Advertisement

ಕಾಂಗ್ರೆಸ್‌ ಮುಳುಗುತ್ತಿರುವ ಹಡಗು; ಜಗದೀಶ ಶೆಟ್ಟರ

06:20 PM Jun 01, 2022 | Team Udayavani |

ಅಂಕೋಲಾ: ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ತನ್ನ ಆಂತರಿಕ ಕಚ್ಚಾಟದಿಂದ ಅಸ್ತಿತ್ವ ಕಳೆದುಕೊಂಡು ಈಗ ಮುಳುಗುತ್ತಿರುವ ಹಡಗು ಆಗಿ ಬಿಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

Advertisement

ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಪರ ಅಂಕೋಲಾದ ನಾಡವರ ಸಭಾಭವನದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ನಾಯಕರು ಅಲ್ಪಸಂಖ್ಯಾತರ ಮತ ಓಲೈಕೆಗಾಗಿ ಆರ್‌ಎಸ್‌ಎಸ್‌ ವಿರುದ್ಧ ಅಸಂಬದ್ಧ ಮಾತನಾಡುವ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಹಗಲುಗನಸು ಕಾಣುತ್ತಿದ್ದಾರೆ.

ಸಿದ್ದರಾಮಯ್ಯ-ಡಿ.ಕೆ ಶಿವಕುಮಾರ ತದ್ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದಾರೆ. ಹೀಗಾಗಿ ಕೇಂದ್ರದಲ್ಲಿ, ರಾಜ್ಯದಲ್ಲೂ ಸಮರ್ಥ ನಾಯಕರಿಲ್ಲದೆ ಕಾಂಗ್ರೆಸ್‌ ನೆಲಕಚ್ಚಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಜೆಡಿಎಸ್‌ ಅಸ್ತಿತ್ವದಲ್ಲೇ ಇಲ್ಲ ಎನ್ನುವಂತಿದೆ ಎಂದರು.

ಬಸವರಾಜ ಹೊರಟ್ಟಿಯವರು ಹೋರಾಟದ ನೆಲೆಯಿಂದ ಬಂದವರು. ಶಿಕ್ಷಕರ ಕಷ್ಟನಷ್ಟಗಳನ್ನು ಹತ್ತಿರದಿಂದ ಬಲ್ಲವರು. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿದ ಏಕೈಕ ನಾಯಕರಾಗಿದ್ದಾರೆ. ಅವರು ಕೇವಲ ಗೆಲ್ಲುವುದಷ್ಟೇ ಅಲ್ಲ ಶೇ.90ಕ್ಕಿಂತ ಹೆಚ್ಚು ಮತ ಪಡೆದು ದಾಖಲೆ ನಿರ್ಮಿಸಲಿದ್ದಾರೆ. ಉತ್ತರ ಕನ್ನಡ ಪ್ರಜ್ಞಾವಂತರ ಜಿಲ್ಲೆ ಎನಿಸಿದೆ. ಹೀಗಾಗಿ ಒಂದೇ ಒಂದು ಮತ ಕೂಡ ವ್ಯರ್ಥವಾಗಬಾರದು ಎಂದರು.

ವಿಧಾನ ಪರಿಷತ್‌ ಪಶ್ಚಿಮ ಪದವೀಧರ ಕ್ಷೇತ್ರದ ಪ್ರತಿನಿಧಿ ಎಸ್‌.ವಿ. ಸಂಕನೂರ ಮಾತನಾಡಿ, ಹೊರಟ್ಟಿಯವರು ಯಾವುದೇ ಪಕ್ಷದಲ್ಲಿದ್ದರೂ ಉತ್ತರ ಕನ್ನಡದ ಜನ ಅತೀ ಹೆಚ್ಚು ಮತ ನೀಡಿ ಗೆಲ್ಲಿಸಿದ್ದಾರೆ. ಈಗ ಎಂಟನೇ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಅತೀ ಹೆಚ್ಚು ಮತಗಳಿಸಿ ಹೊಸ ದಾಖಲೆ ನಿರ್ಮಿಸಲಿದ್ದಾರೆ ಎಂದರು.

