ಕುಣಿಗಲ್: ಸ್ಥಳೀಯ ಸಂಸ್ಥೆಗೆ ಸರ್ಕಾರ ಮೀಸಲಾತಿ ಪ್ರಕಟಿಸಿದ್ದು ಕುಣಿಗಲ್ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಗದ್ದುಗೆಗಾಗಿ ಕಾಂಗ್ರೆಸ್‌ನಲ್ಲಿ ತೆರೆಮೆರೆ ಕಸರತ್ತು ಆರಂಭವಾಗಿದೆ.
ರಾಜ್ಯ ಸರ್ಕಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪಟ್ಟಿ ಬಿಡುಗಡೆಗೊಳಿಸಿ ಆದೇಶ ಹೊರ ಬೀಳುತ್ತಿದಂತೆ ಆಡಳಿತ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್‌ನಲ್ಲೇ ಒಳಗೊಳಗೆ ಪೈಪೋಟಿನಡೆದಿದೆ. ಕಳೆದ ಅವಧಿಯಲ್ಲಿ ಪುರುಷರಿಗೆ ಅಧ್ಯಕ್ಷ ಸ್ಥಾನ ಕೈ ತಪ್ಪಿತ್ತು. ಆದರೆ ಈ ಬಾರಿ ಅಧ್ಯಕ್ಷ ಸ್ಥಾನಸಾಮಾನ್ಯ ವರ್ಗಕ್ಕೆ ನಿಗದಿಯಾಗಿದ್ದು, ಮಹಿಳಾಅಥವಾ ಪುರುಷ ಯಾರು ಬೇಕಾದರೂ ಅಧ್ಯಕ್ಷರಾಗಬಹುದಾಗಿದೆ.
ಕಾಂಗ್ರೆಸ್‌ಗೆ 17 ಸದಸ್ಯರ ಬಲ: 23 ಸ್ಥಾನ ಹೊಂದಿರುವ ಪುರಸಭೆಯಲ್ಲಿ ಅಧಿಕಾರ ಗದ್ದುಗೆಏರಲು 12 ಸ್ಥಾನ ಬೇಕು, 14 ಸ್ಥಾನ ಹೊಂದಿರು ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದೆ, ಅಲ್ಲದೆ ಎರಡನೇ ವಾರ್ಡ್‌ನಿಂದ ಗೆಲುವು ಸಾಧಿಸಿರುವಜೆಡಿಎಸ್‌ನ ಸದಸ್ಯೆ ಪತಿ ಮಲ್ಯನಾಗರಾಜು ಇತ್ತೀಚೆಗೆಕಾಂಗ್ರೆಸ್‌ನತ್ತಾ ವಾಲಿದ್ದು ಹಾಗೂ ಕಾಂಗ್ರೆಸ್ ಟಿಕೆಟ್ ನಿಂದ ವಂಚಿತರಾಗಿ ಪಕ್ಷೇತರಾಗಿ ಗೆದ್ದಿರುವ ಇಬ್ಬರು ಸದಸ್ಯರು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದು ಒಟ್ಟು 17 ಸದಸ್ಯರ ಬಲ ಕಾಂಗ್ರೆಸ್‌ಗೆ ಇದೆ.
ಅಧ್ಯಕ್ಷ ಸ್ಥಾನಕ್ಕೆ ರೇಸ್‌ನಲ್ಲಿ ನಾಲ್ವರು: ಹೀಗಾಗಿ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿ ನಾಲ್ಕು ಮಂದಿ ಸದಸ್ಯರುರೇಸ್‌ನಲ್ಲಿ ಇದ್ದಾರೆ, ಇನ್ನು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದ್ದು ಮೂರು ಮಂದಿಸದಸ್ಯರಿದ್ದಾರೆ. ಅಧಿಕಾರಕ್ಕಾಗಿ ಸದಸ್ಯರು ಒಳಗೊಳಗೆಪಕ್ಷದ ವರಿಷ್ಠರ ದುಂಬ್ಟಾಲು ಬೀಳಲು ಆರಂಭಿಸಿದ್ದಾರೆ.
