ಸಜ್ಜಾಗಿದ್ದಾರೆ.ಎ.ಎಸ್ .ಪಾಟೀಲ (ನಡಹಳ್ಳಿ) ಬಿಜೆಪಿ ಅಭ್ಯರ್ಥಿ