Advertisement

“ಕೈ” ವೆಬ್ ಸೈಟ್ ನಲ್ಲಿ ಪಕ್ಷದ ಅಧ್ಯಕ್ಷರ ಪಟ್ಟಿಯಿಂದ ಸೀತಾರಾಮ್ ಕೇಸರಿ ಹೆಸರು ಡಿಲೀಟ್!

10:15 AM Jun 05, 2019 | Nagendra Trasi |

ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಪಟ್ಟಿಯಿಂದ ಮಾಜಿ ಕಾಂಗ್ರೆಸ್ ಅಧ್ಯಕ್ಷ ದಿ.ಸೀತಾರಾಮ್ ಕೇಸರಿ ಅವರ ಹೆಸರನ್ನು ಮಂಗಳವಾರ ತೆಗೆದುಹಾಕಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

ಸೀತಾರಾಮ್ ಕೇಸರಿ 1996ರಿಂದ 1998ರವರೆಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಆದರೆ ಕಾಂಗ್ರೆಸ್ ಪಕ್ಷದ ವೆಬ್ ಸೈಟ್ ನಲ್ಲಿ ಪಿವಿ ನರಸಿಂಹ ರಾವ್ ಮತ್ತು ಸೋನಿಯಾ ಗಾಂಧಿ 1990-2018ರವರೆಗೆ ಕಾಂಗ್ರೆಸ್ ಅಧ್ಯಕ್ಷರಾಗಿರುವುದಾಗಿ ಉಲ್ಲೇಖಿಸಿದೆ.

1996ರಲ್ಲಿ ದಿ.ನರಸಿಂಹ ರಾವ್ ಅವರು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ಸೀತಾರಾಮ್ ಕೇಸರಿ ಅವರನ್ನು ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. 19973ರಲ್ಲಿ ಬಿಹಾರ ಕಾಂಗ್ರೆಸ್ ಘಟಕದ ಅಧ್ಯಕ್ಷರನ್ನಾಗಿ ಕೇಸರಿ ಅವರನ್ನು ಆಯ್ಕೆ ಮಾಡಲಾಗಿತ್ತು. 1967ರಲ್ಲಿ ಕಟಿಹಾರ್ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಚುನಾಯಿತರಾಗಿದ್ದರು.

ಕೇಸರಿ 1971ರ ಜುಲೈ ಮತ್ತು ಏಪ್ರಿಲ್ 2000ರವರೆಗೆ ಬಿಹಾರದಿಂದ ಐದು ಬಾರಿ ರಾಜ್ಯಸಭಾ ಸದಸ್ಯರಾಗಿ ನೇಮಕವಾಗಿದ್ದರು. ಇಂದಿರಾಗಾಂಧಿ, ರಾಜೀವ್ ಗಾಂಧಿ ಮತ್ತು ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ಕೇಸರಿ ಕೇಂದ್ರ ಸಚಿವರಾಗಿದ್ದರು.

Advertisement

ಪ್ರಧಾನಿ ಎಚ್ ಡಿ ದೇವೇಗೌಡ ನೇತೃತ್ವದ ಯೂನೈಟೆಡ್ ಫ್ರಂಟ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಸೀತಾರಾಮ್ ಕೇಸರಿ ಹಿಂಪಡೆಯುವ ಮೂಲಕ ಭಾರೀ ವಿವಾದಕ್ಕೊಳಗಾಗಿದ್ದರು. 1997ರ ಏಪ್ರಿಲ್ ನಲ್ಲಿ ಸರ್ಕಾರ ಪತನವಾಗುವ ಮೂಲಕ ದೇವೇಗೌಡರು ಪ್ರಧಾನಿ ಪಟ್ಟದಿಂದ ಕೆಳಗಿಳಿದಿದ್ದರು. ಏತನ್ಮಧ್ಯೆ ಒಪ್ಪಂದದ ಮೇರೆಗೆ ಯೂನೈಟೆಡ್ ಫ್ರಂಟ್ ಐಕೆ ಗುಜ್ರಾಲ್ ಅವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next