Advertisement

ಕಾಂಗ್ರೆಸ್‌-ಟಿಡಿಪಿ ಮೈತ್ರಿ 2018ರ ಈಸ್ಟ್‌ ಇಂಡಿಯಾ ಕಂಪೆನಿ: ಓವೈಸಿ

03:26 PM Nov 05, 2018 | udayavani editorial |

ಹೈದರಾಬಾದ್‌ : ‘ಕಾಂಗ್ರೆಸ್‌ ಮತ್ತು ತೆಲುಗು ದೇಶಂ ನಡುವಿನ ಮೈತ್ರಿಯು 2018ರ ಈಸ್ಟ್‌ ಇಂಡಿಯಾ ಕಂಪೆನಿಯಾಗಿದೆ’ ಎಂದು ಆಲ್‌ ಇಂಡಿಯಾ ಮಜ್‌ಲಿಸ್‌ ಎ ಇತ್ತೆಹಾದುಲ್‌ ಮುಸ್ಲಿಮೀನ್‌ (ಎಐಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಟೀಕಿಸಿದ್ದಾರೆ. 

Advertisement

‘ಕಾಂಗ್ರೆಸ್‌ – ಟಿಡಿಪಿ ನಡುವಿನ ಮೈತ್ರಿಯು ಮಹಾ ಕುಟುಂಬ ಅಲ್ಲ; ಇದು 2018ರ ಈಸ್ಟ್‌ ಇಂಡಿಯಾ ಕಂಪೆನಿ’ ಎಂದು ಓವೈಸಿ ಅವರು ಮೇಡಕ್‌ ಜಿಲ್ಲೆಯಲ್ಲಿನ ಸಂಗಾರೆಡ್ಡಿ ಕ್ಷೇತ್ರದ ಜಲಾಲಾ ಬಾಗ್‌ ಮಿಲಾದ್‌ ಗ್ರೌಂಡ್‌ನ‌ಲ್ಲಿ ನಡೆದ ಸಾರ್ವಜನಿಕ ಭಾಷಣ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು. 

“ಇದು ಏಕೆ 2018ರ ಈಸ್ಟ್‌ ಇಂಡಿಯಾ ಕಂಪೆನಿ ಎಂಬುದನ್ನು ನಾನು ನಿಮಗೆ ಹೇಳುತ್ತೇನೆ; ತೆಲಂಗಾಣ ರಚನೆಯಾಗಿದೆ; ಈಗ ತೆಲಂಗಾಣದ ನಿರ್ಧಾರಗಳನ್ನು ನಾಯ್ಡು ಅವರು ವಿಜಯವಾಡದಲ್ಲಿ ಕುಳಿತು ತೆಗೆದುಕೊಳ್ಳುತ್ತಾರೆಯೇ ? ಅಥವಾ ನಾಗ್ಪುರದಲ್ಲಿನ ಆರ್‌ಎಸ್‌ಎಸ್‌ ತೆಗೆದುಕೊಳ್ಳುತ್ತದೆಯೇ ? ಅಥವಾ ದಿಲ್ಲಿಯಲ್ಲಿನ ಕಾಂಗ್ರೆಸ್‌ ತೆಗೆದುಕೊಳ್ಳುತ್ತದೆಯೇ ?” ಎಂದು ಓವೈಸಿ ಪ್ರಶ್ನಿಸಿದರು. 

ಕಳೆದ ವಾರ ಟಿಡಿಪಿ 2019ರ ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್‌ ಜತೆ ಕೈಜೋಡಿಸಿತ್ತು. ಅದನ್ನು ಅನುಸರಿಸಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಬಿಜೆಪಿಯೇತರ ನಾಯಕರನ್ನು ಭೇಟಿಯಾಗಿ ಹೊಸ ಮೈತ್ರಿ ಕೂಟ ರಚನೆಯ ಯತ್ನವನ್ನು ಆರಂಭಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next