ಹೊಸದಿಲ್ಲಿ : ತನ್ನೊಂದಿಗೆ ಕೆಟ್ಟದಾಗಿ ನಡೆದುಕೊಂಡ ಕಾರಣಕ್ಕೆ ಅಮಾನತುಗೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಮೇಲಿನ ಅಮಾನತನ್ನು ತೆರವುಗೊಳಿಸಿರುವ ಪಕ್ಷದ ನಿರ್ಧಾರಕ್ಕೆ ದಿಲ್ಲಿ ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ತೀವ್ರ ಅತೃಪ್ತಿ, ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದವರ ಮೇಲೆ ಪಕ್ಷದೊಳಗಿನ ಗೂಂಡಾಗಳಿಗೆ ಸವಾರಿ ಮಾಡುವುದಕ್ಕೆ ಅವಕಾಶ ನೀಡುವ ಪಕ್ಷದ ಆದ್ಯತೆಯನ್ನು ಪ್ರಿಯಾಂಕಾ ಚತುರ್ವೇದಿ ತೀವ್ರವಾಗಿ ಖಂಡಿಸಿದ್ದಾರೆ.
‘ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದೊಳಗೆ ಗೂಂಡಾಗಳಿಗೆ ಆದ್ಯತೆ ಸಿಗುತ್ತಿರುವುದನ್ನು ಕಂಡು ದುಃಖವಾಗಿದೆ. ಪಕ್ಷದ ಏಳಿಗೆಗಾಗಿ ಬೆವರು ಮತ್ತು ರಕ್ತ ಹರಿಸಿದವರ ಮೇಲೆ ಈ ಗೂಂಡಾಗಳು ಸವಾರಿ ಮಾಡುತ್ತಿದ್ದಾರೆ. ನನ್ನೊಂದಿಗೆ ಕೆಟ್ಟದಾಗಿ ವರ್ತಿಸಿ ನನಗೇ ಬೆದರಿಕೆ ಹಾಕಿದ್ದ ಈ ಗೂಂಡಾಗಳು ಹಿಂದೊಮ್ಮೆ ಅಮಾನುತಗೊಂಡಿದ್ದರು. ಅವರ ಮೇಲೆ ಯಾವುದೇ ಕ್ರಮವನ್ನು ತೆಗೆದುಕೊಳ್ಳದೆ ಇದೀಗ ಅವರ ಅಮಾನತನ್ನು ಪಕ್ಷ ನಾಯಕತ್ವ ತೆರವುಗೊಳಿಸಿ ಅವರನ್ನು ಪುನರ್ ಸ್ಥಾಪಿಸಿರುವುದು ಅತ್ಯಂತ ದುರದೃಷ್ಟಕರ’ ಎಂದು ಪ್ರಿಯಾಂಕಾ ಚತುರ್ವೇದಿ ತಮ್ಮ tweet ನಲ್ಲಿ ಹೇಳಿದ್ದಾರೆ.