Advertisement

ಪ್ರವಾಹ ಪೀಡಿತ ಪ್ರದೇಶಗಳಿಗೆ ಕಾಂಗ್ರೆಸ್‌ ತಂಡ ಭೇಟಿ

04:12 PM Oct 28, 2020 | Suhan S |

ಸೈದಾಪುರ: ಭೀಮಾ ನದಿ ಪ್ರವಾಹದಿಂದ  ನಮ್ಮ ಭಾಗದ ಸಾವಿರಾರು ಎಕರೆ ಭತ್ತ, ಹತ್ತಿ, ತೊಗರಿ ಬೆಳೆಗಳು ಹಾನಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ರಾಜ್ಯ ಸರ್ಕಾರ ಯಾವುದೇ ಪರಿಹಾರ ಘೋಷಿಸಿದೇ ರೈತರನ್ನು ಮರೆತಿದೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಶ್ರೇರಣಿಕುಮಾರ ದೋಖ ಹೇಳಿದರು.

Advertisement

ಭೀಮಾ ನದಿ ಪ್ರವಾಹ ಪೀಡಿತ ಪ್ರದೇಶಗಳಾದ ಗೊಂದಡಗಿ, ಗೂಡೂರು, ಆನೂರ.ಕೆ, ಭೀಮನಹಳ್ಳಿ ಮತ್ತು ಆನೂರು ಬಿ ಗ್ರಾಮದ ಜಮೀನುಗಳಿಗೆ ಕಾಂಗ್ರೆಸ್‌ ತಂಡದೊಂದಿಗೆ ಭೇಟಿ ನೀಡಿ ಮಾತನಾಡಿದರು.

ಅತಿವೃಷ್ಟಿ- ಪ್ರವಾಹದಿಂದ ಸುಮಾರು 1000 ಹೆಕೇrರ್‌ಗಿಂತ ಹೆಚ್ಚಿನ ಪ್ರಮಾಣದ ಬೆಳೆ ನಾಶವಾಗಿದೆ. ಜತೆಗೆ ಪಂಪ್‌ಸೆಟ್‌, ವಿದ್ಯುತ್‌ಕಂಬಗಳು ಮತ್ತು ಪರಿವರ್ತಕಗಳಿಗೆ ಹಾನಿಯಾಗಿದೆ. ಶೀಘ್ರ ನಮ್ಮ ಭಾಗದ ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಸೈದಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿಶ್ವನಾಥ ನೀಲಹಳ್ಳಿ ಮಾತನಾಡಿ, ರಾಜ್ಯ ಸರ್ಕಾರ ಬೆಂಗಳೂರಿಗೆ ಕೇಂದ್ರೀಕೃತವಾಗಿದೆ. ಇಲ್ಲಿನ ರೈತರು ಸಾಲ ಮಾಡಿ ಬೆಳೆದ ಬೆಳೆ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಅವರಿಗೆ ಕನಿಷ್ಠಒಂದು ಎಕರೆಗೆ ಇಪ್ಪತ್ತು ಸಾವಿರ ರೂ. ಪರಿಹಾರ ನೀಡಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ರೈತರೆಲ್ಲ ಸೇರಿಕೊಂಡು ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಈ ವೇಳೆ ಮಹಿಪಾಲರೆಡ್ಡಿ ದುಪ್ಪಲಿ, ಸಿದ್ದುಗೌಡ ಗೊಂದಡಗಿ, ಪುಂಡಲೀಕಗೊಂದಡಗಿ, ವಿಜಯಕುಮಾರಕಂದಳ್ಳಿ, ತಿಮ್ಮಣ್ಣ ಬೆಳಗುಂದಿ, ಸಿದ್ದಪ್ಪ ವಿಶ್ವಕರ್ಮ, ಮೋನಪ್ಪ ಇದ್ದರು.