ತೀವ್ರ ಪೈಪೋಟಿ: ಅಧ್ಯಕ್ಷ ಸ್ಥಾನಕ್ಕಾಗಿ ನಾಲ್ಕು ಬಾರಿ ಸತತವಾಗಿ ಗೆಲುವು ಸಾಧಿಸಿರುವ 11ನೇ ವಾರ್ಡ್‌ನ ರಂಗಸ್ವಾಮಿ, ಹ್ಯಾಟ್ರಿಕ್ ಗೆಲುವು ಸಾಧಿಸಿರುವಮೂರನೇ ವಾರ್ಡ್‌ನ ರಾಮು, 7ನೇ ವಾರ್ಡ್‌ಸಮೀವುಲ್ಲಾ ಹಾಗೂ ಎರಡನೇ ಬಾರಿ ಗೆಲುವುಸಾಧಿಸಿರುವ 6 ವಾರ್ಡ್‌ನ ಬಿ.ಎನ್.ಅರುಣ್‌ಕುಮಾರ್, ಇದೇ ಪ್ರಥಮ ಬಾರಿ ಪುರಸಭೆ ಪ್ರವೇಶಿಸಿರುವ 21ನೇ ವಾರ್ಡ್ ನಾಗೇಂದ್ರ ಮಧ್ಯೆ ತೀವ್ರ ಪೈಪೋಟಿ ಶುರುವಾಗಿದೆ. ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಎರಡು ಬಾರಿ ಗೆಲುವು ಸಾಧಿಸಿರುವ 13ನೇ ವಾರ್ಡ್ ಕೆ.ಆರ್.ಜಯಲಕ್ಷ್ಮೀ,ಮೊದಲಬಾರಿಜಯಗಳಿಸಿರುವ 17ನೇ ವಾರ್ಡ್ ಕೆ.ಎಂ.ಅಸ್ಮಾ, 8ನೇ ವಾರ್ಡ್ ಎಚ್. ಮಂಜುಳಾ ಮಂಚೂಣಿಯಲ್ಲಿ ಇದ್ದಾರೆ.
ಮೇ 29, 2019 ರಂದು ಪುರಸಭೆಗೆ ಚುನಾವಣೆ ನಡೆದಿದ್ದು ಒಂದೂವರೆ ವರ್ಷ ಅಧಿಕಾರವಿಲ್ಲದೆಸದಸ್ಯರು ಕಂಗಾಲಾಗಿದ್ದರು, ಆದರೆ ಈಗ ಅಧ್ಯಕ್ಷ, ಉಪಾಧ್ಯಕ್ಷಚುನಾವಣೆಪ್ರಕಟಗೊಂಡಿದುಚುನಾವಣೆ ದಿನಾಂಕಕ್ಕಾಗಿ ಸದಸ್ಯರು ಕಾಯುತ್ತಿದ್ದಾರೆ. ಕಾಂಗ್ರೆಸ್‌ನಎಲ್ಲಾ ಸದಸ್ಯರ ಚಿತ್ತ ಸಂಸದ ಡಿ.ಕೆ.ಸುರೇಶ್, ಶಾಸಕ ಡಾ.ಎಚ್.ಡಿ.ರಂಗನಾಥ್ ಅವರತ್ತ ನೆಟ್ಟಿದೆ.
ರಂಗಸ್ವಾಮಿ ಅಧ್ಯಕ್ಷ ? : 25 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದು ನಾಲ್ಕು ಬಾರಿ ಗೆಲವು ಸಾಧಿಸಿರುವ ರಂಗಸ್ವಾಮಿ ಈ ಬಾರಿ ಅಧ್ಯಕ್ಷರಾಗುವ ಸಾಧ್ಯತೆಕಂಡುಬರುತ್ತಿದ್ದು, ಇದಕ್ಕೆ ರಾಮು, ಸಮೀವುಲ್ಲಾಅಡ್ಡಗಾಲಾಗಿದ್ದಾರೆ. ಸಂಸದ ಡಿ.ಕೆ.ಸುರೇಶ್, ಶಾಸಕ ಡಾ.ಎಚ್.ಡಿ.ರಂಗನಾಥ್ ಅವರುಕೈಗೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಮತ್ತೂಬ್ಬ ಅಧ್ಯಕ್ಷ ಆಕಾಂಕ್ಷಿ ಬಿ.ಎನ್.ಅರುಣ್ ಕುಮಾರ್ ತಿಳಿಸಿದ್ದಾರೆ.
–ಕೆ.ಎನ್.ಲೋಕೇಶ್