Advertisement

ಕಾಂಗ್ರೆಸ್‌ ಮಹಿಳಾ ಘಟಕ ಬಲವರ್ಧನೆಗೊಳಿಸಿ

03:41 PM Dec 15, 2018 | Team Udayavani |

ಹಗರಿಬೊಮ್ಮನಹಳ್ಳಿ : ಕಾಂಗ್ರೆಸ್‌ ಮಹಿಳಾ ಶಕ್ತಿ ಸಂಘಟನೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಕಾಂಗ್ರೆಸ್‌ ಮಹಿಳಾ ಪದಾಧಿಕಾರಿಗಳು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಎಂ.ಆಶಾಲತಾ ತಿಳಿಸಿದರು.

Advertisement

ಪಟ್ಟಣದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತಾಲೂಕು ಮತ್ತು ಜಿಲ್ಲಾ ಕಾಂಗ್ರೆಸ್‌ ಘಟಕದ ನೂತನ ಪದಾಧಿಕಾರಿಗಳಿಗೆ ಆದೇಶಪತ್ರ ವಿತರಿಸಿ ಮಾತನಾಡಿದ ಅವರು, ಪ್ರತಿ ತಾಲೂಕುಗಳಲ್ಲಿ ಪಕ್ಷದ ವರಿಷ್ಠರು ನೀಡಿದ ಮಾರ್ಗಸೂಚಿ ಅನ್ವಯ ಪಕ್ಷದ ಮಹಿಳಾ ಘಟಕದ ಬಲವರ್ಧನಗೆ ಅಗತ್ಯ ಕ್ರಮ ರೂಪಿಸಲಾಗುವುದು. ಪಕ್ಷದ ಹೊಸ ಪದಾಧಿಕಾರಿಗಳು ಮಹಿಳಾ ಘಟಕವನ್ನು ಪಕ್ಷದ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಸಬೇಕೆಂದು ಸಲಹೆ ನೀಡಿದರು. 

ಮಹಿಳಾ ಒಕ್ಕೂಟದ ಅಧ್ಯಕ್ಷೆ ಗೀತಾಬಾಯಿ ಭೀಮಾನಾಯ್ಕ ಮಾತನಾಡಿ, ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮಹಿಳಾ ಘಟಕವನ್ನು ಮತಗಟ್ಟೆ ಮಟ್ಟದಿಂದ ಸಂಘಟಿಸಲಾಗುವುದು. ಮಹಿಳಾ ಸಬಲೀಕರಣಕ್ಕೆ ಪಕ್ಷದಿಂದ ವ್ಯಾಪಕ ಕ್ರಮ ಕೈಗೆತ್ತಿಕೊಳ್ಳಲಾಗಿದೆ. ಗ್ರಾಮೀಣ ಪ್ರದೇಶದ ಮಹಿಳೆಯರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಮೂಲಕ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕಿದೆ. ಪ್ರಮುಖವಾಗಿ ಮಹಿಳೆಯರ ಪರ ರೂಪಿಸಲಾದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು.

ಮಹಿಳೆಯರಿಗೆ ಮಾಸಿಕ ಪಿಂಚಣಿ, ವಸತಿ, ಶೌಚಾಲಯ ಸೇರಿದಂತೆ ಮೂಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಪಕ್ಷದ ಪದಾಧಿಕಾರಿಗಳು ಕಾಳಜಿ ವಹಿಸಬೇಕು. ಪ್ರಮುಖವಾಗಿ 10 ಕೆರೆಗಳಿಗೆ ಶಾಶ್ವತ ನೀರೊದಗಿಸುವ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯಬೇಕು. ಸಂಕ್ರಾತಿ ಹಬ್ಬದ ಪ್ರಯುಕ್ತ ಮಹಿಳೆಯರಿಗೆ ಸಂಕ್ರಾತಿ ಸಂಭ್ರಮ ಎಂದು ಗ್ರಾ.ಪಂ.ವ್ಯಾಪ್ತಿಗಳಲ್ಲಿ ರಂಗೋಲಿ ಸ್ಪರ್ಧೆ ಏರ್ಪಡಿಸಿಲಾಗಿದೆ. ಈ ಮೂಲಕ ಮಹಿಳೆಯರ ಸಮಸ್ಯೆಗಳನ್ನು ಸಂಗ್ರಹಿಸಿ ಪರಿಹಾರ ರೂಪಿಸಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಹ.ಬೊ.ಹಳ್ಳಿ ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷರಾಗಿ ಆಯ್ಕೆಯಾದ ಯಶೋದಾ ಮಂಜುನಾಥ್‌, ಜಿಲ್ಲಾ ಉಪಾಧ್ಯಕ್ಷೆ ಶಾಹಿರಾಬಾನು, ಕೊಟ್ಟೂರು ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷೆ ಸುಮಾರಿಗೆ ಪಕ್ಷದ ಆದೇಶಪತ್ರ ನೀಡಲಾಯಿತು. ತಾಪಂ ಉಪಾಧ್ಯಕ್ಷೆ ಸುಶೀಲಮ್ಮ, ಪುರಸಭೆ ಸದಸ್ಯೆ ಹಾಲ್ದಾಳ್‌ ಕವಿತಾ ವಿಜಯಕುಮಾರ್‌, ಕೆ.ಮಂಜುಳಾ, ನಾಗವೇಣಿ, ಅಂಬಿಕಾ, ದೀಪಿಕಾ, ಕೊಟ್ರಮ್ಮ, ರೇಣುಕಾ ಬಸವರಾಜ,
ಸುಧಾ ಇನ್ನಿತರರಿದ್ದರು.ರೈತ ಮುಖಂಡ ಹತ್ತಿ ಅಡಿವೆಪ್ಪ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next