ಉಡುಪಿ: ಶಾಲಾ ಮಕ್ಕಳ ಪಠ್ಯ ಪುಸ್ತಕ ಪರಿಷ್ಕರಣೆ ವಿಷಯದಲ್ಲಿ ಕಾಂಗ್ರೆಸ್ ಸುಳ್ಳಿನ ಮೇಲೆ ಸವಾರಿ ಮಾಡುತ್ತಿದೆ ಎಂದು ಸಮಾಜ ಕಲ್ಯಾಣಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಈ ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ ರಚಿಸಿದ್ದ ಪ್ರೊ| ಬರಗೂರು ರಾಮಚಂದ್ರಪ್ಪನವರ ಸಮಿತಿ ಏನು ಮಾಡಿದೆ ಎಂಬ ಮಾಹಿತಿಯೂ ನಮ್ಮ ಬಳಿಯಿದೆ. ಈಗ ರೋಹಿತ್ ಚಕ್ರತಿರ್ಥರ ಸಮಿತಿ ಏನು ಮಾಡಿದೆ ಎಂಬುದು ಗೊತ್ತಿದೆ. ಹೀಗಾಗಿ ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಮುಕ್ತ ಚರ್ಚೆಗೆ ನಾವು ಸಿದ್ಧರಿದ್ದೇವೆ ಎಂದರು.
ಪಠ್ಯದಲ್ಲಿ ರಾಷ್ಟ್ರಪ್ರೇಮ ತುಂಬು ವುದು ತಪ್ಪೇ? ಅಸಹಿಷ್ಣುತೆ ಹೆಸರಿಲ್ಲಿ ಪ್ರಶಸ್ತಿ ವಾಪಸ್, ಪಠ್ಯ ವಾಪಸ್ ಎಲ್ಲವೂ ನೋಡಿದ್ದೇವೆ. ಪ್ರಶಸ್ತಿ ಸಿಗದವರೂ ಪ್ರಚಾರಕ್ಕಾಗಿ ವಾಪಸ್ ತಂತ್ರ ಬಳಸಿಕೊಂಡಿದ್ದರು. ಈಗಲೂ ಕೆಲವು ಅದನ್ನೇ ಮಾಡುತ್ತಿದ್ದಾರೆ. ಹಿರಿಯ ಸಾಹಿತಿ ದೇವನೂರ ಮಹದೇವ ಅವರಲ್ಲಿ ಶಿಕ್ಷಣ ಸಚಿವರೇ ಖುದ್ದು ಮಾತಾಡಿದ್ದಾರೆ. ಸಾಹಿತಿಗಳಿಗೆ ನೀಡಬೇಕಾದ ಗೌರವ ನೀಡುತ್ತಿದ್ದೇವೆ. ಅಸಹಿಷ್ಣುತೆ ಹೆಸರಿನಲ್ಲಿ ದಬ್ಟಾಳಿಕೆ, ಸರಕಾರದ ವಿರುದ್ಧ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದರು.
ಪಿಯುಸಿ ಪಠ್ಯ ಪರಿಷ್ಕರಣೆ ಕೈ ಬಿಟ್ಟಿಲ್ಲ, ಮುಂದೂಡಿದ್ದೇವೆ. ಪಠ್ಯದಲ್ಲಿ ಏನಿರಬೇಕು, ಏನಿರಬಾರದು ಎಂಬು ದನ್ನು ಸರಕಾರವಾಗಿ ನಾವು ನಿರ್ಧರಿಸುತ್ತೇವೆ. ಮಕ್ಕಳಿಗೆ ರಾಷ್ಟ್ರಪ್ರೇಮ ಕಲಿಸುವ ಪಠ್ಯ ಜೋಡಿಸಲಾಗು
ವುದು. ರಾಜಕೀಯ ಕಾರಣಕ್ಕೆ ಪಠ್ಯಪುಸ್ತಕ ಎಂಬ ಭೂತವನ್ನು ಕಾಂಗ್ರೆಸ್‌ನವರು ಸೃಷ್ಟಿಸುತ್ತಿದ್ದಾರೆ. ಇದರಲ್ಲಿ ಕಾಂಗ್ರೆಸ್‌ನ ವಿಚಾರ, ಭಾವನೆಯೇನು? ಜನರು ಎಲ್ಲವನ್ನು ನೋಡುತ್ತಿದ್ದಾರೆ ಎಂದರು.
ಆರೆಸ್ಸೆಸ್ ವಿರುದ್ಧದ ಕಾಂಗ್ರೆಸ್‌ನ ಟೀಕೆ ಆ ಪಕ್ಷದ ಅಧೋಗತಿಗೆ ಕಾರಣವಾಗಲಿದೆ ಎಂದು ಶ್ರೀನಿವಾಸ ಪೂಜಾರಿ ಹೇಳಿದರು.