Advertisement

Congress: ಶಾಸಕರಿಗೆ 100 ಕೋ.ರೂ. ಆಮಿಷಕ್ಕೆ ದಾಖಲೆ ಕೊಡಿ: ಪ್ರಹ್ಲಾದ್‌ ಜೋಶಿ

12:20 AM Nov 19, 2024 | Team Udayavani |

ಬೆಂಗಳೂರು: “ಬಿಜೆಪಿಯಿಂದ ಆಪರೇಶನ್‌ ಕಮಲಕ್ಕೆ ಪ್ರಯತ್ನ ನಡೆಯುತ್ತಿದೆ. ಕಾಂಗ್ರೆಸ್‌ ಶಾಸಕರಿಗೆ 50ರಿಂದ 100 ಕೋಟಿ ರೂ. ಆಮಿಷ ಒಡ್ಡಲಾಗುತ್ತಿದೆ’ ಎಂಬ ಸಿಎಂ ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್‌ ನಾಯಕರ ಆರೋಪಕ್ಕೆ ಕೆಂಡಕಾರಿರುವ ಬಿಜೆಪಿ, ಈ ಆರೋಪಗಳಿಗೆ ದಾಖಲೆ ಕೊಡಿ ಎಂದು ಆಗ್ರಹಿಸಿದೆಯಲ್ಲದೆ, ಎಸ್‌ಐಟಿ ರಚಿಸಿ ತನಿಖೆ ನಡೆಸಿ, ಸಿಎಂ ಹಾಗೂ ಶಾಸಕ ಗಣಿಗ ರವಿಗೆ ಮಂಪರು ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದೆ. ಮತ್ತೂಂದೆಡೆ ಶಾಸಕ ರವಿ ಗಣಿಗ ಈ ಸಂಬಂಧ ದಾಖಲೆ ಬಿಡುಗಡೆ ಮಾಡಬೇಕೆಂದು ಕೇಂದ್ರ ಸಚಿವ  ಪ್ರಹ್ಲಾದ್‌ ಜೋಶಿ ಸವಾಲು ಹಾಕಿದ್ದಾರೆ.

Advertisement

ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಮಾತನಾಡಿ, ರಾಜ್ಯ ಸರಕಾರವನ್ನು ಪತನಗೊಳಿಸಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಆಧರಿಸಿ ನ್ಯಾಯಾಲಯವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಸಿದ್ದರಾಮಯ್ಯ ಹಾಗೂ ಶಾಸಕ ಗಣಿಗ ರವಿಗೆ ಮಂಪರು ಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಸತ್ಯ ಬಯಲಿಗೆಳೆದ ಶಾಸಕ ತಮ್ಮಯ್ಯ
ಸರಕಾರವನ್ನು ಉರುಳಿಸಲು ಬಿಜೆಪಿ ಸಂಚು ಮಾಡುತ್ತಿದೆ ಎಂದು ಸಿದ್ದರಾಮಯ್ಯನವರು ಮೊದಲು ಆರೋಪಿಸಿದರು. ಇದಾದ ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಕೆಲವು ಸಚಿವರು ಆರೋಪ ಮಾಡಿದರು. ಬಳಿಕ ಶಾಸಕ ಗಣಿಗ ರವಿ 100 ಕೋಟಿ ರೂ. ಆಮಿಷ ಒಡ್ಡಲಾಗುತ್ತಿದೆ ಎಂದು ಆರೋಪಿಸಿದರು.
ಅನಂತರ “ನನಗೆ ಯಾರೂ ನೇರವಾಗಿ ಈ ರೀತಿ ಹೇಳಿಲ್ಲ. ಚಿಕ್ಕಮಗಳೂರು ಶಾಸಕ ತಮ್ಮಯ್ಯನವರಿಗೆ ಆಮಿಷವೊಡ್ಡಿದ್ದರು’ ಎಂದು ಆಪಾದಿಸಿದ್ದರು. ಆದರೆ ತಮ್ಮಯ್ಯ ಇದನ್ನು ನಿರಾಕರಿಸುವ ಮೂಲಕ ಸತ್ಯವನ್ನು ಬಯಲಿಗೆ ಎಳೆದಿದ್ದಾರೆ ಎಂದು ಸಿ.ಟಿ. ರವಿ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next