Advertisement
ಕಾಂಗ್ರೆಸ್ ಸ್ಕ್ರೀನಿಂಗ್ ಸಮಿತಿ ಸದಸ್ಯರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳನ್ನು ಒಳಗೊಂಡ ಈ ಸಭೆಯಲ್ಲಿ ಉಳಿದ 21 ಕ್ಷೇತ್ರಗಳ ಪೈಕಿ ಸಣ್ಣ ಪುಟ್ಟ ಗೊಂದಲಗಳ ನಿವಾರಣೆಗೆ ಕ್ರಮ ಕೈಗೊಳ್ಳಲಿದೆ. ಜತೆಗೆ ಪರಸ್ಪರ ಬಣಗಳ ಮನವೊಲಿಕೆಯೊಂದಿಗೆ ಸಾಧ್ಯವಾದಷ್ಟು ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಉದ್ದೇಶ ಹೊಂದಿದೆ. 2ನೇ ಹಂತದಲ್ಲಿ ಕನಿಷ್ಠ 12ರಿಂದ 15 ಕಡೆ ಅಭ್ಯರ್ಥಿ ಗಳನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಇಲ್ಲಿ ಅಂತಿಮಗೊಳ್ಳುವ ಆಯ್ಕೆ ಪಟ್ಟಿಯನ್ನು ಸಂಜೆ ಹೊಸದಿಲ್ಲಿಯಲ್ಲಿ ನಡೆಯಲಿರುವ ಸಿಇಸಿ (ಕಾಂಗ್ರೆಸ್ ಚುನಾವಣ ಸಮಿತಿ)ಗೆ ಕಳುಹಿಸಿ ಕೊಡ ಲಾಗುತ್ತದೆ ಎಂದು ಹೇಳಲಾಗಿದೆ.
Related Articles
Advertisement
ಕೆಲವೆಡೆ ಬಿಜೆಪಿಯು ಹಾಲಿ ಸಂಸದರನ್ನು ಕೈಬಿಟ್ಟು ಹೊಸ ಮುಖವನ್ನು ಪರಿಚಯಿಸಲು ಮುಂದಾಗಿದೆ. ಹಲವೆಡೆ ಪಕ್ಷ ಇನ್ನೂ ಅಂತಿಮಗೊಳಿಸಬೇಕಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಅಭ್ಯರ್ಥಿ ಅಂತಿಮವಾಗಿದ್ದರೂ ಪಕ್ಷ ಸೇರ್ಪಡೆ ಕಾರ್ಯಕ್ರಮ ಆಗಿಲ್ಲ. ಇಂತಹ ಹಲವು ಕಾರಣಗಳಿಂದ ಅನಂತರದ ಹಂತದಲ್ಲಿ ಪ್ರಕಟಗೊಳ್ಳಲಿವೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಪೈಪೋಟಿ ಹೆಚ್ಚಿರುವ ಆಯ್ದ ಕ್ಷೇತ್ರಗಳಲ್ಲಿ ಸಚಿವರನ್ನು ಕಣಕ್ಕಿಳಿಸಲು ಪಕ್ಷದ ಹೈಕಮಾಂಡ್ ಯೋಚಿಸಿತ್ತು. ಆದರೆ ಈ ಹೊರೆಯಿಂದ ನುಣುಚಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿರುವ ಸಚಿವರು ಕುಟುಂಬದ ಕುಡಿಗಳನ್ನೇ ಅಖಾಡಕ್ಕಿಳಿಸಿ, ಗೆಲ್ಲಿಸಿಕೊಂಡು ಬರುವುದಾಗಿ ತಮ್ಮ ನಾಯಕರ ಮನವೊಲಿಸುವಲ್ಲಿ ಭಾಗಶಃ ಯಶಸ್ವಿಯಾಗಿದೆ. ಆದರೂ ಪಟ್ಟಿ ಅಂತಿಮಗೊಳ್ಳುವವರೆಗೂ ತಳಮಳ ಮನೆ ಮಾಡಿದೆ.
ಇಂದು ಯಾವುದು ಅಂತಿಮ?ಮಂಗಳೂರು, ಬೆಂಗಳೂರು ದಕ್ಷಿಣ, ಕೇಂದ್ರ ಮತ್ತು ಉತ್ತರ, ಚಿತ್ರದುರ್ಗ, ಹುಬ್ಬಳ್ಳಿ-ಧಾರವಾಡ, ಬಳ್ಳಾರಿ, ಉತ್ತರ ಕನ್ನಡ, ಬಳ್ಳಾರಿ, ಬೀದರ್, ಕಲಬುರಗಿ, ಕೊಪ್ಪಳ ಕ್ಷೇತ್ರಗಳು. ಕಗ್ಗಂಟಾಗಿರುವ ಕ್ಷೇತ್ರಗಳು
ಉಡುಪಿ-ಚಿಕ್ಕಮಗಳೂರು, ಬೆಳಗಾವಿ, ಚಿಕ್ಕೋಡಿ, ಚಿಕ್ಕಬಳ್ಳಾಪುರ, ರಾಯಚೂರು, ಬಾಗಲಕೋಟೆ ಸೇರಿದಂತೆ ಆರೆಂಟು ಕ್ಷೇತ್ರಗಳು. ಇವುಗಳ ಬಗ್ಗೆ ಮತ್ತೂಂದು ಹಂತದಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಗ್ಯಾರಂಟಿ ಸಮಿತಿ
ನೇಮಕಕ್ಕೆ ಚರ್ಚೆ?
ಬೆಂಗಳೂರಿನಲ್ಲಿ ನಡೆಯಲಿರುವ ಸಭೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಗಳಿಗೆ ಪದಾಧಿಕಾರಿಗಳ ನೇಮಕದ ಬಗ್ಗೆಯೂ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಎಲ್ಲ ಐದು ಗ್ಯಾರಂಟಿಗಳ ಅನುಷ್ಠಾನ ಮತ್ತು ಮೇಲುಸ್ತುವಾರಿಗೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮಿತಿಗಳ ರಚನೆ ಆಗಬೇಕಿದೆ. ಇದಕ್ಕಾಗಿ ಸುಮಾರು ಆರೇಳು ಸಾವಿರ ಕಾರ್ಯಕರ್ತರಿಗೆ ಈ ಸಮಿತಿಗಳ ಮೂಲಕ ಕಾಂಗ್ರೆಸ್ ಅಧಿಕಾರ ಭಾಗ್ಯ ನೀಡಲಿದೆ. ಈ ಸಂಬಂಧದ ಕಸರತ್ತು ಕೂಡ ಇದೇ ವೇಳೆ ನಡೆಯುವ ಸಾಧ್ಯತೆ ಇದೆ.