Advertisement

Congress; ಸಂಡೂರು ಅಂತಿಮ: ಶಿಗ್ಗಾವಿ, ಚನ್ನಪಟ್ಟಣ ತಲೆನೋವು

11:49 PM Oct 20, 2024 | Team Udayavani |

ಬೆಂಗಳೂರು: ಎರಡು ವಿಧಾನ ಸಭಾ ಕ್ಷೇತ್ರಗಳಿಗೆ ವಿಪಕ್ಷ ಬಿಜೆಪಿಯು ಅಭ್ಯರ್ಥಿ ಘೋಷಿಸಿದ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್‌ನಲ್ಲೂ ಅಭ್ಯರ್ಥಿ ಆಯ್ಕೆ ಕಸರತ್ತು ಚುರುಕು ಗೊಂಡಿದ್ದು, ಸಿಎಂ ಸಿದ್ದ ರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವ ಕುಮಾರ್‌ ನೇತೃತ್ವದಲ್ಲಿ ಇಡೀ ಸಚಿವ ಸಂಪುಟ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಸಂಡೂರು ಅಂತಿಮ ಗೊಂಡಿದೆ. ಆದರೆ ಉಳಿದೆರಡು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಇನ್ನೂ ಕಗ್ಗಂಟಾಗಿ ಉಳಿದಿದೆ.

Advertisement

ಅದರಲ್ಲೂ ಶಿಗ್ಗಾವಿ ಕ್ಷೇತ್ರ ದಲ್ಲಿ ಅಭ್ಯರ್ಥಿಯ ಆಯ್ಕೆ ಕಾಂಗ್ರೆಸ್‌ ಪಾಲಿಗೆ ಧರ್ಮ ಸಂಕಟವಾಗಿದೆ.
ಸಂಡೂರು ಕ್ಷೇತ್ರಕ್ಕೆ ಸಂಸದ ಇ. ತುಕಾರಾಂ ಕುಟುಂಬದ ಸದಸ್ಯ  ರೊಬ್ಬರು, ಅದರಲ್ಲೂ ಪತ್ನಿ ಅನ್ನಪೂರ್ಣಾ ಅವರಿಗೆ ಟಿಕೆಟ್‌ ನೀಡಲು ಸಭೆಯಲ್ಲಿ ಒಮ್ಮತದ ಅಭಿ ಪ್ರಾಯ ವ್ಯಕ್ತವಾಗಿದೆ. ಆದರೆ ಪ್ರತಿಷ್ಠಿತ ಕ್ಷೇತ್ರವಾದ ಚನ್ನಪಟ್ಟಣ ಮತ್ತು ಶಿಗ್ಗಾವಿ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಹಲವು ಕಾರಣಗಳಿಂದ ಯಾವುದೇ ತೀರ್ಮಾನಕ್ಕೆ ಬರಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಚನ್ನಪಟ್ಟಣದಲ್ಲಿ ಮಾಜಿ ಸಂಸದ ಡಿ.ಕೆ. ಸುರೇಶ್‌ ಅವರನ್ನೇ ಕಣಕ್ಕಿಳಿಸುವ ಬಗ್ಗೆ ಬಹುತೇಕ ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಅವರು ಒಪ್ಪದಿದ್ದರೆ ಮಾತ್ರ 2ನೇ ಆಯ್ಕೆಗೆ ಹೋಗೋಣ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನಿರ್ಧಾರವನ್ನು ಈಗ ಸುರೇಶ್‌ ಅವರಿಗೆ ಬಿಡಲಾಗಿದೆ ಎಂದು ಸಚಿವರೊಬ್ಬರು ಮಾಹಿತಿ ನೀಡಿದರು.

ಒಗ್ಗಟ್ಟಿನ ಪಾಠ ಮಾಡಿದ ಸಿಎಂ
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಮೂರೂ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆಗಳು ಹೆಚ್ಚಿವೆ. ಲೋಕಸಭಾ ಚುನಾವಣೆಯಲ್ಲಾದ ತಪ್ಪು ಸರಿಪಡಿಸಿಕೊಳ್ಳಲು ಇದು ಉತ್ತಮ ಅವಕಾಶ. ಮೂರೂ ಕ್ಷೇತ್ರಗಳನ್ನು ಗೆಲ್ಲಲು ಎಲ್ಲ ಸಚಿವರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಒಗ್ಗಟ್ಟಿನ ಪಾಠ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next