Advertisement

Congress; ಲೀಡ್ ಕೊಡಿಸದಿರುವ ಸಚಿವರ ರಾಜೀನಾಮೆಗೆ ಬಸವರಾಜ್ ವಿ. ಶಿವಗಂಗಾ ಒತ್ತಾಯ

06:54 PM Jun 10, 2024 | Team Udayavani |

ದಾವಣಗೆರೆ: ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗೆ ಲೀಡ್ ಕೊಡಿಸದಿರುವ ಸಚಿವರ ರಾಜೀನಾಮೆಗೆ ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ್ ವಿ. ಶಿವಗಂಗಾ ಒತ್ತಾಯಿಸಿದ್ದಾರೆ.

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಯಾವ ಸಚಿವರು ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆ ಲೀಡ್ ಕಡಿಮೆ ಕೊಡಿಸಿದ್ದಾರೋ ಅಂತವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ಹೊಸಬರಿಗೆ ಅವಕಾಶ ಮಾಡಿಕೊಡುವಂತಾಗಬೇಕು ಎಂದರು.

ತಮ್ಮ ಕ್ಷೇತ್ರ ದಲ್ಲಿ ಯಾರು ಲೀಡ್ ಕೊಡಿಸಲು ಸಾಧ್ಯವಾಗಲಿಲ್ಲವೋ ಅಂತ ಸಚಿವರನ್ನು ತೆಗೆಯಬೇಕು. ಶಾಸಕರು, ಕಾರ್ಯಕರ್ತರು ಹಗಲು ಇರುಳು ಕೆಲಸ ಮಾಡಿ ಅಯಾ ಕ್ಷೇತ್ರ ಗಳಲ್ಲಿ ಲೀಡ್ ಕೊಡಿಸಿದ್ದೇವೆ. ಆದರೆ, ಕೆಲವಾರು ಸಚಿವರು ಅಭ್ಯರ್ಥಿಗಳನ್ನು ಗೆಲ್ಲಿಸುವುದು ಇರಲಿ ಅವರ ಕ್ಷೇತ್ರಗಳಲ್ಲಿ ಲೀಡ್ ಕೊಡಿಸಿಲ್ಲ. ನಮ್ಮ ಸಚಿವರು ಅವರ ಕ್ಷೇತ್ರ ದಲ್ಲಿ ಲೀಡ್ ಕೊಡಿಸದಿದ್ದರೂ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಹುಲ್ ಗಾಂಧಿಯವರು ಹಾಗೂ ಹಿರಿಯ ನಾಯಕರು ಲೀಡ್ ಕೊಡಸದ ಸಚಿವರ ವಿರುದ್ದ ಕ್ರಮ ಕೈಗೊಳ್ಳಬೇಕು.ನಮಗೆ ಪಕ್ಷ ಮುಖ್ಯ ಹೊರತು. ವ್ಯಕ್ತಿ ಮುಖ್ಯವಲ್ಲ.ಹಾಗಾಗಿ ಕ್ರಮ ಕೈಗೊಳ್ಳಬೇಕು. ಇಷ್ಟೊಂದು ಗ್ಯಾರೆಂಟಿ ಯೋಜನೆ ನೀಡಿದರೂ ಕೂಡ ರಾಜ್ಯದಲ್ಲಿ ಹೆಚ್ಚು ಸೀಟ್ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next