Advertisement

ನಕಲಿ ಆಡಿಯೋ: ರೆಡ್ಡಿ

06:15 AM May 19, 2018 | Team Udayavani |

ಬೆಂಗಳೂರು: “ನಕಲಿ ಆಡಿಯೋವನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿದ್ದು, ಅದಕ್ಕೂ ನನಗೂ ಸಂಬಂಧವಿಲ್ಲ’ ಎಂದು ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. 

Advertisement

ಫೇಸ್‌ ಬುಕ್‌ನಲ್ಲಿ ಸ್ಪಷ್ಟನೆ ನೀಡಿರುವ ಅವರು, ಸೋಲಿನ ಭೀತಿಯಿಂದ ಅನಗತ್ಯವಾಗಿ ನನ್ನ ಹೆಸರಿನ ನಕಲಿ ಆಡಿಯೋ ಬಿಡುಗಡೆ ಮಾಡಿ ನನಗೆ ಹಾಗೂ ಬಿಜೆಪಿಗೆ ಕೆಟ್ಟ ಹೆಸರು ತರುವ ಷಡ್ಯಂತ್ರ ಮಾಡಲಾ ಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಪರಿಚಿತ ವ್ಯಕ್ತಿಗಳ ಸಂಭಾಷಣೆಯ ನಡುವೆ ಅನಗತ್ಯವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಹೆಸರು ಪ್ರಸ್ತಾಪವಿರುವ
ನಕಲಿ ಆಡಿಯೋ ಬಿಡುಗಡೆಗೊಳಿಸಿರುವುದು ಕಾಂಗ್ರೆಸ್‌ನ ಕೊಳಕು ರಾಜಕೀಯವನ್ನು ಎತ್ತಿ ತೋರಿಸುತ್ತಿದೆ.

– ಪ್ರಕಾಶ್‌ ಜಾವಡೇಕರ್‌, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next