Advertisement

ಕಾರ್ಮಿಕ ಸಚಿವ ಶಿವರಾಮ ಹೆಬ್ಟಾರ ಮಾತನಾಡಿ, ಈ ಹಿಂದೆ ಚುನಾವಣೆಗಳಲ್ಲಿ ಹೊರಟ್ಟಿ ವಿರುದ್ಧ ಬಿಜೆಪಿ ಸ್ಪರ್ಧಿಸುತ್ತಿತ್ತು. ಆದರೆ ಈಗ ಹೊರಟ್ಟಿಯವರೇ ಬಿಜೆಪಿಯಿಂದ ಸ್ಪರ್ಧಿಸುತ್ತಿರುವುದರಿಂದ ಅವರಿಗೆ ಪ್ರತಿಸ್ಪರ್ಧಿ ಇಲ್ಲವೆಂದೇ ಹೇಳಬಹುದು ಎಂದರು. ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಬಸವರಾಜ ಹೊರಟ್ಟಿ ಶಿಕ್ಷಕರ ಮೆಚ್ಚಿನ ಪ್ರತಿನಿಧಿಯಾಗಿ 42 ವರ್ಷ ಉತ್ತಮ ಕಾರ್ಯ ಮಾಡಿದ್ದಾರೆ. ಹೀಗಾಗಿ ಅವರ ಗೆಲುವು ಖಚಿತ ಎಂದರು.

ವಿಧಾನ ಪರಿಷತ್‌ ಸದಸ್ಯ ಗಣಪತಿ ಉಳ್ವೆಕರ, ಧಾರವಾಡ ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಭಾರಿ ಲಿಂಗರಾಜ ಪಾಟೀಲ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ರಾಜು ಖರವೆ, ಬಿಜೆಪಿ ಒಬಿಸಿ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜೇಂದ್ರ ನಾಯ್ಕ, ಬಿಜೆಪಿ ಅಂಕೋಲಾ ಮಂಡಲ ಅಧ್ಯಕ್ಷ ಸಂಜಯ ನಾಯ್ಕ ಇದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಸ್ವಾಗತಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಬಿಜೆಪಿ ಮಾಧ್ಯಮ ವಕ್ತಾರ ನಾಗರಾಜ ನಾಯಕ ವಂದಿಸಿದರು.

ಏಳು ಬಾರಿ ಗೆಲುವು ಸಾಧಿಸಿದ್ದು ದೇಶದಲ್ಲಿ ಮಾತ್ರ ಅಲ್ಲ, ಇಡೀ ಏಷ್ಯಾ ಖಂಡದಲ್ಲಿ ಸಾಧನೆ. ಸಾಧನೆ ಪಟ್ಟಿ ಇಟ್ಟು ಗೆಲುವು ಸಾಧಿಸಿದವರು ಹೊರಟ್ಟಿ ಅವರು.
ಎಸ್‌.ವಿ. ಸಂಕನೂರು, ವಿ.ಪ ಸದಸ್ಯರು 

ಶಿಕ್ಷಕರ ಸಮಸ್ಯೆ ಬಾಕಿ ಉಳಿದದ್ದೂ ಇದೆ. ಅದನ್ನೂ ಮುಂದೆ ಈಡೇರಿಸುತ್ತೇವೆ.
ಬಸವರಾಜ್‌ ಹೊರಟ್ಟಿ, ಅಭ್ಯರ್ಥಿ

ಶಿಕ್ಷಣ ಕ್ಷೇತ್ರದಲ್ಲಿ ಹೊರಟ್ಟಿ ಅವರಿಗೆ ಇರುವ ಅನುಭವ ಬೇರೆಯವರಿಗೆ ಇರಲು ಸಾಧ್ಯವಿಲ್ಲ. ಹೊರಟ್ಟಿ ಎದುರು ಬಿಜೆಪಿ ಆಗಿತ್ತು. ಈ ಬಾರಿ ಬಿಜೆಪಿಗೆ ಹೊರಟ್ಟಿ ಪ್ಲಸ್‌ ಆಗಿದಾರೆ.
ಶಿವರಾಮ ಹೆಬ್ಟಾರ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next