Advertisement

ಅಬ್ಬೆತುಮಕೂರು ದೇವಿ ಪಾರಾಯಣ ಸಂಪನ್ನ : 

ಯಾದಗಿರಿ: ಕಲ್ಯಾಣ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಾಲೂಕಿನ ಅಬ್ಬೆತುಮಕೂರು ಸಿದ್ಧ ಸಂಸ್ಥಾನ ವಿಶ್ವಾರಾಧ್ಯರ ಮಠದಲ್ಲಿರುವ ಶಕ್ತಿ ದೇವತೆ ಭಗಳಾಂಬಿಕಾ ದೇವಿಯ ನವರಾತ್ರಿ ಉತ್ಸವ ಅಂಗವಾಗಿ ಮಠದ ಪೀಠಾ ಧಿಪತಿ ಡಾ| ಗಂಗಾಧರ ಮಹಾಸ್ವಾಮೀಜಿ ನೇತೃತ್ವದಲ್ಲಿ 9 ದಿನಗಳ ಕಾಲ ನಡೆದ ದೇವಿ ಪಾರಾಯಣ ಸಂಪನ್ನಗೊಂಡಿತು.

ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಶೀರ್ವಚನ ನೀಡಿದ ಡಾ| ಗಂಗಾಧರ ಮಹಾಸ್ವಾಮೀಜಿ, ಹಿಂದೂ ಧರ್ಮದಲ್ಲಿ ದೇವಿಗೆ ವಿಶೇಷ ಸ್ಥಾನ, ಪೂಜೆ, ಧಾರ್ಮಿಕ ಕೈಂಕರ್ಯಗಳಿವೆ. ಎಲ್ಲರೂ ಭಕ್ತಿ ಭಾವದಿಂದ ದೇವಿ ಆರಾಧನೆ ಮಾಡಿದರೆ ನಮ್ಮ ಇಷ್ಟಾರ್ಥಗಳು ಫಲಗೊಳ್ಳುತ್ತವೆ. ಎಂದರು.

ಪ್ರವಚನಕಾರರಾದ ಮಲ್ಲಿಕಾರ್ಜುನ ಶಾಸ್ತ್ರಿ ಐನಾಪೂರ, ದೇವಿ ಪಾರಾಯಣ ಮಾಡಿದರು. ಅನಿರುದ್ಧ ಕಾಕಲವಾರ ಸಂಗೀತ ಸೇವೆ ಸಲ್ಲಿಸಿದರು. ಬಸವರಾಜ ಶಾಸ್ತ್ರಿ ಶಹಾಪೂರ ಪುರೋಹಿತ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಮಠಕ್ಕೆ ಶಾಸಕ ಶರಣಬಸಪ್ಪಗೌಡ ದರ್ಶನಾಪೂರ, ನಾಗನಗೌಡ ಕಂದಕೂರ, ವೆಂಕಟರೆಡ್ಡಿ ಮುದ್ನಾಳ, ಬಸವರಾಜ ಮತ್ತಿಮೂಡ, ರಾಜಕುಮಾರ ಪಾಟೀಲ್‌ ತೇಲ್ಕೂರ, ಮಹಾರಾಷ್ಟ್ರದ ಮಾಜಿ ಸಚಿವ ಸಿದ್ದರಾಮ ಮೇತ್ರೆ, ಡಾ| ಶರಣಪ್ರಕಾಶ ಪಾಟೀಲ್‌, ಮಾಜಿ ಶಾಸಕರಾದ ಡಾ| ವೀರ ಬಸವಂತರೆಡ್ಡಿ ಮುದ್ನಾಳ, ಚನ್ನಾರೆಡ್ಡಿಪಾಟೀಲ್‌ ತುನ್ನೂರ, ಶ್ರೀನಿವಾಸರೆಡ್ಡಿ ಕಂದಕೂರ, ಡಾ| ಸುಭಾಶ್ಚಂದ್ರ ಕೌಲಗಿ, ಡಾ| ವೀರೇಶ ಜಾಕಾ, ಅಮೀನರೆಡ್ಡಿಹತ್ತಿಕುಣಿ, ಚನ್ನಪ್ಪಗೌಡ ಮೋಸಂಬಿ ಸೇರಿದಂತೆ ನೂರಾರುಭಕ್ತರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಿವಿಧ ಕಲಾ ತಂಡಗಳ ನೃತ್ಯ ಭಕ್ತರ ಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next