ಹೊಸದಿಲ್ಲಿ : ತಮ್ಮ ಟ್ವಿಟರ್ ಖಾತೆಗೆ ವೈಯಕ್ತಿಕ ಛಾಪನ್ನು ನೀಡುವ ಸಲುವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಟ್ಟಿಟರ್ ಹ್ಯಾಂಡಲ್ ಅನ್ನು @OfficeofRG ಯಿಂದ @RahulGandhi ಗೆ ಬದಲಾಯಿಸಿದ್ದಾರೆ.
ಈ ಬದಲಾವಣೆಯು ರಾಹುಲ್ ಗಾಂಧಿ ಅವರು ಪಕ್ಷಾಧ್ಯಕ್ಷರಾಗಿ ಇದೇ ಮೊದಲ ಬಾರಿಗೆ ಮೂರು ದಿನಗಳ ಕಾಂಗ್ರೆಸ್ ಪೂರ್ಣಾಧಿವೇಶನ ನಡೆಸುವ ಸಂದರ್ಭದಲ್ಲೇ ಒದಗಿರುವುದು ಗಮನಾರ್ಹವಾಗಿದೆ.
ರಾಹುಲ್ ಗಾಂಧಿ ಅವರು ಟ್ವಿಟರ್‌ನಲ್ಲಿ ಈಚಿನಿಂದ ಸಕ್ರಿಯವಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧದ ದಾಳಿಗೆ, ಸರಕಾರಿ ನೀತಿಗಳನ್ನು ಟೀಕಿಸುವುದಕ್ಕೆ ರಾಹುಲ್ ಟ್ಟಿಟರ್ ವೇದಿಕೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ.
ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ರಾಹುಲ್ ಸರಣಿ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದಿನನಿತ್ಯ ಒಂದು ಪ್ರಶ್ನೆಯನ್ನು ಕೇಳಿದ್ದಾರೆ.
ರಾಹುಲ್ ಗಾಂಧಿಗೆ ಟ್ವಿಟರ್‌ನಲ್ಲಿ 62 ಲಕ್ಷ ಫಾಲೋವರ್‌ಗಳು ಇದ್ದಾರೆ. 2014ರ ಮಹಾ ಚುನಾವಣೆಯ ವೇಳೆ ಸಾಮಾಜಿಕ ಜಾಲ ತಾಣಗಳನ್ನು ಬಿಜೆಪಿ ಪರಿಣಾಮಕಾರಿಯಾಗಿ ಬಳಸಿಕೊಂಡಂತೆ ಕಾಂಗ್ರೆಸ್ ಈಗ ಅದೇ ಹಾದಿಯಲ್ಲಿ ಸಾಗಲು ಮುಂದಾಗಿದೆ.